fbpx
ಸಮಾಚಾರ

ಕನ್ನಡ ಮಾಧ್ಯಮಗಳಿಗೆ ನಿರ್ಬಂಧ ಹೇರಿ ‘ಫೇಕ್ ಫ್ಯಾಕ್ಟರಿ’ಗೆ ವಿಸಿಟ್ ಕೊಟ್ಟ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್.

ಮಹಾಮಳೆ, ಭೂ ಕುಸಿತ, ಪ್ರವಾಹದಿಂದ ಕಂಗೆಟ್ಟಿದ್ದ ಕೊಡಗು ಜಿಲ್ಲೆಗೆ ಮೊನ್ನೆ ಆಗಮಿಸಿದ್ದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹಾನಿಗೊಳಗಾಗಿರುವ ಪ್ರದೇಶಗಳ ವೀಕ್ಷಣೆ ಮಾಡಿದ್ದರು, ಆದರೆ ಈ ವೇಳೆ ಸ್ಥಳಕ್ಕೆ ತೆರಳದಂತೆ ಕನ್ನಡ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿದ್ದು ಮಾಧ್ಯಮ ಪ್ರತಿನಿಧಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.. ತಮಗೆ ಬೇಕಾದ ಮಾಧ್ಯಮಗಳನ್ನು ಇಟ್ಟುಕೊಂಡು ಬೇರೆಲ್ಲವನ್ನೂ ನಿರ್ಬಂಧಿಸುವುದು ಸರಿಯಲ್ಲ. ಮಾಧ್ಯಮ ಪ್ರತಿನಿಧಿಗಳನ್ನು ನಿರ್ಬಂಧ ಮಾಡಿದರೆ ಜನರೂ ಕೂಡ ಸುಮ್ಮನೆ ಇರಲ್ಲ ಎಂದು ಸ್ಥಳೀಯರು ಎಂದು ಸಚಿವರ ನಡೆಗೆ ಸ್ಥಳೀಯರು ಕೂಡ ಕಿಡಿಕಾರಿದ್ದರು.

 

 

ಆದರೆ ಈ ವೇಳೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೇಕ್ ಸುದ್ದಿಗಳನ್ನು ಹರಡಿಸುವ ಕೆಲವೊಂದು ವೆಬ್ ಸೈಟ್’ಗಳ ಜೊತೆ ಮಾತುಕತೆ ನಡೆಸಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೌದು ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ, ಇತಿಹಾಸ ಮತ್ತು ಧರ್ಮದ ವಿಚಾರವಾಗಿ ಸುಳ್ಳು ಸುದ್ದಿ ಹರಡಿಸೋದಕ್ಕೆ ಖ್ಯಾತಿಯಾಗಿರೋ ಮತ್ತು ಇತ್ತೀಚಿಗೆ ತಾನೇ ಫೇಸ್ಬುಕ್ ನಿಂದ ಹೊರದಬ್ಬಿಸಿಕೊಂಡಿರೋ ‘ಪೋಸ್ಟ್ ಕಾರ್ಡ್’ ಸಂಸ್ಥೆಯ ಸಂಪಾದಕರನ್ನು ರಕ್ಷಣಾ ಸಚಿವರು ಭೇಟಿಯಾಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.. ರಾಜ್ಯಸಭೆಗೆ ಕರ್ನಾಟಕದಿಂದಲೇ ಆಯ್ಕೆಯಾಗಿ ಕನ್ನಡ ಮಾಧ್ಯಗಳಿಗೇ ನಿರ್ಬಂಧ ಹೇರುವ ರಕ್ಷಣಾ ಸಚಿವರು ಸುಳ್ಳು ಸುದ್ದಿ ಹರಡಿಸುವವರ ಜೊತೆ ಮಾತ್ರ ಯಾತಕ್ಕೆ ಮಾತುಕತೆ ನಡೆಸಿದ್ದಾರೆ ಎಂಬುದು ಸದ್ಯದ ಕುತೂಹಲವಾಗಿದೆ.

ಜೈನ ಮುನಿಯೊಬ್ಬರ ಮೇಲೆ ಮುಸ್ಲಿಂ ಯುವಕರು ಮಾರಣಾಂತಿಕ ಹಲ್ಲೆ ಮಾಡಿದರು ಎಂದು ಸುಳ್ಳು ಸುದ್ದಿ ಹರಡಿಸಿದ್ದಕ್ಕಾಗಿ ಇದರ ಸಂಪಾದಕರನ್ನು ಬಂಧನಗೊಳಿಸಿ ನಂತರ ಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದನ್ನೂ ಇಲ್ಲಿ ಸ್ಮರಿಸಬಹುದು..ಸುಮಾರು ಐದು ಲಕ್ಷ ಬೆಂಬಲಿಗರನ್ನು ಹೊಂದಿದ್ದ ‘ಪೋಸ್ಟ್‌ ಕಾರ್ಡ್’ ಫೇಸ್‌ಬುಕ್‌ ಪುಟವನ್ನು ಈಗಾಗಲೇ ಬಳಕೆದಾರರ ಹಿತಾಸಕ್ತಿಯ ದೃಷ್ಟಿಯಿಂದ ಫೇಸ್ಬುಕ್ ನಿಂದಲೇ ಕಿತ್ತೆಸೆಯಲಾಗಿದೆ. ಹೀಗಿದ್ದರೂ ತಮ್ಮ ರಾಜಕೀಯ ತೆವಲುಗಳಿಗಾಗಿ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಿ ಸಮಾಜದ ಸ್ವಾಸ್ತ್ಯ ಹಾಳು ಮಾಡುವ ಇಂತಹ ಹಲವು ಫೇಸ್‌ಬುಕ್ ಪುಟಗಳು ಮತ್ತು ಟ್ವಿಟರ್ ಖಾತೆಗಳನ್ನು ಸಚಿವರೇ ಪೋಷಿಸುತ್ತಿರುವುದು ನಿಜಕ್ಕೂ ದುರಂತ ಎಂಬ ಅಭಿಪ್ರಾಯಗಳು ಪ್ರಜ್ಞಾವಂತ ಜನರಲ್ಲಿ ವ್ಯಕ್ತವಾಗುತ್ತಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top