ಸಮಾಚಾರ

ನಿರ್ಮಲಾ ಸೀತಾರಾಮನ್ ವರ್ತನೆಗೆ ಸಿದ್ದರಾಮಯ್ಯ ಆಕ್ರೋಶ- ಕೊಡಗಿಗೆ ಅನುದಾನ ಬಿಡುಗಡೆಯಲ್ಲಿ ಕೇಂದ್ರ ಮಲತಾಯಿ ಧೋರಣೆ.

ಕೊಡಗು ಪ್ರವಾಹ ಭೇಟಿ ಸಂದರ್ಭದಲ್ಲಿ ಕೇಂದ್ರ ರಕ್ಷಣಾ ಖಾತೆ ಸಚಿವೆ ನಿರ್ಮಲಾ ಸೀತರಾಮನ್ ಅವರು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ ರಾ ಮಹೇಶ್ ಮೇಲೆ ಸಿಡಿಮಿಡಿಗೊಂಡ ವರ್ತನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಪಗೊಂಡಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ “ನಿರ್ಮಲಾ ಸೀತಾರಾಮನ್​ ವರ್ತನೆ ಕೇಂದ್ರದ ಮಲತಾಯಿ ಧೋರಣೆಗೆ ಸಾಕ್ಷಿ” ಎಂದು ಟೀಕಿಸಿದ್ದಾರೆ..

ಕೊಡಗು ಸಂತ್ರಸ್ತರ ಕಷ್ಟ ಆಲಿಸಲು ಬಂದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮ್​ ಪ್ರವಾಹದಿಂದ ಉಂಟಾದ ನಷ್ಟವನ್ನು ಅಂದಾಜು ಮಾಡುವುದಕ್ಕಿಂತ, ನಮ್ಮ ಸಚಿವರ ಮೇಲೆ ದಬ್ಬಾಳಿಕೆ ಮಾಡುವುದರಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದ್ದರು ಇದು ಕರ್ನಾಟಕದ ಬಗ್ಗೆ ಬಿಜೆಪಿಯ ಕೇಂದ್ರ ಸರ್ಕಾರಕ್ಕೆ ಇರುವ ಮಲತಾಯಿ ದೋರಣೆಯನ್ನು ತೋರಿಸುತ್ತದೆ.

“ನರೇಂದ್ರ ಮೋದಿಯವರು ರಾಜ್ಯದ ಬಗ್ಗೆ ಅಸಡ್ಡೆ ತೋರಿದ್ದಾರೆ, ಕೊಡಗಿಗೆ ಪರಿಹಾರ ಘೋಶಿವ ವಿಚಾರದಲ್ಲೂ ನಿರಾಸಕ್ತಿ ತೋರಿದ್ದಾರೆ.. ಜಿಲ್ಲೆಯಲ್ಲಿ ಉಂಟಾದ ಪ್ರವಾಹ ಬಗ್ಗೆ ರಕ್ಷಣಾ ಸಚಿವೆಯನ್ನು ಕಳುಹಿಸುವ ಬದಲು ಖುದ್ದು ಪ್ರಧಾನಿಯವರೇ ಬಂದು ಅವಲೋಕಿಸಬೇಕಿತ್ತು. ಮೋದಿ ಕೇರಳಕ್ಕೆ ಹೋಗಿ ಅಲ್ಲಿನ ಪರಿಸ್ಥಿತಿ ನೋಡಿ ಪರಿಹಾರ ವೀಕ್ಷಣೆ ಮಾಡಿದವರು ಇಲ್ಲಿಗೇಕೆ ಬರಲಿಲ್ಲ” ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top