ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಷೋ ಎಂಬ ಹೆಸರು ಗಿಟ್ಟಿಸಿರುವ ಬಿಗ್’ಬಾಸ್ ಕಾರ್ಯಕ್ರಮದ ಐದನೇ ಸೀಸನ್ ಮುಗಿದು ಇನ್ನೂ ಆರೇಳು ತಿಂಗಳುಗಳು ಮಾತ್ರವೇ ಸವೆದಿದೆ. ಹೀಗಿದ್ದರೂ ಅದಾಗಲೇ ಮತ್ತೊಂದು ಸೀಸನ್ನನ್ನು ಪ್ರಾರಂಭಿಸಲು ತೆರೆಮರೆಯಲ್ಲೇ ಕೆಲಸಗಳು ಬಿರುಸಿನಿಂದ ನಡೆಯುತ್ತಿವೆ.. ಒಂದಷ್ಟು ಮನರಂಜನೆಯ ಜೊತೆಗೆ ಸ್ಪರ್ಧಿಗಳ ನಡುವಿನ ರಂಪಾಟ, ಸಣ್ಣತನ, ಕಿರಿಕ್ಕುಗಳೇ ಜೀವಾಳವಾಗಿರೋ ಈ ಕಾರ್ಯಕ್ರಮದ ಬಗ್ಗೆ ಸಾಕಷ್ಟು ಜನರಿಗೆ ತಕರಾರಿದೆ. ಇದು ನಮ್ಮ ಕನ್ನಡ ನೆಲಕ್ಕೆ ಒಗ್ಗದ ಕಾನ್ಸೆಪ್ಟ್ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿರುತ್ತದೆ. ಇಂಥ ನೂರೆಂಟು ತಾತ್ಸಾರದ ಮಾತುಗಳ ನಡುವೆಯೂ ದೊಡ್ಡಮಟ್ಟದ ಪ್ರೇಕ್ಷಕರನ್ನು ಹೊಂದಿರೋ ಬಿಗ್ ಬಾಸ್ ಬರೋಬ್ಬರಿ ಐದು ಸೀಸನ್ನುಗಳನ್ನು ಮುಗಿಸಿ ಇದೀಗ ಆರನೇ ಬಾರಿಗೆ ಕನ್ನಡ ಪ್ರೇಕ್ಷಕರ ಬಳಿಗೆ ಲಗ್ಗೆಯಿಡುತ್ತಿದೆ..
ಬಿಗ್ ಬಾಸ್ ಸೀಸನ್ 6ರ ಪ್ರೋಮೊಶೂಟ್ ಅನ್ನು ಸುದೀಪ್ ಮುಗಿಸಿಕೊಟ್ಟಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಚಾನೆಲ್ ನಲ್ಲಿ ಪ್ರೋಮೋಗಳು ಪ್ರಸಾರವಾಗಲಿವೆ.. ಸದ್ಯ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಬಿಗ್ ಬಾಸ್ ಶೋನ ಆರನೇ ಅವತರಣಿಕೆಗೆ ಈಗಾಗಲೇ ಸ್ಪರ್ಧಿಗಳನ್ನು ಆಯ್ಕೆಯ ಪ್ರಕ್ರಿಯೆ ನಡೆಯುತ್ತಿದ್ದು ಅದಕ್ಕೆ ಸಂಭಂದಪಟ್ಟ ಕೆಲಸಗಳನ್ನೂ ಈಗಾಗಲೇ ಶುರುವಿಟ್ಟುಕೊಂಡಿದ್ದರಂತೆ..
ಒಟ್ಟಿನಲ್ಲಿ ಎಲ್ಲ ಅಂದುಕೊಂಡಂತೆ ಆದರೆ ಸೆಪ್ಟೆಂಬರ್ ಅಂತ್ಯದ ವೇಳೆಗೆ ಹೊಸ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಕಾಲಿಡೋದಂತೂ ಕನ್ಫರ್ಮ್ ಅಂತೇ. ಈ ಮೂಲಕ ಎಲ್ಲೋ ಒಂದಿಷ್ಟು ಮಂದಿ ಪ್ರತಿಭಾವಂತರು, ರಿಟೇರ್ಮೆಂಟ್ ಸ್ಟೇಜಿನ ಕಲಾವಿದರು ಮತ್ತು ಕೆಲವೊಂದಷ್ಟು ತಿಕ್ಕಲುತಾಣಗಳು, ಅಸಹ್ಯಕಾರಿ ಸಣ್ಣತನಗಳನ್ನು ಮತ್ತೊಮ್ಮೆ ನೋಡೋ ಕಾಲ ಬರುತ್ತಿದೆ..
The promo for the sixth season of Bigg Boss Kannada was shot on Sunday. Here is a short clip in which @KicchaSudeep busy in the shoot…#BBK6 #BiggBossKannada @KicchaFans24x7 @SIKSFA_Official #Sudeep pic.twitter.com/3BggQGMzrQ
— Prakash Upadhyaya (@prakash2upadhya) August 27, 2018
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
