fbpx
ಕಿರುತೆರೆ

ಗಣೇಶ್, ಯಶ್ ನಂತರ ‘ಕನ್ನಡದ ಕೋಟ್ಯಧಿಪತಿಗೆ ಬಂದ ಮತ್ತೊಬ್ಬ ಸ್ಟಾರ್ ಹೀರೋ ಯಾರು ಗೊತ್ತಾ?

ರಮೇಶ್ ಅರವಿಂದ್ ನಿರೂಪಣೆಯಲ್ಲಿ ಮೂಡಿವರುತ್ತಿರುವ ಕೋಟಿಗೆಲ್ಲುವ ಆಟದ ಓಟ ಅಡೆತಡೆಗಲ್ಲಿದೆ ಮುಂದುವರೆದಿದೆ ..ಕಾರ್ಯಕ್ರಮಕ್ಕೆ ಪ್ರತಿ ವಾರ ಒಬ್ಬೊಬ್ಬ ಸೆಲೆಬ್ರೆಟಿಗಳು ಅತಿಥಿಗಳಿಗೆ ಹೋಗುತ್ತಾರೆ ಆರಂಭದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಾಕಿಂಗ್ ಸ್ಟಾರ್ ಯಶ್ ಹಾಟ್ ಸೀಟ್ ಮೇಲೆ ಕೂತಿದ್ದರು. ಆದರೆ ಆನಂತರದಲ್ಲಿ ಕೇವಲ ಕಿರಿತೆರೆ ಕಲಾವಿದರು ಮಾತ್ರವೇ ಸೆಲೆಬ್ರೆಟಿಗಳ ಕೋಟಾದಲ್ಲಿ ಅತಿಥಿಗಳಾಗಿ ಹೋಗಿದ್ದರು.

 

 

ಗಣೇಶ್ ಮತ್ತು ಯಶ್ ಅವರನ್ನು ಹೊರತುಪಡಿಸಿದರೇ ಮತ್ಯಾವ ಸ್ಟಾರ್ ಹೀರೊಗಳು ಕೋಟ್ಯಧಿಪತಿಗೆ ಹೋಗಿರಲಿಲ್ಲ ಆದರೆ ಇದೀಗ ನಟರೊಬ್ಬರನ್ನ ವಿಶೇಷ ಸ್ಪರ್ಧಿಯಾಗಿಸುತ್ತಿದೆ. ಗಣೇಶ್ ಮತ್ತು ಯಶ್ ನಂತರ ಈಗ ಮೂರನೇ ಸ್ಟಾರ್ ಸ್ಪರ್ಧಿಯಾಗಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕೋಟ್ಯಧಿಪತಿಗೆ ಆಗಮಿಸಿದ್ದಾರೆ. ಸದ್ಯ ರಕ್ಷಿತ್ ಅತಿಥಿಯಾಗಿರುವ ಸಂಚಿಕೆ ಇದೇ ಈ ವಾರಾಂತ್ಯದಲ್ಲಿ ಪ್ರಸಾರವಾಗುವ ಸಾಧ್ಯತೆಯಿದ್ದು ಅದಾಗಲೇ ಒಂದೆರಡು ಪ್ರೋಮೋಗಳು ರಿವೀಲ್ ಆಗಿವೇ

ಅಂದಹಾಗೆ ಕಾರ್ಯಕ್ರಮದಲ್ಲಿ ಯಶ್ 25 ಲಕ್ಷ ಮತ್ತು ಗಣೇಶ್ 12.5 ಲಕ್ಷ ಗೆದ್ದಿದ್ದರು. ಇದೀಗ, ರಕ್ಷಿತ್ ಶೆಟ್ಟಿ ಎಷ್ಟು ಹಣ ಗೆಲ್ಲುತ್ತಾರೆ ಎಂದು ಕಾದುನೋಡಬೇಕಿದೆ. ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮಕ್ಕೆ ಬರುವ ಪ್ರತಿ ಸೆಲೆಬ್ರೆಟಿಗಳು ತಾವು ಗೆದ್ದ ಜನವನ್ನು ಉತ್ತಮ ಕೆಲ್ಸಕ್ಕೆ, ದೇಣಿಗೆಗೆ ಬಳಸಿರುವುದು ವಿಶೇಷ..ರಕ್ಷಿತ್ ಅವರು ಆ ಹಣವನ್ನು ಯಾವ ಕಾರ್ಯಕ್ಕೆ ಬಳಸುತ್ತಾರೆ ಎನ್ನುವುದು ಕೂಡ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ,

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top