fbpx
ಸಮಾಚಾರ

ಬರೀ 15 ರೂಪಾಯಿಗೆ ಹೆಲಿಕ್ಯಾಪ್ಟರ್ ರೈಡ್ ಅಂತೇ,ಆಶ್ಚರ್ಯ ಪಡ್ಬೇಡಿ ,ಕಂಪ್ಲೀಟ್ ಸ್ಟೋರಿ ನೀವೇ ನೋಡಿ

ಹೆಲಿಕಾಫ್ಟರ್ ಪ್ರಯಾಣ ಸಾರ್ವಜನಿಕ ವಿಮಾನ ಪ್ರಯಾಣಕ್ಕಿನಲ್ಲೂ ದುಬಾರಿ ಎನ್ನುವುದು ನಿಮಗೆಲ್ಲ ಗೊತ್ತಿರುವ ವಿಚಾರ, ಆದ್ದರಿಂದಲೇ ವಿಐಪಿ ಗಳು ಮಾತ್ರ ಹೆಚ್ಚಾಗಿ ಹೆಲಿಕಾಫ್ಟರ್ ಬಳಕೆ ಮಾಡುತ್ತಾರೆ. ಬಹಳ ಅಸೆ ಇದ್ದ ಜನರು ಯಾವಾಗಲಾದರೂ ಹೆಲಿ ಟೂರಿಸಂ ಆಯೋಜಿಸಿದಾಗ 5 -10 ಸಾವಿರ ನೀಡಿ ಒಂದು ಸುತ್ತು ಹೊಡೆದು ಸುಮ್ಮನಾಗುತ್ತಾರೆ. ಆದರೆ ನಿಮಗೆ ಅಚ್ಚರಿ ಮೂಡುವಂತೆ ಅಲ್ಲಿ ಹೆಲಿಕಾಫ್ಟರ್ ಪ್ರಯಾಣ ಕೇವಲ 15 ರೂಪಾಯಿ. ಅದು ಹೇಗೆ ಸಾಧ್ಯ ಅಂತ ಯೋಚನೆ ಮಾಡುತ್ತಿದ್ದೀರಾ ಮುಂದೆ ಓದಿ.

ಕೆಲವು ದಿನಗಳ ಹಿಂದೆ ಪಾಕಿಸ್ತಾನದ ನೂತನ ಮಾಹಿತಿ ಸಚಿವ ಫಹಾದ್ ಚೌಧರಿ ರವರು ಪಾಕಿಸ್ತಾನದ ಜನರಿಗೆ ಹೆಲಿಕ್ಯಾಪ್ಟರ್ ಪ್ರಯಾಣ ಪ್ರತಿ ಕಿಲೋಮೀಟರ್ಗೆ 55 ರೂಪಾಯಿ ಆಗುತ್ತದೆ ಅನ್ನೋ ಹೇಳಿಕೆ ಕೊಟ್ಟಿದ್ದರು. ಇತ್ತೀಚೆಗಷ್ಟೆ ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮರುದಿನವೇ ಇಮ್ರಾನ್ ಖಾನ್ ತಮ್ಮ ಮನೆಯಿಂದ ಪಾಕಿಸ್ತಾನದ ಶಾಸಕಾಂಗ ಸಭೆಗೆ ಹೆಲಿಕ್ಯಾಪ್ಟರ್ ನಲ್ಲಿ ಆಗಮಿಸಿದ್ದರು. ಆ ಪ್ರಯಾಣಕ್ಕೆ ಪ್ರತಿ ಕಿಲೋಮೀಟರ್ಗೆ ಖರ್ಚಾಗಿದ್ದು ಕೇವಲ 50-55 ರೂಪಾಯಿ ಅನ್ನೋದನ್ನ ಹೇಳಿದ್ದರು.

 

ಈ ವಿಡಿಯೋ ನೋಡಿ:

 

ಇದನ್ನೇ ಟ್ರೊಲ್ ಮಾಡಲು ಶುರು ಮಾಡಿರುವ ಪಾಕಿಸ್ತಾನ ಜನರು ಒಂದು ಡಮ್ಮಿ ಹೆಲಿಕಾಫ್ಟರ್ ವಿಡಿಯೋ ಪೋಸ್ಟ್ ಮಾಡಿ 15 ರೂಪಾಯಿಗೆ ಹೆಲಿಕ್ಯಾಪ್ಟರ್ ಎಂದು ಬರೆದು ಟ್ರೊಲ್ ಮಾಡಲು ಶುರು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣ ವಿಚಾರ್ಲ್ ಆಗಿದ್ದು ಎಲ್ಲರನ್ನು ನಕ್ಕು ನಲಿಸುವಂತೆ ಮಾಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top