fbpx
ಸಮಾಚಾರ

ಹುಚ್ಚು ನಾಯಿ ಕಚ್ಚಿದಾಗ ಅನುಸರಿಸಬೇಕಾದ ಪ್ರಥಮ ಚಿಕಿತ್ಸೆ ಬಗ್ಗೆ ತಪ್ಪದೆ ತಿಳಿದುಕೊಳ್ಳಿ

ನಾಯಿ ಮಾನವನ ನಂಬಿಗಸ್ಥ ಪ್ರಾಣಿಯಾಗಿದೆ. ಹಲವಾರು ಜನ ನಾಯಿಯನ್ನು ಸಾಕುತ್ತಾರೆ. ನಾಯಿಯು ಮಾಲೀಕನ ಮಾತನ್ನು ಕೇಳುವ, ಆಜ್ಞೆಯನ್ನು ಪಾಲಿಸುವ ನಿಯತ್ತಿನ ಪ್ರಾಣಿಯಾಗಿದೆ. ಆದರೆ ದೇಶದಲ್ಲಿ ಬಹುಪಾಲು ಸಂಖ್ಯೆಯಲ್ಲಿ ಬೀದಿ ನಾಯಿಗಳಿದ್ದು ಇವುಗಳು ರೇಬಿಸ್ ರೋಗದ ವಿರುದ್ದ ಚುಚ್ಚು ಮದ್ದು ಹೊಂದಿರುವುದಿಲ್ಲ. ಹಾಗಾಗಿ ಬೀದಿ ನಾಯಿಗಳು ಹಾಗು ರೇಬಿಸ್ ಲಸಿಕೆ ಪಡೆಯದ ನಾಯಿಗಳು ಕಚ್ಚಿದರೆ ಸೂಕ್ತ ಚಿಕಿತ್ಸೆ ಅವಶ್ಯಕ,

ಇನ್ನು ರಾತ್ರಿ ಪಾಳಯದಲ್ಲಿ ಕೆಲಸ ಮಾಡುವವರು ನಾಯಿಯಿಂದ ಹಲವಾರು ಬಾರಿ ಕಚ್ಚಿಸಿಕೊಳುತ್ತಾರೆ. ಕೂಡಲೇ ವೈದ್ಯರ ಬಳಿ ತೆರಳಿ ರೇಬಿಸ್ ನಿರೋಧಕ ಲಸಿಕೆಯನ್ನು ತೆಗೆದುಕೊಳ್ಳಬೇಕು. ಇಲ್ಲದೆ ಹೋದರೆ ರೇಬಿಸ್ ಬರುವ ಸಾಧ್ಯತೆ ಇರುತ್ತದೆ. ದೇಶದಲ್ಲಿ ನಾಯಿ ಕಚ್ಚಿಸಿಕೊಂಡಿರುವ ಅನೇಕರು ರೇಬಿಸ್ ಲಸಿಕೆ ಪಡೆಯದೇ ತೊಂದರೆ ಅನುಭವಿಸುತ್ತಿದ್ದಾರೆ.

ಹಾಗಾದರೆ ಹುಚ್ಚು ನಾಯಿ ಕಡಿದಾಗ ಅನುಸರಿಸಬೇಕಾದ ಪ್ರಥಮ ಚಿಕಿತ್ಸೆ ಬಗ್ಗೆ ತಿಳಿದುಕೊಳ್ಳಿ( ಈ ಪ್ರಥಮ ಚಿಕಿತ್ಸೆ ಅನುಸರಿಸಿದರು ಕೂಡ ವೈದ್ಯರ ತಪ್ಪದೆ ಹೋಗಲೇಬೇಕು)

 

 

ನಾಯಿ ಕಡಿದ ಸಂಧರ್ಭದಲ್ಲಿ ಕಚ್ಚಿದ ಜಾಗವನ್ನು ವೇಗವಾಗಿ ನೀರು ಬಿಟ್ಟು ತೊಳೆಯಬೇಕು, ಜೊತೆ ಸೋಪು ಹಚ್ಚಿ ಚೆನ್ನಾಗಿ ತಿಕ್ಕಬೇಕು. ಯಾವುದೇ ಸೋಪು ಇದ್ದರು ಪರವಾಗಿಲ್ಲ. ರೇಬಿಸ್ ವೈರಸ್ಸಿನ ಹೊರ ಮೈ ಕೊಬ್ಬಿನಿಂದಾಗಿರುತ್ತದೆ. ಸೋಪು ಈ ಕೊಬ್ಬನ್ನು ನಾಶಮಾಡಬಲ್ಲದು. ಕೊಬ್ಬಿನ ಪದರ ನಾಶವಾದರೆ ವೈರಸ್ ಸಾಯುತ್ತದೆ.

ನಾಯಿ ಕಚ್ಚಿ ಗಾಯವಾದ ಜಾಗಕ್ಕೆ ಸರ್ಜಿಕಲ್ ಸ್ಪಿರಿಟ್, ಟಿಂಕ್ಚರ್ ಅಯೋಡಿನ್, ಪೊವಿಡೋನ್ ಅಯೋಡಿನ್ ಮುಂತಾದವನ್ನು ಹಚ್ಚಿ. ಈ ಔಷಧಗಳು ರೇಬಿಸ್ ವೈರಸ್ಸನ್ನು ಸಾಯಿಸಬಲ್ಲವು. ಇವು ಸಿಗದಿದ್ದಲ್ಲಿ ಬ್ರಾಂಡಿ, ವಿಸ್ಕಿ, ರಮ್ ಗಳಿಂದಲೂ ಗಾಯವನ್ನು ತೊಳೆಯಬಹುದು.

ಗಾಯಕ್ಕೆ ಹೊಲಿಗೆ ಹಾಕಬೇಡಿ, ಧೂಳು ಬೀಳದಂತೆ ತೆಳುವಾದ ಬಟ್ಟೆ ಕಟ್ಟಿ, ಕೂಡಲೇ ವೈದ್ಯರ ಬಳಿ ಹೋಗಿ. ವೈದ್ಯರು ಹೊಲಿಗೆ ಹಾಕಬೇಕೆ ಬೇಡವೇ ಎಂದು ನಿರ್ಣಯ ಮಾಡುತ್ತಾರೆ, ಜೊತೆಗೆ ಆಂಟಿ ರೇಬಿಕ್ ಸೀರಂ ಕೊಡಬೇಕೇ ಎಂಬುದನ್ನು ಕೂಡ ವೈದ್ಯರು ನಿರ್ಣಯಿಸುತ್ತಾರೆ.

ಇದಾದ ಬಳಿಕ ವೈದ್ಯರ ಬಳಿ ತಪ್ಪದೆ ಭೇಟಿ ನೀಡಿ, ನಿರ್ಲಕ್ಷ್ಯ ಮಾಡಿಬೇಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top