fbpx
ಸಮಾಚಾರ

ಸರ್ಪ ದೋಷ ಹಾಗೂ ಇನ್ನೂ ಹಲವು ಸಮಸ್ಯೆಗಳನ್ನು ಮಾಯಮಾಡುತ್ತೆ ಈ ವಸ್ತು

ಕರ್ಪೂರವು ದೇವರ ಪೂಜೆಯಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. ದೇವರಿಗೆ ಪ್ರಿಯವಾದ ಕರ್ಪೂರದ ಆರತಿ‌ ದೇವರಿಗೆ ಅತ್ಯಂತ ಶ್ರೇಷ್ಠ. ಮನೆಗಳಲ್ಲಿಯೂ ಸಹ ದೇವರ ಪೂಜೆಗೆ ಕರ್ಪೂರವನ್ನು ಉಪಯೋಗಿಸುತ್ತೇವೆ. ಅಲ್ಲದೆ ಇದರ ಹಲವು ಔಷಧೀಯ ಗುಣಗಳು ಹಲವು ಆರೋಗ್ಯ ತೊಂದರೆಗಳನ್ನು ನಿವಾರಿಸಲು ಬಳಸಲಾಗುತ್ತದೆ. ಇನ್ನು ಈ ಕರ್ಪೂರದ ಮಹತ್ವ ತಿಳಿದರೆ ನೀವು ಅಚ್ಚರಿ ಪಡದೇ ಇರುವುದಿಲ್ಲ. ಉಪಯುಕ್ತಕರ ಮಾಹಿತಿ ಇಲ್ಲಿದೆ ನೋಡಿ.

ಕರ್ಪೂರದ ಆರತಿಯಿಂದ ಪೂಜೆ ಮಾಡುವುದರಿಂದ ನಕಾರಾತ್ಮಕ ಶಕ್ತಿಗಳು ಹೋಗುತ್ತವೆ ಎಂಬ ನಂಬಿಕೆ ಇದೆ. ಪೂಜೆಯ ಬಳಿಕ ಆರತಿ ವೇಳೆ ಕರ್ಪೂರವನ್ನು ಹಚ್ಚಿಡಲಾಗುತ್ತದೆ. ಇದು ಎಲ್ಲಾ ನಕಾರಾತ್ಮಕ ಶಕ್ತಿ ಮತ್ತು ಅಶುದ್ಧತೆಯನ್ನು ವಾತಾವರಣದಿಂದ ದೂರ ಮಾಡುವುದೆಂದು ನಂಬಿಕೆ ಇದೆ.

 

 

ಅನೇಕ ಜನರ ಮನೆಯಲ್ಲಿ ವಾಸ್ತು ದೋಷ ಸಮಸ್ಯೆ ಇರುತ್ತದೆ. ಇದಕ್ಕಾಗಿ ಹಲವು ಪೂಜೆ‌ ಪುನಸ್ಕಾರ ಮಾಡುತ್ತಿರುತ್ತಾರೆ. ಕರ್ಪೂರವನ್ನು ವಾಸ್ತುದೋಷವಿರುವ ಮನೆಯಲ್ಲಿ ಪ್ರತಿದಿನ‌ ಬೆಳಗಿದರೆ ವಾಸ್ತುದೋಷ ನಿಧಾನವಾಗಿ ದೂರ ಆಗುತ್ತದೆ.

ಇಷ್ಟೇ ಅಲ್ಲದೆ ಕರ್ಪೂರದ ಆರತಿಯು ಅತ್ಯಂತ ಶ್ರೇಷ್ಠ. ಆದ್ದರಿಂದ ಕರ್ಪೂರದ ಆರತಿ ತೆಗೆದುಕೊಳ್ಳುವುದರಿಂದ ಹಲವು ಆರೋಗ್ಯಕಾರಿ ಲಾಭಗಳನ್ನು ಪಡೆಯಬಹುದು ಎಂದು ತಿಳಿದು ಬಂದಿದೆ.

ಕರ್ಪೂರವು ಇನ್ನೊಂದು ಮಹತ್ವವಾಗಿರುವ ಗುಣವನ್ನು ಹೊಂದಿದೆ, ಜನ್ಮಕುಂಡಲಿಯಲ್ಲಿ ಗೃಹಗಳು ಸರಿಯಾದ ಸ್ಥಾನದಲ್ಲಿ ಇಲ್ಲದೆ ಇರುವ ಕಾರಣದಿಂದಾಗಿ ಕೆಲವರಿಗೆ ಕಾಲಸರ್ಪದೋಷ, ಪಿತೃ ದೊಷ ಇತ್ಯಾದಿ ಕಂಡುಬರುವುದು. ಇದಕ್ಕೆ ಕಾರಣವಾಗಿರುವಂತಹ ಗ್ರಹಗಳನ್ನು ಸಮಾಧಾನ ಪಡಿಸಲು ಕರ್ಪೂರವು ನೆರವಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top