fbpx
ಸಮಾಚಾರ

ಅಪ್ಸರೆಯರ ಲೋಕ,ದೇವಲೋಕದ ಅಪ್ಸರೆಯರು ಇರುವುದು ಎಲ್ಲಿ ಗೊತ್ತಾ

ನಾವು ಅಪ್ಸರೆಯ ಬಗ್ಗೆ ಬಣ್ಣನೆಯನ್ನು ಸಿನಿಮಾದಲ್ಲಿ ನೋಡಿರುತ್ತೀವಿ, ಪುಸ್ತಕ ಓದಿ ತಿಳಿದುಕೊಂಡಿರುತ್ತೀವಿ. ಇನ್ನು ಅಪ್ಸರೆಯರೇ ಧರೆಗಿಳಿದು ಬಂದರೆ ಹೇಗೆ ಎಂದು ನಾವು ಯೋಚನೆ ಮಾಡಿರುತ್ತೇವೆ. ಆದರೆ ನಿಜಕ್ಕೂ ಅಪ್ಸರೆಯರು ಹೇಗೆ ಇರುತ್ತಾರೆ ಎಂಬುದು ಯಾರಿಗೂ ಗೊತ್ತಿಲ್ಲ.

ಆದರೆ ಈ ಪ್ರದೇಶದಲ್ಲಿ ಅಪ್ಸರೆಯರು ಇದ್ದಾರೆ ಎನ್ನುವ ನಂಬಿಕೆ ಇದೆ. ಹಾಗಾದರೆ ಯಾವುದು ಆ ಸ್ಥಳ ಎಂಬುದನ್ನು ನೋಡೋಣ ಬನ್ನಿ. ಸಮುದ್ರ ಮಟ್ಟದಿಂದ 10 ಸಾವಿರ ಅಡಿ ಎತ್ತರದಲ್ಲಿ ಇರುವ ಈ ಪ್ರದೇಶವನ್ನು ಅಪ್ಸರ ಲೋಕ ಎಂದು ಕರೆಯುತ್ತಾರೆ. ನಾವಿಂದು ಅಪ್ಸರ ಲೋಕದ ಅಪ್ಸರೆಯರ ಬಗ್ಗೆ ತಿಳಿಸಲಿದ್ದೇವೆ. ಹಿಮಾಲಯದ ಪರ್ವತದ “ಕೈಟ್‌ ಪರ್ವತ”ದಲ್ಲಿ ಈ ಅಪ್ಸರೆಯರು ವನದೇವಿಯ ರೂಪದಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ.

 

 

ಮೂಲಗಳ ಮಾಹಿತಿ ಪ್ರಕಾರ ಭೃಂಗ ನದಿತೀರದಲ್ಲಿ ಇರುವ ಕೈಟ್ ಪರ್ವತದಲ್ಲಿ ಅಪ್ಸರೆಯರು ಬಂದು ಹೋಗುತ್ತಾ ಇರುತ್ತಾರೆ ಎನ್ನುವ ನಂಬಿಕೆ ಇದೆ. ಈ ಪರ್ವತ ಶ್ರೇಣಿಯಲ್ಲಿ ಸುಮಾರು 9 ಅಪ್ಸರೆಯರು ನೆಲೆಸಿದ್ದಾರೆ ಎಂದು ತಿಳಿದು ಬಂದಿದೆ. ಈ 9 ಅಪ್ಸರೆಯರು ಆ ಪರ್ವತದಲ್ಲಿ ಓಡಾಡುತ್ತಿದ್ದಾರೆ ಎಂದು ಸ್ಥಳೀಯರು ನಂಬಿದ್ದಾರೆ. ಅಲ್ಲಿ ಪ್ರಕೃತಿ ವಿರೋಧವಾದ ಯಾವುದೇ ಕೆಲಸ ಮಾಡುವಂತಿಲ್ಲ ಎಂದು ತಿಳಿದು ಬಂದಿದೆ

ಇಲ್ಲಿಯ ಅಚ್ಚರಿಯ ವಿಷಯದ ಬಗ್ಗೆ ನಿಮಗೆ ತಿಳಿಸಲೇ ಬೇಕು, ಇಲ್ಲಿ ಯಾರು ಕೂಡ ಒಬ್ಬಂಟಿಯಾಗಿ ಹೋಗಬಾರದು ಎನ್ನಲಾಗುತ್ತಿದೆ. ಆ ಪರ್ವತದ ಬಳಿ ಹೊಳೆಯುವ ಬಟ್ಟೆ ಹಾಕಿಕೊಂಡರೆ , ಸುಂದರ ಪುರುಷರು ಅದರ ಬಳಿ ಹೋದರೆ ಅಪ್ಸರೆಯರು ಅವರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುತ್ತೆ ಎಂದು ಅಲ್ಲಿನ ಸ್ಥಳೀಯರು ನಂಬಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top