fbpx
ಸಮಾಚಾರ

ಬಹಳ ಸುಂದರವಾಗಿ ಇರೋ ಕೋರಿಯನ್ ಬ್ಯೂಟಿ’ ಸಿಕ್ರೇಟ್ಸ್ ಏನ್ ಅಂತೇ ಗೊತ್ತಾ

ನೀವು ಯಾವಾಗಲಾದರೂ ಕೊರಿಯನ್ ಮಹಿಳೆಯರನ್ನು ನೋಡಿದ್ದೀರಾ? ಅವರನ್ನು ನೀವು ಇಷ್ಟ ಪಡ್ತಿರಾ? ನೀವು ಅವರನ್ನು ನೋಡಿದರೆ ನಿಜವಾಗಲೂ ತುಂಬಾ ಇಷ್ಟಪಡುತ್ತೀರಿ. ಏಕೆಂದರೆ ಅವರ ತ್ವಚೆಯು ಅನನ್ಯ ಹೊಳಪು ಹಾಗೂ ಆಕರ್ಷಣೆಯಿಂದ ಕೂಡಿರುತ್ತದೆ. ಅವರ ಚರ್ಮವು ನೈಸರ್ಗಿಕವಾಗಿಯೇ ಸೌಂದರ್ಯವನ್ನು ಹೆಚ್ಚಿಸುತ್ತದೆ. ಅಂದಹಾಗೆ ಇವರ ಹೊಳೆಯುವ ಸುಂದರವಾದ ಚರ್ಮದ ರಹಸ್ಯ ಈಗ ಬಯಲಾಗಿದೆ.

ಸ್ಟೀಮ್ ಮಸಾಜ್:
ಮೂಲಗಳ ಮಾಹಿತಿ ಪ್ರಕಾರ ಕೊರಿಯನ್ ಮಹಿಳೆಯರು ವಾರಕ್ಕೆ ಎರಡು ಬಾರಿ ಸ್ಟೀಮ್ ಮಸಾಜ್ ಮಾಡಿಕೊಳ್ಳುತ್ತಾರೆ. ಇದರಿಂದ ಅವರ ಸುಂದರ ತ್ವಚೆ ಮತ್ತಷ್ಟು ಹೊಳಪಿನಿಂದ ಕಂಗೊಳಿಸುತ್ತದೆ.

ಕಣ್ಣಿನ ಕ್ರೀಮ್ ಬಳಕೆ:
ಕೊರಿಯನ್ ಮಹಿಳೆಯರು ಕಣ್ಣಿನ ಮಾಸ್ಕ್ ಬಳಕೆ ಮಾಡುತ್ತಾರೆ. ಅದು ಅವರಿಗೊಂದು ಆಯ್ಕೆಯ ವಿಚಾರವಲ್ಲ. ಕಣ್ಣಿನ ಬಗ್ಗೆ ಸಾಕಷ್ಟು ಕಾಳಜಿಯನ್ನು ವಹಿಸುತ್ತಾರೆ. ಜೊತೆಗೆ ಕಣ್ಣಿನ ಕೆಳಗೆ ಉಂಟಾದ ಕಪ್ಪು ಭಾಗಕ್ಕೆ ಐ ಕ್ರೀಮ್ ಕೂಡ ಬಳಕೆ ಮಾಡುತ್ತಾರೆ.

 

 

ಫೇಸ್ ಮಾಸ್ಕ್
ಫೇಸ್ ಮಾಸ್ಕ್ ತ್ವಚೆಯಲ್ಲಿರುವ ನಿರ್ಜೀವ ತ್ವಚೆಯನ್ನು ಹೋಗಲಾಡಿಸಿ, ಮುಖದ ಅಂದ ಹೆಚ್ಚಿಸುವಲ್ಲ ಸಹಕಾರಿಯಾಗಿದೆ. ರಾತ್ರಿ ಮಲಗುವಾಗ ಫೇಸ್ ಮಾಸ್ಕ್ ಧರಿಸಿ ಮುಂಜಾನೆ ಎದ್ದು ಇದನ್ನು ತೆಗೆಯುವುದಿರಂದ ಮಗುವಿನಂತ ಸುಂದರ ತ್ವಚೆಯನ್ನು ಪಡೆಯಬಹುದು ಎನ್ನುತ್ತಾರೆ ಕೋರಿಯನ್ ಬ್ಯೂಟಿ ಎಕ್ಸ್ ಪರ್ಟ್.

ಎಸ್‍ಪಿಎಫ್
ಕೊರಿಯನ್ಸೂ ಮಹಿಳೆಯರು ಸೂರ್ಯನ ಕಿರಣಕ್ಕೆ ತೆರೆದುಕೊಳ್ಳುವ ಮುನ್ನ ಎಸ್‍ಪಿಎಫ್ ಕ್ರೀಮ್ ಅನ್ನು ಅನ್ವಯಿಸುವುದನ್ನು ಮರೆಯೋಲ್ಲ. ಇದರಿಂದ ದಿನನಿತ್ಯ ಸೂರ್ಯನ ಕಿರಣದಿಂದ ಉಂಟಾಗುವ ಹಾನಿಯು ಚರ್ಮದ ಮೇಲೆ ಉಂಟಾಗದು. ಕೊರಿಯನ್ ಮಹಿಳೆಯರು ಈ ಕ್ರಮವನ್ನು ನಿತ್ಯ ಅನ್ವಯಿಸುವುದರಿಂದ ತಮ್ಮ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುವರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top