fbpx
ಸಮಾಚಾರ

15 ವರ್ಷದ ನಂತ್ರ ನಂಬರ್ 1 ಸ್ಥಾನ ಕಳ್ಕೊಂಡ ಏರ್ಟೆಲ್, ಹಾಗಾದ್ರೆ ನಂಬರ್ 1 ಯಾರು

ಭಾರತದ ದೂರಸಂಪರ್ಕ ಕ್ಷೇತ್ರದಲ್ಲಿ ಅತಿದೊಡ್ಡ ಸಂಸ್ಥೆಯಾಗಿ ಕಳೆದ ಹದಿನೈದು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಏರ್ಟೆಲ್ ಮೊದಲ ಸ್ಥಾನ ಕಳೆದುಕೊಂಡಿದೆ. ವೋಡಾಫೋನ್ ಹಾಗು ಐಡಿಯಾ ನಡುವಿನ ವಿಲೀನಕ್ಕೆ ನ ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್ (ಎನ್ ಸಿಎಲ್ ಟಿ) ಒಪ್ಪಿಗೆ ಸೂಚಿಸಿದೆ. ಈ ಮುಖೇನ 40.80 ಕೋಟಿ ನೋಂದಾವಣೆದಾರರನ್ನು ಹೊಂದಿರುವ ಭಾರತದ ಅತೀ ದೊಡ್ಡ ಟೆಲಿಕಾಂ ಸೇವಾ ಪೂರೈಕೆದಾರ ಸಂಸ್ಥೆ ಸೃಷ್ಟಿಯಾಗಿದೆ ಎಂದು ತಿಳಿದು ಬಂದಿದೆ.

ಟೆಲಿಕಾಂ ಮಾರುಕಟ್ಟೆಯಲ್ಲಿ ಶೇ 23ರಷ್ಟು ಪಾಲು ಹೊಂದಿರುವ ವೊಡಾಫೋನ್ ಹಾಗೂ ಶೇ 19ರಷ್ಟು ಪಾಲು ಹೊಂದಿರುವ ಐಡಿಯಾ ಒಂದಾಗಿದ್ದು, ಇನ್ಮುಂದೆ ವೋಡಾಫೋನ್ ಐಡಿಯಾ ಎಂದು ಕರೆಯಲ್ಪಡುತ್ತದೆ. ಮಾರ್ಚ್ 2017ರಿಂದ ಆರಂಭವಾದ ವಿಲೀನ ಪ್ರಕ್ರಿಯೆಗೆ ಈಗ ಅಂತಿಮ ರೂಪ ಸಿಕ್ಕಿದೆ ಎಂದು ತಿಳಿದು ಬಂದಿದೆ. ಇನ್ನು ನೂತನ ಆಡಳಿತ ಮಂಡಳಿಯು ಬಲೇಶ ಶರ್ಮಾ ಅವರನ್ನು ಸಿಇಓ ಆಗಿ ನೇಮಕ ಮಾಡಿರುವುದಾಗಿ ಜಂಟಿ ಪ್ರಕಟನೆ ತಿಳಿಸಿದೆ ಎಂದು ತಿಳಿದು ಬಂದಿದೆ.

 

 

ಐಡಿಯಾ ಷೇರು ದರದಲ್ಲಿ ಏರಿಕೆ ಕಂಡು ಬಂದಿದೆ. ಶುಕ್ರವಾರ ಐಡಿಯಾ ಷೇರಿನಲ್ಲಿ ಶೇಕಡಾ 1.81 ರಷ್ಟು ಹೆಚ್ಚಳ ಕಂಡು ಬಂದಿದೆ. ಷೇರು ಬೆಲೆ 50.75 ರೂಪಾಯಿಯಾಗಿದೆ. ಇತ್ತ ಏರ್ಟೆಲ್ ಷೇರಿನಲ್ಲಿ ಶೇಕಡಾ 0.25 ರಷ್ಟು ಇಳಿಕೆ ಕಂಡು ಬಂದಿದೆ. ಏರ್ಟೆಲ್ ಷೇರಿನ ಬೆಲೆ 382.75 ರೂಪಾಯಿಯಾಗಿದೆ ಎಂದು ತಿಳಿದು ಬಂದಿದೆ. ಕಳೆದ 15 ವರ್ಷಗಳಿಂದ ಟೆಲಿಕಾಂ ಕ್ಷೇತ್ರದಲ್ಲಿ ಏರ್ಟೆಲ್ ನಂಬರ್ ಒನ್ ಸ್ಥಾನದಲ್ಲಿ ಇತ್ತು. ಆದ್ರೀಗ ಐಡಿಯಾ, ವೋಡಾಫೋನ್ ವಿಲೀನ ಕಂಪನಿ ಮೊದಲ ಸ್ಥಾನಕ್ಕೇರಿದೆ. ಈ ಎರಡೂ ಕಂಪನಿ ಒಂದಾದ ಮೇಲೆ ಒಟ್ಟೂ 44 ಕೋಟಿ ಗ್ರಾಹಕರನ್ನು ಅದು ಹೊಂದಿದೆ. ಇನ್ನು ವೊಡಾಫೋನ್, ಜಿಯೋ ಹಾಗು ಏರ್ಟೆಲ್ ಮಧ್ಯೆ ತೀವ್ರ ಪೈಪೋಟಿ ನಡೆಯಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top