fbpx
ಸಮಾಚಾರ

ಚೇಸಿಂಗ್​ ಸ್ಟಾರ್ ಕೊಹ್ಲಿಯಿಂದ ಇಂಗ್ಲೆಂಡ್​​ನಲ್ಲಿ ಮತ್ತೊಂದು ಹೊಸ ದಾಖಲೆ

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ ನಲ್ಲಿ 6000 ರನ್‌ ಗಳ ಮೈಲುಗಲ್ಲನ್ನು ತಲುಪಿದ್ದಾರೆ ಎಂದು ತಿಳಿದು ಬಂದಿದೆ. ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಈ ಸ್ಮರಣೀಯ ಮೈಲುಗಲ್ಲು ತಲುಪಿದ್ದಾರೆ. ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 6000 ರನ್‌ ಗಳನ್ನು ಪೂರೈಸುವ ಮೂಲಕ ಅತಿ ವೇಗವಾಗಿ 6 ಸಾವಿರ ರನ್ ಪೂರೈಸಿದ ಎರಡನೇ ಭಾರತೀಯ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ತಿಳಿದು ಬಂದಿದೆ.

ಈ ಮುಖೇನ ಮಾಜಿ ದಿಗ್ಗಜ ಸುನಿಲ್ ಗವಾಸ್ಕರ್ ನಂತರ ಅತಿ ವೇಗದಲ್ಲಿ 6000 ರನ್ ಗಳಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಗೌರವಕ್ಕೆ ಪಾತ್ರವಾಗಿದ್ದಾರೆ ಎಂದು ತಿಳಿದು ಬಂದಿದೆ. ಪ್ರಾರಂಭಿಕ ಆಟಗಾರರಾಗಿರುವ ಶಿಖರ್​ ಧವನ್​ ವಿಕೆಟ್​ ಉರುಳುತ್ತಿದ್ದಂತೆ ಮೈದಾನಕ್ಕಿಳಿದ ವಿರಾಟ್​ ಕೊಹ್ಲಿ ಆರು ರನ್​ ಗಳಿಸುವಮೂಲಕ ಟೆಸ್ಟ್​​ನಲ್ಲಿ 6 ಸಾವಿರ ರನ್​ಗಳಿಕೆ ಮಾಡಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

 

ವಿರಾಟ್ ಕೊಹ್ಲಿ 119ನೇ ಇನ್ನಿಂಗ್ಸ್‌ನಲ್ಲಿ 6000 ಮೈಲುಗಲನ್ನು ತಲುಪಿದ್ದಾರೆ. ಸುನಿಲ್ ಗವಾಸ್ಕರ್ 117, ಸಚಿನ್ ತೆಂಡೂಲ್ಕರ್ 120, ವೀರೇಂದ್ರ ಸೆಹ್ವಾಗ್ 121 ಮತ್ತು ರಾಹುಲ್ ದ್ರಾವಿಡ್ 125 ಇನ್ನಿಂಗ್ಸ್‌ಗಳಲ್ಲಿ ಈ ಮೈಲುಗಲ್ಲನ್ನು ತಲುಪಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಟೆಸ್ಟ್​ ಕ್ರಿಕೆಟ್​ ನಲ್ಲಿ 6000 ರನ್​ ಸಾಧನೆ ಮಾಡಿರುವ ಭಾರತದ 10ನೇ ಬ್ಯಾಟ್ಸ್​ಮನ್​ ಎಂಬ ಹೆಗ್ಗಳಿಕೆಗೂ ವಿರಾಟ್ ಕೊಹ್ಲಿ​ ಭಾಜನರಾಗಿದ್ದಾರೆ. ಪ್ರಸ್ತುತ ಸರಣಿಯಲ್ಲೇ ಇಂಗ್ಲೆಂಡ್ ನೆಲದಲ್ಲಿ ಚೊಚ್ಚಲ ಟೆಸ್ಟ್ ಶತಕ ಬಾರಿಸಿರುವ ಕೊಹ್ಲಿ, ನಾಯಕನಾಗಿ ಇಂಗ್ಲೆಂಡ್ ನೆಲದಲ್ಲಿ ಆಡಿರುವ ಚೊಚ್ಚಲ ಪಂದ್ಯದಲ್ಲೇ ಶತಕ ಬಾರಿಸಿದ ಕೀರ್ತಿಗೂ ಪಾತ್ರವಾಗಿದ್ದರು.

4ನೇ ಟೆಸ್ಟ್ ನ 2 ನೇಯ ದಿನದ ಊಟದ ವಿರಾಮದ ಹೊತ್ತಿಗೆ ಭಾರತ 31 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 100 ರನ್ ಗಳಿಸಿದೆ. ಇನ್ನಿಂಗ್ಸ್ ಮುನ್ನಡೆ ಗಳಿಸಲು ಇನ್ನು 146 ರನ್ ಗಳಿಸಬೇಕಾದ ಅಗತ್ಯ ಇದೆ ಎಂದು ತಿಳಿದು ಬಂದಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top