ತಿಂಡಿ ತೀರ್ಥ

ರುಚಿ ರುಚಿಯಾದ ಹಸಿ ಬಟಾಣಿ ಪಾಯಸ ಈ ರೀತಿಯಾಗಿ ಕೂಡ ಮಾಡಬಹುದೇ!

ಬಟಾಣಿ ಪಾಯಸ ಮಾಡಲು ಬೇಕಾದಪದಾರ್ಥಗಳು:

ಹಸಿ ಬಟಾಣಿ – 1 /2 ಕಪ್
ಬಾದಾಮಿ -10
ದ್ರಾಕ್ಷಿ – 15
ಗೋಡಂಬಿ -6
ಗಸಗಸೆ – 1/2 ಟೀ ಚಮಚ

ಜೇನಿ ಬೆಲ್ಲ – 1/4 ಕಪ್
ತೆಂಗಿನಕಾಯಿ ತುರಿ – 1/2 ಕಪ್
ಕಾಯಿಸಿರುವ ಹಾಲು – ಒಂದು ಕಪ್
ನೀರು – ಒಂದು 1/4 ಕಪ್
ತುಪ್ಪ – 2 ಟೀ ಚಮಚ

 

 

 

 

ಹಸಿ ಬಟಾಣಿ ಪಾಯಸ ಮಾಡುವ ವಿಧಾನ ತಿಳಿದುಕೊಳ್ಳೋಣ ಬನ್ನಿ .

ಮೊದಲಿಗೆ ಸ್ಟೋವ್ ಮೇಲೆ ಒಂದು ಪಾತ್ರೆಯನ್ನು ಬಿಸಿಯಾಗಲು ಇಡಬೇಕು ನಂತರ ಒಂದು ಟೀ ಚಮಚದಷ್ಟು ತುಪ್ಪವನ್ನು ಹಾಕಿದ ಮೇಲೆ ಬಾದಾಮಿಯನ್ನು ಹಾಕಿ ಅರ್ಧ ನಿಮಿಷದವರಿಗೂ ಉರಿದುಕೊಳ್ಳಬೇಕು ನಂತರ ಗೋಡಂಬಿ ಮತ್ತು ದ್ರಾಕ್ಷಿಯನ್ನು ಹಾಕಿ ಉರಿದುಕೊಂಡ ಮೇಲೆ ಅದನ್ನು ಒಂದು ಪಾತ್ರೆಯಲ್ಲಿ ಹಾಕಿಕೊಳ್ಳಿ . ನಂತರ ಅದೇ ಪಾತ್ರೆಗೆ ಬಟಾಣಿಯನ್ನು ಹಾಕಿ 2 ರಿಂದ 3 ನಿಮಿಷದವರಿಗೆ ಚೆನ್ನಾಗಿ ಉರಿದುಕೊಂಡು ಅದಕ್ಕೆ ಒಂದು ಕಪ್ ನಷ್ಟು ನೀರು ಹಾಕಿ ಆ ಪಾತ್ರೆ ಮೇಲೆ ಮುಚ್ಚಳವನ್ನು ಮುಚ್ಚಿ ಬಟಾಣಿಯನ್ನು ಬೈಯಿಸಿಕೊಳ್ಳಬೇಕು .ನಂತರ ಒಂದು ಮಿಕ್ಸಿ ಜಾರ್‍ಗೆ 4/3 ಕಪ್ ಅಷ್ಟು ಬೈಯಿಸಿರುವ ಬಟಾಣಿಯನ್ನು ಹಾಕಿ ಸ್ವಲ್ಪ ಹೊತ್ತು ತಣ್ಣಗೆ ಆಗಲು ಬಿಡಬೇಕು . ಒಂದು ಒಗ್ಗರಣೆಯ ಪಾತ್ರೆಯನ್ನು ಇಟ್ಟು ಅದರಲ್ಲಿ ಗಸಗಸೆಯನ್ನು ಹಾಕಿ ಚೆನ್ನಾಗಿ ಉರಿದುಕೊಳ್ಳಬೇಕು.

ಆ ಮೇಲೆ ತಣ್ಣಗಾದ ಬಟಾಣಿ ಮತ್ತು ಗಸಗಸೆ ,5 ಬಾದಾಮಿ ,2 ಏಲಕ್ಕಿ ,ತೆಂಗಿನಕಾಯಿ ತುರಿ ಹಾಕಿ ಇವುಗಳನ್ನು ನೀರು ಹಾಕದೇ ಚೆನ್ನಾಗಿ ರುಬ್ಬಿಕೊಳ್ಳಬೇಕು ಮತ್ತೆ ಅದಕ್ಕೆ ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ನುಣ್ಣಗೆ ರುಬ್ಬಿಕೊಳ್ಳಬೇಕು .ಸ್ವಲ್ಪ ಉಳಿಸಿಕೊಂಡಿರುವ ಬಟಾಣಿ , ನೀರಿಗೆ ಜೇನಿ ಬೆಲ್ಲವನ್ನು ಹಾಕಿ 2 ನಿಮಿಷದವರಿಗೂ ಕುದಿಸಿಕೊಳ್ಳಿ ನಂತರ ರುಬ್ಬಿಕೊಂಡಿರುವ ಬಟಾಣಿ ಮಿಶ್ರಣವನ್ನು ಹಾಕಿ 5 ನಿಮಿಷದವರಿಗೂ ಕುದಿಸಿಕೊಂಡ ನಂತರ ಸ್ವಲ್ಪ ತುಪ್ಪವನ್ನು ಹಾಕುವುದರಿಂದ ಪಾಯಸ ತುಂಬಾ ರುಚಿಯಾಗಿರುತ್ತದೆ .ಸ್ಟೋವ್ ಅನ್ನು ಆಫ್ ಮಾಡಿ ಪಾಯಸ ಸ್ವಲ್ಪ ತಣ್ಣಗಾದ ಮೇಲೆ ಒಂದು ಕಪ್ ಕಾಯಿಸಿಕೊಂಡಿರುವ ಬಿಸಿ ಹಾಲನ್ನು ಹಾಕಿ ಚೆನ್ನಾಗಿ ಮಿಶ್ರಣಮಾಡಿ ಅದರ ಜೊತೆಗೆ ಉರಿದುಕೊಂಡಿರುವ ಬಾದಾಮಿ ,ಗೋಡಂಬಿ ,ದ್ರಾಕ್ಷಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ಬಿಸಿ ಬಿಸಿಯಾದ ಬಟಾಣಿ ಪಾಯಸ ಸವಿಸಲು ಸಿದ್ಧವಾಗಿದೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top