ಸಮಾಚಾರ

ಟೀಸರ್ ಮೂಲಕವೇ ದೂಳೆಬ್ಬಿಸಿದ ರಜಿನಿ- ಮತ್ತೊಂದು ಲೋಕಕ್ಕೆ ಕರೆದೊಯ್ಯುವಂತಿದೆ 2.0 ಝಲಕ್.

ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ನಿರೀಕ್ಷಿತ ಚಿತ್ರ ಎಂದೇ ಪರಿಗಣಿತವಾಗಿರುವ ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ‘2.0’ ಚಿತ್ರದ ಟೀಸರ್ ರಿಲೀಸ್ ಆಗಿದ್ದು ಎಲ್ಲೆಡೆ ಸಂಚಲನ ಸೃಷ್ಟಿಸಿದೆ.. ಗಣೇಶ ಚತುರ್ಥಿಯಾದ ಇಂದು ಚಿತ್ರದ ತಂಡ ಬಹುಕೋಟಿ ವೆಚ್ಚ 2.0 ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದು, ಈ ಮೂಲಕ ಅಭಿಮಾನಿಗಳಿಗೆ ಹಬ್ಬದ ಉಡುಗೊರೆಯನ್ನು ನೀಡಿದೆ..

 

 

ತಮಿಳು, ತೆಲುಗು ಮತ್ತು ಹಿಂದಿ ಮೂರು ಭಾಷೆಗಳಲ್ಲಿಯೂ ಟೀಸರ್ ರಿಲೀಸ್ ಆಗಿದ್ದು ಬಿಡುಗಡೆಯಾದ ಕೇವಲ ಹತ್ತು ಗಂಟೆಗಳಲ್ಲಿಯೇ ಯೂಟ್ಯೂಬ್’ನಲ್ಲಿ ಮೂರು ಕೋಟಿಗೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಅದ್ಭುತ ಗ್ರಾಫಿಕ್ಸ್ ಬಳಸಿ ನಿರ್ಮಿಸಲಾಗಿರುವ 2.0 ಸಿನಿಮಾ ಯಾವುದೇ ಹಾಲಿವುಡ್​ ಚಿತ್ರಕ್ಕಿಂತ ಕಮ್ಮಿಯಿಲ್ಲ ಎಂಬಂತೆ ಮೂಡಿ ಬಂದಿದೆ ಎಂಬುದು ಟೀಸರ್ ಮೂಲಕವೇ ಸಾಬೀತಾಗಿದೆ..

 

 

ಶಂಕರ್​ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರ ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿದೆ. 2010ರಲ್ಲಿ ಇವರ ನಿರ್ದೇಶನದಲ್ಲೇ ಮೂಡಿಬಂದ ಎಂದಿರನ್​ ಚಿತ್ರ ಸಿಕ್ಕಾಪಟ್ಟೆ ಹಿಟ್​ ಆಗಿತ್ತು. ಇದರ ಮುಂದುವರಿದ ಭಾಗವಾಗಿ 2.0 ಮೂಡಿಬಂದಿದೆ. ಅಕ್ಷಯ್​ ಕುಮಾರ್​ ಚಿತ್ರದಲ್ಲಿ ಖಳನಾಯಕ ಪಾತ್ರದಲ್ಲಿ ಅಭಿನಯಿಸಿದ್ದು, ವಿಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ರಜಿನಿ ಆಂಡ್ರೋ ಹ್ಯೂಮನಾಯ್ಡ್ ಚಿಟ್ಟಿಯಾಗಿ ಕಾಣಿಸಿಕೊಳ್ಳಲಿದ್ರೆ, ಎದುರಾಳಿಯಾಗಿ ಅಕ್ಷಯ್ ಕುಮಾರ್ ಡಾ.ರಿಚ್ಚರ್ಡ್ ಎಂಬ ಹುಚ್ಚು ವಿಜ್ಞಾನಿಯಾಗಿ ನಟಿಸ್ತಿದ್ದಾರೆ. ಬ್ರಿಟಿಷ್ ನಟಿ ಕಮ್ ಮಾಡೆಲ್ ಆ್ಯಮಿ ಜಾಕ್ಸನ್ ಮಹಿಳಾ ಮುಖ್ಯಪಾತ್ರಧಾರಿಯಾಗಿ ನಟಿಸುತ್ತಿದ್ದಾರೆ.

 

ನವೆಂಬರ್ 29ರಂದು ತೆರೆಗೆ:
ಚಿತ್ರವು ನವೆಂಬರ್ 29, 2018 ರಂದು ಜಗತ್ತಿನಾದ್ಯಂತ ಏಕಕಾಲಕ್ಕೆ ತೆರೆಗೆ ಬರಲಿದೆ… ಹೀಗಂತ ಸ್ವತಃ ಚಿತ್ರತಂಡವೇ ಅಧಿಕೃತವಾಗಿ ಘೋಷಿಸಿದೆ,

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top