ಸಮಾಚಾರ

70ಕೆಜಿ ಚಿನ್ನದಿಂದ ಗಣೇಶನಿಗೆ ಅಲಂಕಾರ- ಭದ್ರತೆಗಾಗಿ ಮಾಡಿರೋದೇನು ಗೊತ್ತಾ?

ದೇಶದಾದ್ಯಂತ ಸಪ್ಟೆಂಬರ್​ 13 ರಿಂದ 23ರವರೆಗೆ ಗಣೇಶ ಹಬ್ಬವನ್ನು ಭಿನ್ನ ವಿಭಿನ್ನವಾಗಿ ಆಚರಿಸಲಾಗುತ್ತದೆ. ದೇಶದೆಲ್ಲೆಡೆ ತಂತಮ್ಮ ಶಕ್ತಿಗನುಗುಣವಾಗಿ ಗಣೇಶ ಮೂರ್ತಿಯನ್ನಿಟ್ಟು ಪೂಜಿಸಲಾಗುತ್ತದೆ.. ಒಂದೊಂದು ಗಣೇಶ ಮೂರ್ತಿಗಳು ಕೂಡ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಿವೆ. ಅದೇ ರೀತಿ ಮುಂಬೈನಲ್ಲಿ ಗಣೇಶ ಮೂರ್ತಿಯನ್ನು ಅಪ್ಪಟ ಚಿನ್ನದಿಂದಲೇ ಅಲಂಕರಿಸಲಾಗಿದೆ..

 

 

ಮುಂಬೈನ ಜಿಎಸ್​ಬಿ ಸೇವಾಮಂಡಲ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಯನ್ನು 70ಕೆಜಿಯಷ್ಟು ಶುದ್ಧ ಚಿನ್ನದಲ್ಲೆ ಅಲಂಕಾರ ಮಾಡಲಾಗಿದೆ.. ಈ ಗಣೇಶ ಈಗ ದೇಶಾದ್ಯಂತ ಸುದ್ದಿಯಾಗುತ್ತಿದ್ದು ಗಣೇಶನ ಮೇಲಿರುವ ಬಂಗಾರವನ್ನು ಕಂಡು ಅನೇಕರು ಹುಬ್ಬೇರಿಸಿಕೊಂಡಿದ್ದಾರೆ.. ಇಷ್ಟು ದುಬಾರಿ ಗಣೇಶನಿಗೆ ಹೇಗೆ ಅದ್ದೊರಿಯಾಗಿ ಅಲಂಕಾರ ಮಾಡಲಾಗಿದೆಯೋ ಅದೇ ರೀತಿಯಲ್ಲಿ ಭದ್ರತಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ.

ಚಿನ್ನದ ಗಣಪತಿ ಭದ್ರತೆಗಾಗಿ ಡ್ರೋನ್​ ಕ್ಯಾಮರಾಗಳನ್ನು ಬಳಸಲಾಗಿದ್ದು ಸುತ್ತಲೂ ಸಿಸಿಟಿವಿ ಕ್ಯಾಮರಗಳನ್ನೂ ಹಾಕಿಸಲಾಗಿದೆ.. ಅಲ್ಲದೆ ಸುರಕ್ಷತೆಯ ದೃಷ್ಟಿಯಿಂದ ಗಣೇಶ ಮೂರ್ತಿ ಹಾಗೂ ದರ್ಶನಕ್ಕಾಗಮಿಸುವ ಭಕ್ತರ ನಡುವೆ ಅಂತರವನ್ನೂ ಇಡಲಾಗಿದೆ.. ಗಣೇಶನನ್ನು ಪ್ರತಿಷ್ಠಾಪಿಸಿರುವ ಸ್ಥಳದಲ್ಲಿ ಬಿಗಿ ಬಂದೋಬಸ್ತ್​ ಕಲ್ಪಿಸಲಾಗಿದೆ.. ಜನಸಂದಣಿ ಹೆಚ್ಚಾಗದಿರುವಂತೆ ಪೊಲೀಸ್ ಬ್ಯಾರಿಕೇಡ್​ಗಳನ್ನೂ ಅಳವಡಿಸಲಾಗಿದ್ದು ಸರತಿ ಸಾಲಿನಲ್ಲಿ ಬಂದು ದರ್ಶನ ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿದೆ,

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top