ಸಮಾಚಾರ

ಸೆಪ್ಟೆಂಬರ್ 15ರಂದು ಪೊರಕೆ ಹಿಡಿಯಲಿರುವ ಅಕ್ಷಯ್ ಕುಮಾರ್- ಯಾಕೆ ಗೊತ್ತಾ?

ಹಿಂದಿ ಚಿತ್ರರಂಗದಲ್ಲಿ ಈಗ ಹೊಸ ಟ್ರೆಂಡ್ ಆರಂಭವಾಗಿದೆ. ಪ್ರಧಾನಿಗೆ ಜೈ ಹೋ ಎನ್ನುವುದು. ಆ ಮೂಲಕ ಮೋದಿಯ ಅಂತಃಪುರ ಪ್ರವೇಶಿಸಿ ಪದ್ಮಶ್ರೀ, ಪದ್ಮಭೂಷಣಗಳನ್ನು ಮುಡಿಗೇರಿಸಿಕೊಳ್ಳುವುದು. ಇದಕ್ಕೆ ಅತ್ತ ಪ್ರಿಯಾಂಕ ಚೋಪ್ರಾ ಇಂದು ಇತ್ತ ಕಾಜೋಲ್ ತನಕ ಹಲವು ಉದಾಹರಣೆಗಳು ಗೋಚರಿಸುತ್ತವೆ.

ಕೇವಲ ನಟಿ ಮಣಿಗಳು ಮಾತ್ರವಲ್ಲದೆ ನಟರು ಕೂಡ ಮೋದಿಗೆ ಮಸ್ಕಾ ಹೊಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಮೀರ್‌ಖಾನ್ ಈ ಪಟ್ಟಿಗೆ ಸೇರಿ ವರ್ಷಗಳೇ ಆಯಿತು. ಸ್ವಚ್ಛಭಾರತ ಅಭಿ’ನಯ’ ಮಾಡಿ ಸಾಕಷ್ಟು ಕಮಾಯಿಸಿದ್ದ. ಆ ಸುದ್ದಿಯೆಲ್ಲಾ ಹಳತಾಯಿತು. ತಾಜಾ ಸೇರ್ಪಡೆ ಎಂದರೆ ಅಕ್ಷಯ್ ಕುಮಾರ್.. ಹೌದು ಮೋದಿ ‘ಸ್ವಚ್ಛತಾ ಹಿ ಸೇವಾ’ ಅಭಿಯಾನಕ್ಕೆ ಅಕ್ಕಿ ಸಾಥ್ ನೀಡುತ್ತಿದ್ದಾನೆ. ಸ್ವಚ್ಛತಾ ಅಭಿಯಾನ ದೇಶದ ದೃಷ್ಟಿಯಲ್ಲಿ ಸದುದ್ದೇಶದ ಯೋಜನೆ ಎಂಬುದರಲ್ಲಿ ಎರಡು ಮಾತಿಲ್ಲ.ಆದರೆ ಇದರಿಂದ ನೇರ ನೇರವಾಗಿ ಮೋದಿಯ ಅಂತಃಪುರಕ್ಕೆ ಲಗ್ಗೆ ಇಡುವುದು ಅಕ್ಕಿಯ ಅಸಲಿ ಸ್ಕೆಚ್ ಇರಬಹುದಾ? ಎಂಬ ಅನುಮಾನ ಮೂಡಿಕೊಂಡಿದೆ.

ಹೌದು ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಕಾಂಕ್ಷೆಯ ಸ್ಪಚ್ಛತಾ ಹಿ ಸೇವಾ ಅಭಿಯಾನಕ್ಕೆ ತಾವು ಕೈಜೋಡಿಸಿರುವುದಾಗಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ, ಸೆಪ್ಟೆಂಬರ್ 15ರಂದು ಎಲ್ಲರೂ ಪ್ರಧಾನಿ ಅವರು ಕೈಗೊಂಡಿರುವ ಸ್ಪಚ್ಛತಾ ಹೈ ಸೇವಾ ಚಳವಳಿಗಾಗಿ ಕೈಜೋಡಿಸಿ, ನಿಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸ್ಪಚ್ಛವಾಗಿಟ್ಟುಕೊಳ್ಳಿ ಎಂದು ಹೇಳಿಕೊಂಡಿದ್ದಾರೆ. ಅದೇನೇ ಇರಲಿ ಬೇರೆಯವರಂತೆ ಬಿರುದು ಬಾವಲಿಗಳಿಗಾಗಿ ಮೋದಿಗೆ ಮಸ್ಕಾ ಹೊಡೆಯದೇ ಸ್ವಚ್ಛ ಮನಸ್ಸಿನಿಂದ ದೇಶದ ಜನರಲ್ಲಿ ಸ್ವಚ್ಛತಾ ಪಾಠ ಮಾಡಲಿ ಎಂಬುದೇ ಅಕ್ಷಯ್ ಅಭಿಮಾನಿಗಳ ಮಾತಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top