ಸಿನಿಮಾ

ಸ್ಯಾಂಡಲ್‌ವುಡ್‌ನ ಐಸೂ ಅಲಿಯಾಸ್ ಅಮೂಲ್ಯಗೆ ಬರ್ತ್ ಡೇ ಸಂಭ್ರಮ , ಫೋಟೋ ಒಳಗಿದೆ

ಅಮೂಲ್ಯ ಚಿಕ್ಕ ವಯಸ್ಸಿನಲ್ಲಿಯೇ ಕಿರುತೆರೆಗಳಲ್ಲಿ ಕಾಣಿಸಿಕೊಂಡರು. ಅಮೂಲ್ಯ 2007 ರಲ್ಲಿ ರಿಲೀಸ್ ಆದ “ಚೆಲುವಿನ ಚಿತ್ತಾರ” ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ಮೊದಲ ಬಾರಿಗೆ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡರು. ಈ ಸಿನಿಮಾ ಅವರನ್ನು ಯಶಸ್ಸಿನ ಉತ್ತುಂಗಕ್ಕೆ ಕರೆದೊಯ್ಯಿತು. ಆ ಬಳಿಕ ಅನೇಕ ಸಿನಿಮಾದಲ್ಲಿ ಅಭಿನಯ ಮಾಡಿ ಹೆಸರು ಗಳಿಸಿದರು.

ಪರಿಸರ ಸ್ನೇಹಿ ಮಣ್ಣಿನ ಗಣಪನನ್ನು ಪ್ರತಿಷ್ಠಾಪನೆ ಮಾಡಿ ಎಂದು ಗೌರಿ-ಗಣೇಶ ಹಬ್ಬದ ಶುಭಾಶಯವನ್ನು ಕೋರಿದ್ದ ಅಮೂಲ್ಯ ವಿಡಿಯೋ ಅಪ್ಲೋಡ್ ಮಾಡಿದ್ದರು ,ಗೌರಿ ಹಬ್ಬಕ್ಕೆಂದು ಅಮ್ಮನ ಮನೆಗೆ ಬಂದಿದ್ದ ಅಮೂಲ್ಯಗೆ ಮಧ್ಯರಾತ್ರಿಯೇ ಅವರ ಅಮ್ಮ, ಅಣ್ಣ ಮತ್ತು ಕುಟುಂಬದ ಆಪ್ತರು ಕೇಕ್ ತಂದು ಕತ್ತರಿಸಿ ಶುಭಾಶಯವನ್ನು ತಿಳಿಸಿದ್ದಾರೆ. ಆನಂತರ ಅವರ ಗಂಡ ಜಗದೀಶ್ ಮತ್ತು ಅತ್ತೆ, ಮಾವ ಎಲ್ಲರು ಕೇಕ್ ಕತ್ತರಿಸಿ ಶುಭಾ ಕೋರಿದ್ದಾರೆ, ತಮ್ಮ ಬರ್ತ್ ಡೇ ಸೆಲೆಬ್ರೇಶನ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ ಅಮೂಲ್ಯ .

 

 

ಅಮೂಲ್ಯ ಮದುವೆ ಆದ ನಂತರ ಚಿತ್ರರಂಗದಿಂದ ದೂರ ಸರಿದು ಸಂಸಾರ ತಾಪತ್ರಗಳಲ್ಲಿ ಮುಳುಗಿ ಹೋಗಿದ್ದಾರೆ . ಈ ನಡುವೆ ಸಿನಿಮಾದಿಂದ ದೂರ ಉಳಿದಿಲ್ಲ, ತನ್ನ ರೂಪ ಲಾವಣ್ಯದಿಂದಲೇ ಕನ್ನಡಿಗರ ಮನೆಮಾತಾಗಿದ್ದ ಅಮೂಲ್ಯ ಅವರನ್ನು ಮತ್ತೆ ಸಿನಿಮಾದಲ್ಲಿ ನೋಡಬೇಕು ಎಂದು ಕಾದು ಕುಳಿತಿದ್ದ ಅಭಿಮಾನಿಗಳಿಗೆ ಕೊನೆಗೂ ಸಿಹಿ ಸುದ್ದಿಯೊಂದನ್ನ ನೀಡಿ ಮತ್ತೆ ಸಿನಿಮಾ ಕಡೆ ಮುಖ ಮಾಡಿದ್ದಾರೆ .

ಓದು-ಸಿನಿಮಾ ಅಂತಾ ಎರಡು ಕಡೆ ಬ್ಯಾಲೆನ್ಸ್ ಮಾಡಿಕೊಂಡು ಬರ್ತಿದ್ದ ಐಸೂ, ಮದುವೆಗೆ ಮುನ್ನ ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ರು.. ವರ್ಷಕ್ಕೆ ಕಮ್ಮಿಯಂದ್ರೂ ಮೂರ್‍ನಾಲ್ಕು ಸಿನಿಮಾಗಳು ರಿಲೀಸ್ ಆಗ್ತಿದ್ವು.. ನಿಜ ಹೇಳ್ಬೇಕು ಅಂದ್ರೆ ಒಂದಷ್ಟು ಚಿತ್ರಗಳು ಅಮೂಲ್ಯಗಾಗಿನೆ ಮಾಡಿದ್ದಾರೇನೋ ಅನ್ನುವಂತಿದ್ವು.. ಹೀಗಾಗಿನೆ ಬಹು ಬೇಗನೆ ಸ್ಯಾಂಡಲ್‌ವುಡ್‌ನ ರಾಣಿಪಟ್ಟ ಅಲಂಕರಿಸಿದ್ದು ಈ ಚಲುವೆ.. ನಾಯಕಿಯಾಗಿ ಬ್ಯುಸೀ ಇರುವ ಹೊತ್ತಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಅಮೂಲ್ಯ ಬಣ್ಣದ ಲೋಕದಿಂದ ಕೊಂಚ ಬ್ರೇಕ್ ತೆಗೆದುಕೊಂಡು ಫ್ಯಾಮಿಲಿಯ ಜೊತೆ ಕಾಲಕಳೆದಿದ್ದರು. ಮಾಸ್ತಿಗುಡಿ ಮತ್ತು ಮುಗುಳುನಗೆ ಚಿತ್ರಗಳಲ್ಲಿ ನಟಿಸಿದ ನಂತರ ಮತ್ಯಾವ ಚಿತ್ರಗಳಲ್ಲೂ ಐಸೂ ಕಾಣಿಸಿಕೊಂಡಿರಲಿಲ್ಲ ಆದರೆ ಇದೀಗ ಅಮೂಲ್ಯ ಮತ್ತೆ ಸ್ಯಾಂಡಲ್ ವುಡ್ ಕಡೆ ಮುಖ ಮಾಡಿದ್ದು ಆದಷ್ಟು ಬೇಗ ಚಿತ್ರವೊಂದರಲ್ಲಿ ನಟಿಸಲಿದ್ದಾರೆ.

 

 

ಅಮೂಲ್ಯ ದರ್ಶನ್ ಜೊತೆಯಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಹೌದು ನಟಿ ಅಮೂಲ್ಯ ದರ್ಶನ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ರೀ ಎಂಟ್ರಿ ಕೊಡುತ್ತಿದ್ದು ಮತ್ತೆ ಬ್ಯುಸಿ ನಟಿಯಾಗಲಿದ್ದಾರೆ. ಸದ್ಯ ಅವರು ತಮಿಳು ಸೂಪರ್ ಹಿಟ್ ‘ವೇದಾಳಂ’ ಚಿತ್ರವನ್ನು ಕನ್ನಡಕ್ಕೆ ರೀಮೆಕ್ ಮಾಡಲು ಮುಂದಾಗಿದ್ದು ಅದರಲ್ಲಿ ದರ್ಶನ್ ಅವರ ತಂಗಿಯ ಪಾತ್ರವನ್ನು ಅಮೂಲ್ಯ ಮಾಡಲಿದ್ದಾರಂತೆ. ಈ ಮೊದಲು 15 ವರ್ಷಗಳ ಹಿಂದೆ ಬಂದಿದ್ದ ದರ್ಶನ್ ಅವರ ಲಾಲಿಹಾಡು ಚಿತ್ರದಲ್ಲಿ ಅಮೂಲ್ಯ ಬಾಲನಟಿಯಾಗಿ ಅಭಿಮಾನಿಯಿಸಿದ್ದರು. ಆ ನಂತರ ಯಾವುದೇ ಚಿತ್ರಗಳಲ್ಲಿ ಇಬ್ಬರೂ ಒಟ್ಟಿಗೆ ನಟಿಸಿರಲಿಲ್ಲ ಇದೀಗ ಎಲ್ಲವೂ ಅಂದುಕೊಂಡಂತೆ ನಡೆದರೆ ಆದಷ್ಟು ಬೇಗ ಒಂದೇ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top