fbpx
ಸಿನಿಮಾ

ಪಟ ಪಟ ಮಾತಾಡುವ ಆಂಕರ್ ಅನುಶ್ರೀ ಡ್ರೀಮ್ ಬಾಯ್ ಹೇಗಿರಬೇಕಂತೆ ಗೊತ್ತಾ

ಅನುಶ್ರೀ ಅಂದ್ರೆ ಮೊದಲು ನೆನಪಿಗೆ ಬರೋದು ಅವರ ಪಟ ಪಟ ಮಾತು , ಕಿರುತೆರೆಯ ನಂಬರ್ 1 ನಿರೂಪಕಿ ಎಂದೇ ಹೆಸರುವಾಸಿಯಾಗಿರುವ ಅನುಶ್ರೀ ಇಂದು ರಾಜ್ಯದ ಮನೆಮಾತಾಗಿದ್ದಾರೆ. ಟಿವಿಯಲ್ಲಿ ಯಾವುದೇ ದೊಡ್ಡ ಷೋ ಇದ್ರೂ, ಅಲ್ಲಿ ಅನುಶ್ರೀ ಮೈಕ್ ಹಿಡ್ಕೊಂಡು ಬಂದರೆ ಆ ಕಾರ್ಯಕ್ರಮಕ್ಕೆ ಒಂದು ಕಳೆ ಬರುತ್ತದೆ. ತಮ್ಮ ವಿಭಿನ್ನವಾದ ನಿರೂಪಣೆಯ ಮೂಲಕವೇ ಕಾರ್ಯಕ್ರಮಕ್ಕೆ ಹೊಸ ಮೆರಗನ್ನು ತಂದು ಕೊಡುವ ವಿಶಿಷ್ಟವಾದ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.

ಸದಾ ತಮ್ಮ ನಗುವಿನಿಂದಲೇ ಪ್ರೇಕ್ಷಕರನ್ನು ಮೋಡಿ ಮಾಡುವ ಖ್ಯಾತ ನಿರೂಪಕಿ ಅನುಶ್ರೀ ರವರು ಸರಿಗಮಪದಲ್ಲಿ ಸಂಗೀತ ನಿರ್ದೇಶಕ ಅರ್ಜುನ್‍ ಜನ್ಯ ಅವರಿಗೆ ಮದುವೆ ಮಾಡ್ಕೊಳ್ಳಿ ಅಂತ ಕಾಲೆಳೆದು ತಲೆತಿನ್ನುತ್ತಿದ್ದದ್ದು ನಮಗೆ ಗೊತ್ತೇ ಇದೆ.ಯಾವಾಗ್ಲೂ ಜನ ಅವರ ಮದುವೆ ಬಗ್ಗೆ ಕೇಳಿದ್ರೆ ಏನೋ ಒಂದು ಕಾರಣ ಕೊಟ್ಟು ಓಡಿ ಹೋಗುತಿದ್ದ ಅನು ಶ್ರೀ ಇದೇ ಮೊದಲ ಸಲ ಅವರು ಇಷ್ಟ ಪಡುವ ಹುಡುಗ ಹೇಗೆ ಇರಬೇಕು ಅಂತ ಪಬ್ಲಿಕ್ ಟಿವಿ ಗೆ ಕೊಟ್ಟ ಸಂದರ್ಶನ ಒಂದರಲ್ಲಿ ಬಾಯಿ ಬಿಟ್ಟು ಹೇಳಿದ್ದಾರೆ .

 

 

 

ಅನುಶ್ರೀ ಗೆ ತುಂಬಾ ವೈಟ್ ಆಗಿ ಇರೋ ಹುಡುಗ ಬೇಡವಂತೆ ಯಾಕೆ ಅಂದ್ರೆ ಅವ್ರು ಅಷ್ಟು ವೈಟ್ ಇಲ್ವಂತೆ ,ಅನು ಇಷ್ಟ ಪಡೋ ಹುಡುಗ ಬೇರೆ ಹುಡುಗರಿಗಿಂತ ತುಂಬಾ ಡಿಫರೆಂಟ್ ಆಗಿರಬೇಕಂತೆ ಹಾಗೇ ಬೇರೆ ಜನ ಅನು ಶ್ರೀ ನ ನೋಡ್ತಾಯಿದ್ರೆ ಅವ್ರ್ ಹುಡುಗ ಮಾತ್ರ ಇವರನ್ನ ನೋಡದೆ ಇಗ್ನೋರ್ ಮಾಡ್ಬೇಕಂತೆ .
ಹಾಗೂ ಫಿಲಂ ಗಳಲ್ಲಿ ಆಗೋ ರೀತಿ ಅವರ ಹುಡುಗ ಬರೋವಾಗ ಗಾಳಿ ಬೀಸಬೇಕಂತೆ ,ಎಲ್ಲ ಸ್ಲೋ ಆಗಿ ಚಲಿಸುವಂತೆ ಫೀಲ್ ಆಗಬೇಕಂತೆ,ಕಾಲಿನ ಹೆಬ್ಬೆರಳು ನೆಲ ಉಜ್ಜುವಂತೆ ಆಗಬೇಕು ಅನ್ನುವ ಫೀಲ್ ಆಗ್ಬೇಕು ಹಾಗೂ ಮೋಸ್ಟ್ ಇಂಪಾರ್ಟೆಂಟ್ ಸಡನ್ ಆಗಿ ಅನುಗೆ ನಾಚಿಕೆಯಾಗ್ಬೇಕಂತೆ ಈ ರೀತಿಯಲ್ಲಿ ಯಾರನ್ನು ನೋಡಿದಾಗ ಆಗುತ್ತೆ ಅವನೇ ನನ್ನ `ಚಿನ್ನು’ ಎಂದು ಮನದಾಳದ ಮಾತನ್ನು ರಿವೀಲ್ ಮಾಡಿದ್ದಾರೆ ಅನು ಶ್ರೀ .

ಮುಂದೆ ಮಾತು ಮುಂದುವರಿಸುತ್ತಾ ಇಲ್ಲಿಯ ವರಿಗೂ ಯಾರನ್ನು ನೋಡಿದರೂ ಆ ರೀತಿಯ ನಾಚಿಕೆ ಬಂದಿಲ್ಲ ಅದಕ್ಕೆ ನಾನು ಇನ್ನು ಸಿಂಗಲ್ ಅಂತ ಹೇಳಿದ್ದಾರೆ.ಸ್ಕೂಲ್ ಟೈಮಲ್ಲಿ ತುಂಬಾನೇ ಪ್ರಪೋಸ್ ಬರುತ್ತಿತ್ತು. ಆದ್ರೆ ನಿರೂಪಕಿ ಆದ್ಮೇಲೆ ಇಲ್ಲಿಯ ತನಕ ಅನುಶ್ರೀ ಗೆ ಯಾವ ಹುಡುಗನ್ನು ಪ್ರೊಪೋಸ್ ಮಾಡಿಲ್ಲ ವಂತೆ ಅದಕ್ಕೆ ಅನುಗೆ ಡೌಟ್ ಆಗಿ ಆಕೆಯ ಗೆಳತೀ ಹತ್ರ ಯಾಕೆ ಯಾರು ನನಗೆ ಪ್ರಪೋಸ್ ಮಾಡಲ್ಲ? ನಾನು ನೋಡೊದಕ್ಕೆ ಚೆನ್ನಾಗಿ ಇಲ್ವಾ?’ ಅಂತಾ ಕೇಳಿದ್ದಕ್ಕೆ ಅವರ ಫ್ರೆಂಡ್ಸೋಶಿಯಲ್ ಆಗಿ ಎಲ್ಲರ ಜೊತೆ ಬೆರೆಯಬೇಕು ಅಂತಾ ಹೇಳಿದ್ರಂತೆ ,ಅನು ಶೂಟಿಂಗ್ ಮುಗಿದ ಕೂಡಲೇ ಮನೆಗೆ ಬಂದು ಬಿಡುತ್ತೇನೆ ಅಷ್ಟೇ ನನ್ನ ಜೀವನ ಅಂದ್ರು.

ಒಂದ್ಸಲ ಒಬ್ಬ ಮಹಿಳೆ ಅವರ ಮಗನ ಫೋಟೋ, ಜಾತಕ, ಉದ್ಯೋಗ ಮಾಹಿತಿ ಬರೆದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯರಿಗೆ ಪತ್ರ ಬರೆದ್ದು ಪ್ಲೀಸ್ ಈ ಇದನ್ನು ಅನುಶ್ರೀ ಅವರಿಗೆ ತಲುಪಿಸಬೇಕೆಂದು ಪತ್ರದಲ್ಲಿ ಬರೆದಿದ್ದರು. ಅರ್ಜುನ್ ಜನ್ಯ ಅನುಶ್ರೀ ಗೆ ಮೇಡಂ ಪತ್ರ ನೋಡಿ ಅಂತಾ ಕೊಟ್ಟರಂತೆ ಅದನ್ನು ನೋಡಿದ ತಕ್ಷಣ ಮೊದಲು ಒಂದು ಕ್ಷಣ ತುಂಬಾ ನಗು ಬಂತಂತ್ತೆ ಆಮೇಲೆ ಎಲ್ಲೋ ದೂರದಲ್ಲಿರುವ ತಾಯಿ ನನ್ನಲ್ಲಿ ಅವರಲ್ಲಿ ಸೊಸೆ ಆಗುವ ಗುಣಲಕ್ಷಣ ನೋಡಿದ್ದಾರೆ ಅಂದ್ರೆ ನನಗೆ ತುಂಬಾ ಹೆಮ್ಮೆ ಆಗುತ್ತದೆ ಎಂದು ಹೇಳುತ್ತಾರೆ ಅನು .

ಕಾರ್ಯಕ್ರಮಗಳ ಮೂಲಕ ಜನರ ಅಚ್ಚು ಮೆಚ್ಚಿನ ನಿರೂಪಕಿಯಾಗಿ ನಿಂತಿದ್ದಾರೆ ಅನು.ಯಾರ ಸಪೋರ್ಟ್ ಇಲ್ಲದೆ ಈ ಮಟ್ಟಕ್ಕೆ ಬೆಳೆದು ನಿಂತಿರುವ ಅನುಶ್ರೀ ಎನ್ನುವ ಈ ದಿಟ್ಟ ಹೆಣ್ಣು ಮಗಳ ಧೈರ್ಯ ಮೆಚ್ಚಲೇ ಬೇಕು

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top