ಸಮಾಚಾರ

“ನಿಮ್ಮ ಕೈಯಲ್ಲಿ ಇದನ್ನು ಮಾಡೋಕೆ ಸಾಧ್ಯವೇ?” ಸಿಎಂ HDKಗೆ ಬಹಿರಂಗ ಸವಾಲು ಹಾಕಿದ ಬಿಜೆಪಿ.

“ಜಾರಕಿಹೊಳಿ ಬ್ರದರ್ಸ್ ಬಿಜೆಪಿಗೆ ಹೋಗುತ್ತಾರೆ ಎಂಬ ಸುದ್ದಿ ಸುಳ್ಳು. ಸಮ್ಮಿಶ್ರ ಸರ್ಕಾರ ಬಿದ್ದು ಹೋಗುವುದಿಲ್ಲ, ಬಿಜೆಪಿಯ ನಾಲ್ಕೈದು ಶಾಸಕರೇ ನಮ್ಮ ಕಡೆ ಇದ್ದಾರೆ” ಎಂದು ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ರಾಜ್ಯ ಬಿಜೆಪಿ ತಿರುಗೇಟು ನೀಡಿದೆ.. ತನ್ನ ಅಧಿಕೃತ ಟ್ವಿಟರ್ ಅಕೌಂಟ್ ನಲ್ಲಿ ಕುಮಾರಸ್ವಾಮಿಯವರಿಗೆ ಟಾಂಗ್ ಕೊಟ್ಟಿರುವ ಬಿಜೆಪಿ ಮುಖ್ಯಮಂತ್ರಿಗಳಿಗೆ ಸವಾಲನ್ನ ಕೂಡ ಹಾಕಿದೆ..

 

 

“ತಮ್ಮ ಪಾರ್ಟಿಯಲ್ಲಿ ಕೇವಲ 38 ಸೀಟುಗಳನ್ನು ಮಾತ್ರ ಗೆದ್ದುಕೊಂಡು ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿಯವರು ಬಿಜೆಪಿಯ 5 ಶಾಸಕರನ್ನು ಸೆಳೆಯುತ್ತೇವೆ ಎಂದು ಹೇಳುತ್ತಾರೆ. ನಮ್ಮದು ಸಿದ್ಧಾಂತ ಆಧಾರಿತ ಪಕ್ಷ ಮತ್ತು ನಮ್ಮ ಶಾಸಕರು ಅಧಿಕಾರಕ್ಕಿಂತ ದೇಶ ಮೊದಲು ಎಂದು ಭಾವಿಸಿದ್ದಾರೆ ಎಂಬುದನ್ನು ಮುಖ್ಯಮಂತ್ರಿಗಳು ಅರ್ಥೈಸಿಕೊಳ್ಳಬೇಕು” ಎಂದು ಬಿಜೆಪಿ ತಿರುಗೇಟು ನೀಡಿದೆ.

ಅಷ್ಟೇ ಅಲ್ಲದೆ ಕುಮಾರಸ್ವಾಮಿಗೆ ಬಹಿರಂಗ ಸವಾಲು ಹಾಕಿರುವ ಬಿಜೆಪಿ “ನಮ್ಮ ಶಾಶಕರು ದೇಶವೇ ಮೊದಲು ಎನ್ನುತ್ತಾರೆಯೇ ಹೊರತು ಜೆಡಿಎಸ್ ರೀತಿ ಒಂದು ಕುಟುಂಬದ ಸುತ್ತ ನಾವು ಗಿರಕಿ ಹೊಡೆಯಲ್ಲ.. ಅದು ಹಾಗಿರಲಿ, ಕೊನೆಪಕ್ಷ ಒಬ್ಬನೇ ಒಬ್ಬ ಬಿಜೆಪಿ ಶಾಸಕನನ್ನು ನಿಮ್ಮತ್ತ ಸೆಳೆದುಕೊಳ್ಳಲು ನಿಮ್ಮ ಕೈಯಿಂದ ಸಾಧ್ಯವೇ? ಹಾಗೊಮ್ಮೆ ನಿಮ್ಮ ಕೈನಲ್ಲಿ ಸಾಧ್ಯವಾಗಿದ್ದರೆ ಒಬ್ಬನೇ ಒಬ್ಬ ಶಾಸಕನನ್ನು ಸೆಳೆದು ತೋರಿಸಿ ಎಂದು ಈ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಸವಾಲು ಹಾಕುತ್ತೇವೆ” ಎಂದು ಬಿಜೆಪಿ ಕುಮಾರಸ್ವಾಮಿಯವರಿಗೆ ಖಡಕ್ ಸವಾಲು ರವಾನಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top