ದೇವರು

ನಿಮ್ಮ ಎಲ್ಲ ಕಷ್ಟಗಳು ಮಾಯವಾಗಿ ಸುಖಕರವಾದ ಜೀವನ ನಿಮ್ಮದಾಗಬೇಕು ಅಂದ್ರೆ ಪ್ರತಿದಿನ ತಪ್ಪದೆ ಈ ಮಂತ್ರ ಪಠಿಸಿ

ಒತ್ತಡದಿಂದ ಮುಕ್ತಿ ಹೊಂದಲು ಪ್ರತಿದಿನ ಈ ಮಂತ್ರವನ್ನು ಭಕ್ತಿ, ಶ್ರದ್ಧೆಯಿಂದ ಪಠಿಸಿ.ಶ್ರೀ ರಾಮನ ಪರಮ ಭಕ್ತ ಅಪ್ರತಿಮ ಸಾಹಸಿಯಾದ ಶ್ರೀ ಆಂಜನೇಯ ಸ್ವಾಮಿಯ ಲೀಲೆಗಳನ್ನು ಸಾರುವ ಮಂತ್ರವೇ ಹನುಮಾನ್ ಚಾಲೀಸ. ಹನುಮಂತನ ಆಶೀರ್ವಾದವನ್ನು ಪಡೆಯಲು ಭಕ್ತರು ಹನುಮಾನ್ ಚಾಲೀಸವನ್ನು ಭಕ್ತಿಯಿಂದ ಪಠಿಸುತ್ತಾರೆ.
ಹನುಮಾನ್ ಚಾಲೀಸವನ್ನು ಶ್ರೀರಾಮನ ಭಕ್ತನಾದ ತುಳಸಿದಾಸರು ರಚಿಸಿದ್ದಾರೆ. ಈ ಮಂತ್ರವು 40 ಪದ್ಯ ಚರಣಗಳಿಂದ ಕೂಡಿದೆ. ಇದನ್ನು ವಯಸ್ಸಿನ ಭೇದವಿಲ್ಲದೆ ಈ ಮಂತ್ರವನ್ನು ಯಾರು ಬೇಕಾದರೂ ಪಠಿಸಬಹುದು.
ಮುಂಜಾನೆ ಮತ್ತು ರಾತ್ರಿ ಮಲಗುವ ಮುನ್ನ ಹನುಮಾನ್ ಚಾಲೀಸವನ್ನು ಪಠಿಸಿದರೆ ಉತ್ತಮ. ಇದು ಉತ್ತಮ ಸಮಯವಾಗಿದೆ .ಹನುಮಂತನನ್ನು ಪೂಜೆ ಮಾಡಲು ಮಂಗಳವಾರ ಮತ್ತು ಶನಿವಾರದ ದಿನಗಳು ತುಂಬಾ ಪ್ರಾಶಸ್ತ್ಯವಾಗಿದೆ.

ಸಾಡೇಸಾತಿ ಶನಿಯ ಪ್ರಭಾವದಿಂದ ಬಳಲುತ್ತಿರುವವರು ಹನುಮಾನ್ ಚಾಲೀಸವನ್ನು ಪಠಿಸಿದರೆ ಈ ದೋಷದಿಂದ ಮುಕ್ತವಾಗಬಹುದು. ಹನುಮಾನ್ ಚಾಲೀಸವನ್ನು ಪಠಿಸುವುದರಿಂದ ಆರೋಗ್ಯ ಉತ್ತಮವಾಗುತ್ತದೆ ಹಾಗೆಯೇ ಮನಃಶಾಂತಿ ಕೂಡ ಲಭಿಸುತ್ತದೆ. ಹಾಗೆ ನಿಮ್ಮ ಜೀವನದಲ್ಲಿರುವ ಕಷ್ಟಗಳಿಂದಲೂ ಸಹ ಮುಕ್ತಿ ದೊರೆಯಬಹುದು.
ಹನುಮಂತ ದೇವರು ದುಷ್ಟ ಶಕ್ತಿಗಳಿಂದ ನಮ್ಮನ್ನು ಕಾಪಾಡುತ್ತಾರೆ. ಹಾಗೆಯೇ ದುಷ್ಟ ಮತ್ತು ಕ್ಷುದ್ರ ಶಕ್ತಿಗಳಿಗೆ ದಿಗ್ಬಂಧನ ಮಾಡುತ್ತದೆ. ಆದ್ದರಿಂದ ಈ ಹನುಮಾನ ಚಾಲೀಸವನ್ನು ಪಠಿಸುವುದರಿಂದ ದುಷ್ಟ ಶಕ್ತಿಗಳ ಪ್ರಭಾವ ನಮ್ಮ ಮೇಲೆ ಬೀರುವುದಿಲ್ಲ.

 

 

 

ನಾವು ಮಾಡಿರುವ ತಪ್ಪುಗಳಿಗೆ ಕ್ಷಮೆ ಯಾಚಿಸಲು ಈ ಹನುಮಾನ ಚಾಲೀಸವನ್ನು ಪಠಿಸಬಹುದು. ಎಂಟು ಬಾರಿ ಈ ಚಾಲೀಸವನ್ನು ರಾತ್ರಿ ಮಲಗುವ ಸಮಯದಲ್ಲಿ ಪಠಿಸುವುದರಿಂದ ದುಃಸ್ವಪ್ನಗಳು ಹತ್ತಿರವೂ ಸುಳಿಯುವುದಿಲ್ಲ.
ಹಾಗೆಯೇ ದೇವರ ಕೃಪೆ ಸಹ ನಿಮ್ಮ ಮೇಲೆ ಯಾವಾಗಲೂ ಇರುತ್ತದೆ. ನಿಮ್ಮ ಕಷ್ಟಗಳೆಲ್ಲಾ ದೂರವಾಗುತ್ತವೆ. ಭಯಗಳನ್ನು ಸಹ ಈ ಮಂತ್ರವು ದೂರವಾಗಿಸುತ್ತದೆ .ಮಕ್ಕಳು ಈ ಮಂತ್ರವನ್ನು ಪಠಿಸಿದರೆ ಒಳ್ಳೆಯದು.
ಪ್ರತಿ ಮಂಗಳವಾರ, ಗುರುವಾರ ಮತ್ತು ಶನಿವಾರ ಅಥವಾ ಮೂಲಾ ನಕ್ಷತ್ರಗಳಲ್ಲಿ ಈ ಹನುಮಾನ್ ಚಾಲೀಸಾ ಮಂತ್ರವನ್ನು ಪಠಿಸಿದರೆ ಶೀಘ್ರವಾಗಿ ಫಲಿತಾಂಶವನ್ನು ಕಾಣಬಹುದು. ಹನುಮಾನ್ ಚಾಲೀಸವನ್ನು ಪಠಿಸುವುದರಿಂದ ಋಣಾತ್ಮಕ ಶಕ್ತಿಗಳು ದೂರವಾಗಿ ಸುಖನಿದ್ದೆ ಆವರಿಸಲು ಸಹಾಯ ಮಾಡುತ್ತದೆ.

1008 ಬಾರಿ ಹನುಮಾನ್ ಚಾಲೀಸವನ್ನು ಪಠಿಸುವುದರಿಂದ ಜೀವನದಲ್ಲಿ ಉನ್ನತ ಸ್ಥಾನವನ್ನು ತಲುಪಬಹುದು. ಯಾರು ಹನುಮಾನ್ ಚಾಲೀಸವನ್ನು 100 ದಿನಗಳಲ್ಲಿ ನೂರು ಬಾರಿ ಪಠಿಸುವಂತವರಿಗೆ ಹುಟ್ಟು ಮತ್ತು ಸಾವುಗಳ ಚಕ್ರದಿಂದ ಮುಕ್ತರಾಗಿ ಅವನು ಮಹಾ ಸುಖವನ್ನು ಅನುಭವಿಸುತ್ತಾನೆ.
ಪ್ರತಿದಿನ ಸ್ನಾನ ಆದ ನಂತರ ಈ ಹನುಮಾನ್ ಚಾಲೀಸವನ್ನು ಪಠಿಸುವುದರಿಂದ ಒತ್ತಡದಿಂದ ಮುಕ್ತಿ ಹೊಂದಬಹುದು. ಪ್ರಾತಃ ಕಾಲದಲ್ಲಿ ಈ ಹನುಮಾನ್ ಚಾಲೀಸವನ್ನು ಪಠಿಸುವುದರಿಂದ ನಿಮ್ಮ ಮನಸ್ಸು ನಿರಾಳಗೊಳ್ಳುತ್ತದೆ ಮತ್ತು ನಿಮ್ಮ ಜೀವನದ ಸಂಪೂರ್ಣ ನಿಯಂತ್ರಣವು ನಿಮ್ಮ ಕೈಯಲ್ಲಿಯೇ ಇರುತ್ತದೆ. ಇದರಲ್ಲಿರುವ ಪ್ರತಿ ಪದ್ಯವೂ ಒಂದೊಂದು ಆಶೀರ್ವಾದವನ್ನು ನೀಡುತ್ತದೆ. ಹಾಗೆಯೇ ಭಕ್ತನ ಭಾವನೆ ಅಥವಾ ಶ್ರದ್ಧೆಗಳಿಗೆ ಅನುಸಾರವಾಗಿ ಪ್ರತಿ ಪದ್ಯದಲ್ಲೂ ಪ್ರತಿಫಲವನ್ನು ಪಡೆಯುತ್ತಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top