ಸಿನಿಮಾ

ಮೆಕ್ಯಾನಿಕ್ ಕೆಲಸ ಶುರು ಹಚ್ಕೊಂಡ ಸರ್ಜಾ ವಂಶದ ಕುಡಿ.

ಇಡೀ ಕರ್ನಾಟಕ ತಿಳಿದಂತೆ ಸರ್ಜಾ ವಂಶಕ್ಕೆ ಅದರದೇ ಆದ ಒಂದು ಗೌರವವಿದೆ ,ಅರ್ಜುನ್ ಸರ್ಜಾ ,ಚಿರು ಸರ್ಜಾ ಹಾಗೂ ದ್ರುವ ಸರ್ಜಾ ಅವರ ಅಮೋಘ ಅಭಿನಯಗಳಿಂದ ಜನರ ಮನಸಿನಲ್ಲಿ ಒಂದು ಸ್ಥಾನ ಮನ ಗಿಟ್ಟಿಸಿಕೊಂಡು ,ಅವರದೇ ಆದ ಅಭಿಮಾನ ಬಳಗವನ್ನು ಹೊಂದಿದ್ದಾರೆ .ಕೆಲವು ತಿಂಗಳು ಗಳ ಹಿಂದೆ ಅಷ್ಟೇ ಚಿರು ಸರ್ಜಾ ಅವರ ಬೆಸ್ಟ್ ಫ್ರೆಂಡ್ ಆದ ನಟಿ ಮೇಘನಾ ರಾಜ್ ಅವರನ್ನು ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟರು.ಮದುವೆಯಾದ ಮೇಲೆ ಒಂದರ ಮೇಲೆ ಒಂದು ಸಿನಿಮಾ ಮಾಡುತ್ತಾ ಫುಲ್ ಬ್ಯುಸಿ ಲೈಫ್ ನಡೆಸುತ್ತಿರುವ ಚಿರಂಜೀವಿ ಸರ್ಜಾ ಅವರ ಬ್ಯುಸಿ ಕೆಲಸದಲ್ಲಿ ಸಾಮಾಜಿಕ ಕೆಲಸಗಳಲ್ಲಿ ಅವರನ್ನು ತೊಡಗಿಸಿಕೊಂಡು ಜನ ಹಿತ ಕಾರ್ಯ ಒಂದನ್ನು ಮಾಡಿ ,ಜನರ ಮನಸ್ಸನ್ನು ಗೆದ್ದಿದ್ದಾರೆ

ಹಿರಿಯ ನಟಿ ಲಕ್ಷ್ಮಿಯವರು ನಡೆಸಿಕೊಡುತ್ತಿರುವ ಸದಾ ನಿಮ್ಮೊಂದಿಗೆ’ ಕಾರ್ಯಕ್ರಮದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ ,ಈಗಾಗಲೇ ಅನೇಕ ನಟ ನಟಿಯರು ಈ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಎಷ್ಟೋ ಜನ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿದ್ದಾರೆ.ಅದು ತಾರೆಯರು ಜನಸಾಮಾನ್ಯರ ಮಧ್ಯ ಹೋಗಿ ಕಾಮನ್ ಮ್ಯಾನ್ ಗಳು ಮಾಡುವ ಕೆಲಸವನ್ನು ಕಷ್ಟ ಪಟ್ಟು ಮಾಡಿ ಅದರಿಂದ ಬಂದ ಹಣದಿಂದ ಕಷ್ಟ ಎಂದು ಆ ಕಾರ್ಯಕ್ರಮಕ್ಕೆ ಬಂದ ಜನರ ಕಷ್ಟ ನಿವಾರಣೆ ಮಾಡಲು ನೀಡಿದ್ದಾರೆ.

 

 

 

ಕಳೆದ ಹಳೆಯ ಸಂಚಿಕೆಗಳಲ್ಲಿ ನಟಿ ರಶ್ಮಿಕಾ ಮಂದಣ್ಣ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿದ್ದರು.,ಧ್ರುವ ಸರ್ಜಾ ಆಟೋ ಓಡಿಸಿದ್ದರು,ನಟ ಶ್ರೀಮುರಳಿ ಕಬ್ಬಿನ ಹಾಲು ಮಾರಿ ಹಣ ಸಹಾಯ ಮಾಡಿದ್ದರು,’ಡಾಲಿ’ ಧನಂಜಯ್ ಜ್ಯೂಸ್ ಮಾರಿದ್ದರು,ನಟಿ ಪ್ರಿಯಾಂಕಾ ಉಪೇಂದ್ರ ಹೂ ಮಾರಿ ಸಹಾಯ ಮಾಡಿದ್ದರು ,ನಟಿ ಪ್ರಿಯಾಮಣಿ ರಸ್ತೆ ಪಕ್ಕದಲ್ಲಿ ಬೊಟ್ಟು, ಬಾಚಣಿಗೆ ಮಾರಿ ಸಹಾಯ ಮಾಡಿದ್ದರು ,ಮಾತಿನ ಮಲ್ಲ ಸೃಜನ್ ಲೋಕೇಶ್ ರೋಡ್ ಸೈಡ್ ನಲ್ಲಿ ಭೇಲ್ ಪೂರಿ ತಯಾರಿಸಿ ಮಾರಾಟ ಮಾಡಿದ್ದರು ವಿಜಯ್ ರಾಘವೇಂದ್ರ ಗೋಲಿಸೋಡಾ ಮಾರಿ ಸಹಾಯ ಮಾಡಿದ್ದರು, ಹಾಗೂ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಹೋಟೆಲ್ ನಲ್ಲಿ ಕೆಲಸ ಮಾಡಿದ್ದರು.

 

ಈಗ ಬಂತು ಸರ್ಜಾ ವಂಶದ ಇನ್ನೊಂದು ಕುಡಿ ಚಿರಂಜೀವಿ ಸರ್ಜಾ ಸರದಿ,ಪ್ರತಿ ವಾರ ಈ ಕಾರ್ಯಕ್ರಮಕ್ಕೆ ಒಂದೊಂದು ನಟ ನಟಿಯರು ಹೋಗುತ್ತಾರೆ ,ಈ ವಾರ ಅತಿಥಿಯಾಗಿ ಹೋಗುತ್ತಿರುವುದು ಚಿರಂಜೀವಿ ಸರ್ಜಾ,ಸಹಾಯ ಮಾಡುವ ದೊಡ್ಡ ಮನಸು ಇರುವ ಚಿರಂಜೀವಿ ಸರ್ಜಾ ದುಡಿಮೆಗಾಗಿ ಒಪ್ಪಿಕೊಂಡ ಕೆಲಸ ಮೆಕಾನಿಕ್ ಕೆಲಸ ,ಬಿ.ಟಿ.ಎಮ್.ಲೇಔಟ್ ನ ವರ್ಕ್ ಶಾಪ್ ಒಂದರಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡಿದರು ಚಿರು ,ಕಷ್ಟದಲ್ಲಿ ಇರುವ ಶಿವರಾಜ್ ಕುಟುಂಬಕ್ಕೆ ಸಹಾಯ ಮಾಡಲು ಆಕ್ಟರ್ ಚಿರು ಮೆಕ್ಯಾನಿಕ್ ಚಿರು ಆಗಿ ಬದಲಾದರು ,ವರ್ಕ್ ಶಾಪ್ ನಲ್ಲಿ ನಟ ಚಿರಂಜೀವಿ ಸರ್ಜಾ ಕಾರುಗಳ ಸರ್ವೀಸ್ ಮಾಡುವುದರ ಜೊತೆ ಡ್ಯಾನ್ಸ್ ಮಾಡಿ ಅಲ್ಲಿನ ಜನಕ್ಕೆ ಮನರಂಜನೆ ನೀಡಿದ್ದಾರೆ.
,ಈ ಕಾರ್ಯಕ್ರಮದಲ್ಲಿ ಚಿರು ಗೆದ್ದ ಹಣ ಎಷ್ಟು ಎಂದು ತಿಳಿಯಲು ತಪ್ಪದೆ ಭಾನುವಾರದ ಸಂಚಿಕೆ ನೋಡಿ

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top