ಸಮಾಚಾರ

ಈ ಮಗು ವಾಜಪೇಯಿ ಪುನರ್ಜನ್ಮವಂತೆ- ಏನಿದು ಸುದ್ದಿ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಮ್ಮಿಂದ ಮರೆಯಾಗ ತಿಂಗಳು ಕಳೆಯುತ್ತಾ ಬಂದಿದೆ. ಒಂದಷ್ಟು ಕಾಲ ಅಟಲ್ ಅವರ ಅಗಲಿಕೆಯಿಂದ ಶಾಕ್ ಆಗಿದ್ದವರು, ಕಂಬನಿಗರೆದಿದ್ದವರೆಲ್ಲ ಮತ್ತೆ ತಂತಮ್ಮ ಬದುಕಿನ ಜಂಜಡಗಳಲ್ಲಿ ಕಳೆದು ಹೋಗಿದ್ದಾರೆ. ಆದರೆ ರಾಯಚೂರಿನ ದಂಪತಿಯೊಂದು ವಾಜಪೇಯಿ ತಮ್ಮ ಮಗನ ರೂಪದಲ್ಲಿ ಪುನರ್ಜನ್ಮ ಪಡೆದಿದ್ದಾರೆ ಎಂದು ತಮ್ಮ ಮಗುವಿಗೆ ಅಟಲ್ ಜೀ ಅಂತ ನಾಮಕರಣ ಮಾಡಿದ್ದಾರೇ.

 

 

ಲಿಂಗಸುಗೂರಿನ ಸಜ್ಜಲ ಶ್ರೀ ಕಾಲೋನಿಯ ಪಾರ್ವತಿ ಶರಣ ಬಸವರಾಜ್ ದಂಪತಿ ತಮ್ಮ ಪುತ್ರ ವಾಜಪೇಯಿಯವರ ಪುನರ್ಜನ್ಮ ಎಂದು ಭಾವಿಸಿ, ಅಟಲ್ ಜೀ ಎಂದು ಹೆಸರಿಟ್ಟಿದ್ದಾರೆ.. ಅಟಲ್ ಬಿಹಾರಿ ವಾಜಪೇಯಿ ಅವರು ನಿಧನರಾಗಿ 13 ನೇ ದಿವಸಕ್ಕೆ ಮಗು ಜನಿಸಿದ್ದರಿಂದ ವಾಜಪೇಯಿಯವರೇ ಪುನರ್ಜನ್ಮ ಪಡೆದಿದ್ದಾರೆ ಎಂದು ಭಾವಿಸಲಾಗಿದೆ.

ಕಾಶಿ ಜಗದ್ಗುರು ಡಾ.ಚಂದ್ರಶೇಖರ್ ಶಿವಾಚಾರ್ಯ ಭಗವತ್ಪಾದರು ಮಗುವಿಗೆ ನಾಮಕರಣ ಮಾಡಿದ್ದಾರೆ.ಹಲವಾರು ಸ್ವಾಮೀಜಿಗಳ ಸಮ್ಮುಖದಲ್ಲಿ ನಾಮಕರಣ ಕಾರ್ಯ ನಡೆದಿದೆ ತಮ್ಮ ಮಗು ಅಜಾತ ಶತ್ರುವಿನಂತೆ ಕೀರ್ತಿಶಾಲಿಯಾಗಿ ಬೆಳೆಯಲಿ ಎಂಬ ಆಶಯವನ್ನು ಪೋಷಕರು ಹೊಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top