ಭವಿಷ್ಯ

ಈ 4 ರಾಶಿಯವರು ಸಾಲದ ಋಣವನ್ನು ಅಷ್ಟು ಬೇಗನೆ ತೀರಿಸಲು ಸಾಧ್ಯವಿಲ್ಲವಂತೆ ಅದಕ್ಕೆ ಸ್ವಲ್ಪ ಹುಷಾರಾಗಿರಿ

ಈ ನಾಲ್ಕು ರಾಶಿಯವರು ಯಾವುದೇ ಕಾರಣಕ್ಕೂ ಸಾಲವನ್ನು ಮಾಡಬಾರದು. ಒಂದು ವೇಳೆ ಸಾಲವನ್ನು ಮಾಡಿದರೆ ಅಷ್ಟು ಬೇಗನೆ ತೀರಿಸಲು ಆಗುವುದಿಲ್ಲ . ಬೇಗನೆ ಸಾಲದಿಂದ ಋಣ ಮುಕ್ತರಾಗಲು ಸಾಧ್ಯವಿಲ್ಲ.ಬಹು ಬೇಗನೆ ನೀವು ಸಾಲದಿಂದ ಋಣ ಮುಕ್ತರಾಗಿ ,ಮನೆಯಲ್ಲಿ ಸದಾ ಲಕ್ಷ್ಮೀ ದೇವಿಯು ನೆಲೆಸುವುದಕ್ಕೆ ಈ ಸಣ್ಣ ಕೆಲಸವನ್ನು ಮತ್ತು ಪರಿಹಾರವನ್ನು ಮಾಡಿಕೊಳ್ಳಿ.
ಈಗಿನ ಕಾಲದಲ್ಲಿ ಸಾಲ ಮಾಡದ ಜನರೇ ಇರುವುದಿಲ್ಲ. ಆದರೆ ಕೆಲವರು ಎಷ್ಟೇ ಸಲ, ಎಷ್ಟೇ ಸಾಲ ಮಾಡಿದರೂ ಅದನ್ನು ಬೇಗ ತೀರಿಸಿ ಋುಣ ಮುಕ್ತರಾಗುತ್ತಾರೆ. ಇನ್ನು ಕೆಲವರು ಜನ್ಮ ಪೂರ್ತಿ ತೀರಿಸಲು ಆಗದೆ ಸಾಲದ ಸುಳಿಯಲ್ಲಿ ಸಿಕ್ಕಿ ನರಳುತ್ತಿರುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆ ವ್ಯಕ್ತಿಗಳ ರಾಶಿ ಮತ್ತು ಆ ರಾಶಿಯವರ ಆಡಳಿತ ಗ್ರಹಗಳು ಅಂದರೆ ಕುಂಡಲಿ ಇದಕ್ಕೆ ಪ್ರಮುಖ ಕಾರಣವಾಗಿರುತ್ತದೆ. ಅದೇ ರೀತಿ ಈ ನಾಲ್ಕು ರಾಶಿಯವರು ಸಾಲ ಮಾಡಬಾರದು, ಮಾಡಿದರೆ ಜನ್ಮ ಪೂರ್ತಿ ಕಷ್ಟ ಪಟ್ಟರೂ ಸಾಲ ಮಾತ್ರ ತೀರುವುದಿಲ್ಲ. ಸಾಲವನ್ನು ಅವರು ಸ್ವಂತ ಅಂದರೆ ಶುಭ ಕಾರ್ಯಕ್ಕೂ, ಇಲ್ಲ ವ್ಯಾಪಾರ, ಉದ್ಯೋಗ ಆರಂಭಿಸುವುದಕ್ಕೆ ಇರಬಹುದು.

ಆದರೆ ನಮ್ಮ ಹಿರಿಯರು ಮೊದಲೇ ಹೇಳಿದ್ದಾರೆ. “ಹಾಸಿಗೆ ಇದ್ದಷ್ಟು ಕಾಲು ಚಾಚು” ಎಂದು ನಮ್ಮ ಹಿರಿಯರು ಹೇಳಿರುವ ಒಂದೊಂದು ಗಾದೆ ಮಾತನ್ನು ಅರ್ಥ ಮಾಡಿಕೊಂಡರೆ ನಮ್ಮ ಜೀವನದಲ್ಲಿ ಯಾವ ಕಷ್ಟವೂ ಬರುವುದೇ ಇಲ್ಲ ಬಂದರೂ ಮಂಜಿನಂತೆ ಕರಗಿ ಹೋಗುತ್ತವೆ.ಯಾವತ್ತೂ ಕೂಡ ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ, ಎಂಬುದು ಅಕ್ಷರಶಃ ನಿಜ. ಇನ್ನು ಯಾವ ಯಾವ ರಾಶಿಯವರು ಸಾಲವನ್ನು ಮಾಡಬಾರದು ಎಂದು ನೋಡುವುದಾದರೆ.

 

 

 

ಮಕರ ರಾಶಿ, ವೃಷಭ ರಾಶಿ, ಕಟಕ ರಾಶಿ. ಮತ್ತು ಧನಸ್ಸು ರಾಶಿ.
ಈ ನಾಲ್ಕು ರಾಶಿಯವರು ಸಾಲವನ್ನು ಮಾಡಲೇಬಾರದು. ಮಾಡಿದರೆ ಸಾಲವು ಮುಗಿಯಲ್ಲ. ಅದರ ಬಡ್ಡಿಯನ್ನು ಕಟ್ಟಲಾಗದೆ ಜೀವನಪೂರ್ತಿ ಸಾಲದ ಬಾದೆಯಲ್ಲಿಯೇ ನರಳಬೇಕಾಗುತ್ತದೆ. ಇವರು ಸ್ವಂತ ಉಪಯೋಗಕ್ಕೆ ಸಾಲ ಮಾಡಿದರೆ ಮಾತ್ರ ಕಷ್ಟವಲ್ಲ ,ಬದಲಾಗಿ ಬೇರೆಯವರು ಮಾಡುವ ಸಾಲಕ್ಕೆ ಜಾಮೀನು ಆದರೂ ಸಹ ಕಷ್ಟಕ್ಕೆ ಸಿಲುಕುವವರು.ಹೇಗೆ ಎಂದರೆ ಅವರನ್ನು ಜಾಮೀನು ಮಾಡಿ ಸಾಲ ಪಡೆದವರು ಸಾಲವನ್ನು ಹಿಂತಿರುಗಿಸದೆ ಇವರೇ ಅವರ ಸಾಲದ ಹೊರೆಯನ್ನು ಭರಿಸುವಂತೆ ಮಾಡಬಹುದು. ಆದ್ದರಿಂದ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

ಮಿಥುನ ಮತ್ತು ಕನ್ಯಾ ರಾಶಿಯವರು ಸಾಲವನ್ನು ಮಾಡಿದರೆ ,ಇವರು ಸಾಲ ಮಾಡುವ ಮೊದಲೇ ಸಾಲ ತೀರಿಸುವ ಎಲ್ಲ ರೀತಿಯ ತಯಾರಿಯನ್ನು ಮಾಡಿಕೊಂಡಿರುತ್ತಾರೆ.
ನೀವು ಯಾರೇ ಆಗಲಿ ಸಾಲದ ಸುಳಿಯಲ್ಲಿ ಸಿಕ್ಕು ಕೊಂಡಿರುವವರು ,ಈ ರೀತಿ ಪರಿಹಾರ ಮಾಡಿಕೊಂಡರೆ ಬೇಗನೆ ಋಣಮುಕ್ತರಾಗಬಹುದು. ಏನೆಂದು ನೋಡೋಣ ಬನ್ನಿ

ಮೊದಲು ನಿಮಗೆ ಮನೋ ಧೈರ್ಯ ಹೆಚ್ಚಿರಬೇಕು. ಜೊತೆಗೆ ದೇವರ ಅನುಗ್ರಹ ಕೂಡ ಇರಬೇಕು.ದೇವರ ಅನುಗ್ರಹ ಪಡೆಯಲು ಪೂಜೆ ಮಾಡುವಾಗ ಈ ಮಂತ್ರವನ್ನು ಪಠಿಸಿರಿ.
“ಮಂಗಲೋ ಭೂಮಿ ಪುತ್ರಶ್ಚ ಋುಣಹಾರ್ತಾ ಧನಪ್ರದಃ ಅಂಗಾರಕೋ ಯಮಶ್ಚವ ಸರ್ವರೋಗಪಹಾರಕಃ ಸರ್ವ ಧಾರಿದ್ರ್ ಯ ನಿವಾರಣಾಯ ಮಮ ಋಣ ದಹನಾಯ ನಮಃ”
ಬಡ್ಡಿ ಕಟ್ಟಲು ಆಗುತ್ತಿಲ್ಲ ,ಸಾಲ ಏನು ಮಾಡಿದರೂ ತೀರುತ್ತಿಲ್ಲ, ಸಾಲದ ಭಾರ ಹೆಚ್ಚಾಗುತ್ತಲೇ ಇದೆ. ಎನ್ನುವವರು ಕಮಲ ಬೀಜದ ಮಾಲೆಯನ್ನು ಐವತ್ನಾಲ್ಕು ಅಥವಾ ನೂರಾ ಎಂಟು ಬೀಜಗಳಿಂದ ಮಾಡಿರುವುದನ್ನು ಕೊರಳಿಗೆ ಹಾಕಿಕೊಳ್ಳಿ ಬೇಗನೆ ಪರಿಹಾರ ಸಿಗುವುದು.

ಹೆಣ್ಣು ಮಕ್ಕಳು ಏನಾದರೂ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದರೆ ಅಥವಾ ಚೀಟಿ ಅದು ಇದು ಕಷ್ಟದಲ್ಲಿ ಸಿಲುಕಿದ್ದರೆ ಅಂಥವರು ಪ್ರತಿ ಶುಕ್ರವಾರ ತಾಂಬೂಲ ಚೊಂಬಿನಲ್ಲಿ ನೀರನ್ನು ತುಂಬಿ ಅದಕ್ಕೆ ಚಿಟಕಿ ಉಪ್ಪು, ಸ್ವಲ್ಪ ಕಪ್ಪು ಎಳ್ಳು ಮತ್ತು ಒಂದು ರೂಪಾಯಿ ನಾಣ್ಯವನ್ನು ಹಾಕಿ ದೇವರ ಮುಂದೆ ಇಟ್ಟು ಪೂಜೆ ಮಾಡಿ, ನಂತರ ಮಾರನೇ ದಿನ ಅಂದರೆ ಶನಿವಾರ ಸಂಜೆ ಗೋಧೂಳಿ ಸಮಯ ಅಂದರೆ ಸಂಜೆ ಆರು ಗಂಟೆಯಿಂದ ಏಳು ಗಂಟೆಯ ಸಮಯದಲ್ಲಿ ಆ ನೀರನ್ನು ಬನ್ನಿ ಮರ ಅಥವಾ ತೆಂಗಿನ ಮರದ ಬುಡಕ್ಕೆ ಹಾಕಿ ಬನ್ನಿ .

ಏನು ಮಾಡಿದರು ಸಾಲ ತೀರುತ್ತಲೇ ಇಲ್ಲ ಅಂದರೆ ಗೋಮಾತೆ ಎಂದರೆ ಮುಕ್ಕೋಟಿ ದೇವರುಗಳು ವಾಸಿಸುವ ಗೋವಿನಲ್ಲಿ ನೆಲೆಸಿದ್ದಾರೆ ಎಂದು ನಮ್ಮ ಹಿಂದೂ ಪುರಾಣದಲ್ಲಿ ಹೇಳಿದ್ದಾರೆ. ಅಂತಹ ಗೋ ಮಾತೆಯ ಬಾಲದ ಒಂದು ಕೂದಲನ್ನು ತೆಗೆದುಕೊಂಡು ನಿಮ್ಮ ಪರ್ಸ್ ಅಥವಾ ಬ್ಯಾಗಿನಲ್ಲಿ ಇಟ್ಟುಕೊಳ್ಳಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top