ಮನೋರಂಜನೆ

ರಾಮಾಚಾರಿಯ ಅವತಾರದಲ್ಲಿ ಪಡ್ಡೆಹುಲಿ-ಇದು ಸಾಹಸಸಿಂಹನಿಗೊಂದು ಟ್ರಿಬ್ಯೂಟ್ ಸಾಂಗ್.

ಸಾಮಾನ್ಯವಾಗಿ ಸ್ಟಾರ್ ನಟರ ಸಿನಿಮಾಗಳ ವಿಚಾರವಾಗಿ ಶುರುವಾದಾಗಿನಿಂದ ರಿಲೀಸಿನ ತನಕ ಒಂದಲ್ಲಾ ಒಂದು ಸುದ್ದಿ ಹೊರಬೀಳುತ್ತಲೇ ಇರುತ್ತದೆ. ಆದರೆ ಪಡ್ಡೆಹುಲಿ ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಅಭಿನಯದ ಮೊದಲ ಸಿನಿಮಾವಾದರೂ ಗಾಂಧಿನಗರ ಮತ್ತು ಪ್ರೇಕ್ಷಕರ ವಲಯದಲ್ಲಿ ಕ್ರಿಯೇಟ್ ಮಾಡಿರುವ ಟಾಕ್ ಜೋರಾಗಿದೆ. ಬಹುಶಃ ಇದಕ್ಕೆ ಕಾರಣ ಕೆ. ಮಂಜು ಅವರೇ ಇರಬಹುದು!

 

 

ಪಡ್ಡೆಹುಲಿಯಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಅವರ ದೊಡ್ಡ ಅಭಿಮಾನಿ ಪಾತ್ರದಲ್ಲಿ ಶ್ರೇಯಸ್ ಕಾಣಿಸಿಕೊಂಡಿದ್ದು, ವಿಷ್ಣುದಾದನಿಗಾಗಿ ಹಾಡೊಂದನ್ನು ಸಮರ್ಪಿಸಲು ಚಿತ್ರತಂಡ ನಿರ್ಧರಿಸಿದೆ. ಈ ಹಾಡು ಇದೇ ತಿಂಗಳ 18ರಂದು ಸಾಹಸಸಿಂಹ ಜನ್ಮದಿನದಂದು ಬಿಡುಗಡೆಯಾಗಲಿದೆ. ಕಾರ್ತಿಕ್ ಈ ಗೀತೆಗೆ ಸಾಹಿತ್ಯ ಬರೆದಿದ್ದು ಹಾಡಿನಲ್ಲಿ ಥೇಟು ನಾಗರಹಾವು ರಾಮಾಚಾರಿಯ ಗೆಟಪ್ಪಿನಲ್ಲಿ ಶ್ರೇಯಸ್ ಕಾಣಿಸಿಕೊಂಡಿದ್ದಾರಂತೆ.. ಈ ವಿಶೇಷ ಹಾಡು Rap ಶೈಲಿಯ ಸಾಂಗ್ ಆಗಿದ್ದು ಹಾಡಿಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ನಿಶ್ ವಿಕಾ ನಾಯ್ಡು ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, 25 ವರ್ಷದ ನಂತರ ರವಿಚಂದ್ರನ್ ಹಾಗೂ ಸುಧಾರಾಣಿ ಜೋಡಿಯಲ್ಲಿ ಮತ್ತೆ ಚಿತ್ರದಲ್ಲಿ ನೋಡಬಹುದಾಗಿದೆ.. ತೇಜಸ್ವಿನಿ ಎಂಟರ್‌ಪ್ರೈಸಸ್ ಲಾಂಛನದಲ್ಲಿ ಎಂ ರಮೇಶ್ ರೆಡ್ಡಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಗುರುದೇಶಪಾಂಡೆ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಅವರ ಸಂಗೀತ ಮತ್ತು ಕೆ.ಎಸ್‌. ಚಂದ್ರಶೇಖರ್‌ ಅವರ ಛಾಯಾಗ್ರಹಣವಿದೆ. ಈಗಾಗಲೇ ಬಿಡುಗಡೆಗೊಂಡಿರುವ ಪ್ರೋಮೋದಲ್ಲಿನ ನಟನೆ ನೋಡಿದರೆ ಶ್ರೇಯಸ್ ಕನ್ನಡದಲ್ಲಿ ಮಾಸ್ ಹೀರೋ ಆಗಿ ನೆಲೆಗೊಳ್ಳುವ, ಪಡ್ಡೆಹುಲಿ ಚಿತ್ರ ಭರಪೂರ ಗೆಲುವೊಂದನ್ನು ತನ್ನದಾಗಿಸಿಕೊಳ್ಳುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top