fbpx
ಸಮಾಚಾರ

ಗೌತಮ್ ಗಂಭೀರ್ ಸೀರೆ ಉಟ್ಟು, ಬಿಂದಿ ಧರಿಸಿದ್ದು ಯಾಕೆ ಗೊತ್ತಾ?

ಸದ್ಯ ತಂಡದಿಂದ ಅವಕಾಶ ವಂಚಿತನಾಗಿರುವ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಗೌತಮ್ ಗಂಭೀರ್ ಕ್ರಿಕೆಟ್ ಮಾತ್ರವಲ್ಲದೆ ಅನೇಕ ಸಮಾಜಮುಖಿ ಕೆಲಸಗಳಲಿಂದಲೂ ಆಗಾಗ್ಗೆ ಸುದ್ದಿಯಾಗುತ್ತಿರುತ್ತಾರೆ.. ಇಂಥಾ ಗಂಭೀರ್ ಇದೀಗ ಸೀರೆ ಉಟ್ಟು, ಬಿಂದಿ ಹಾಕಿಕೊಳ್ಳುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

 

New Delhi: Cricketer Gautam Gambhir during the inauguration of seventh edition of Hijra Habba, in New Delhi.

ಸಲಿಂಗಕಾಮವನ್ನು ಅಪರಾಧವಲ್ಲ ಎಂದು ಪರಿಗಣಿಸಿ ಭಾರತೀಯ ದಂಡಸಂಹಿತೆಯ ಸೆಕ್ಷನ್ 377ರನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಏಳನೇ ವರ್ಷದ ತೃತೀಯ ಲಿಂಗಿಗಳ ಹಬ್ಬವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗೌತಮ್ ಗಂಭೀರ್ ಮಂಗಳ ಮುಖಿಯರಿಗೆ ಬೆಂಬಲಿಸುವ ಉದ್ದೇಶದಿಂದ ಸೀರೆ ಧರಿಸಿ, ಬಂಡಿ ಇಟ್ಟುಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ..

‘ಏಡ್ಸ್ ಅಲೈಯನ್ಸ್ ಇಂಡಿಯಾ’ ವತಿಯಿಂದ ಆಯೋಜನೆಗೊಂಡಿದ್ದ ಈ ಕಾರ್ಯಕ್ರಮದಲ್ಲಿ ತೃತೀಯಲಿಂಗಿಗಳು ಒಂದೆಡೆ ಸೇರಿ, ತಮ್ಮ ಸಮುದಾಯದ ಸಬಲೀಕರಣ ಬಗ್ಗೆ ಚರ್ಚಿಸಿದರು. ಇದರ ಜತೆಗೆ ತಮ್ಮ ಪ್ರತಿಭೆಯನ್ನು ಬಳಸಿಕೊಂಡು ಆಯಾ ಕ್ಷೇತ್ರದಲ್ಲಿ ಸಾಧನೆ ಮಾಡುವಂತೆ ಅರಿವು ಮೂಡಿಸಲಾಯಿತು.. ಇದೇ ವೇಳೆ, ಛತ್ತೀಸ್​ ಘಡ್​ನ ಸುಕ್ಮಾದಲ್ಲಿ ನಡೆದ ಬಾಂಬ್​ ಸ್ಫೋಟದಲ್ಲಿ ತನ್ನ ತಂದೆಯನ್ನು ಕಳೆದುಕೊಂಡ ಬಾಲಕಿಯ ವಿದ್ಯಾಭ್ಯಾಸದ ಖರ್ಚು ಭರಿಸಲು ತಾವು ಸಿದ್ದ ಎಂದು ಗಂಭೀರ್ ಭರವಸೆ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top