ಸಿನಿಮಾ

ರಶ್ಮಿಕಾ ಮಂದಣ್ಣ ಜೊತೆ ಬ್ರೇಕಪ್ ಆದ್ಮೇಲೆ ರಕ್ಷಿತ್ ಶೆಟ್ಟಿ ಮನಶಾಂತಿಗೆ ಮಾಡಿರೋ ಈ ಕೆಲಸ ಎಲ್ಲರೂ ಕಲಿಬೇಕು

‘ಕಿರಿಕ್ ಪಾರ್ಟಿ’ ಖ್ಯಾತಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ಅವರ ನಿಶ್ಚಿತಾರ್ಥ ಮುರಿದು ಬಿದ್ದಿದ್ದು, ವೃತ್ತಿ ಕಾರಣದಿಂದಾಗಿ ಇಬ್ಬರೂ ದೂರವಾಗಲು ನಿರ್ಧಾರ ಮಾಡಿದ್ದಾರೆ ಎಂದು ಅವರ ಆಪ್ತ ಮೂಲಗಳಿಂದ ತಿಳಿದು ಬಂದಿದೆ, ಟಾಲಿವುಡ್ ನಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಅವರು ಕಳೆದ ವರ್ಷ ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ನಿಶ್ಛಿತಾರ್ಥ ಮುರಿದುಕೊಳ್ಳುವ ಮುನ್ನ ಇಬ್ಬರ ಕುಟುಂಬದ ಹಿರಿಯರು ಮತ್ತು ಸ್ನೇಹಿತರ ಜತೆ ಸಮಾಲೋಚನೆ ನಡೆಸಿ ರಕ್ಷಿತ್‌ ಶೆಟ್ಟಿ ಮತ್ತು ರಶ್ಮಿಕಾರ ವೃತ್ತಿ ಜೀವನವನ್ನು ಗಮನದಲ್ಲಿಟ್ಟುಕೊಂಡು ಈ ತೀರ್ಮಾನಕ್ಕೆ ಬರಲಾಗಿದೆ ಎಂದು ರಶ್ಮಿಕಾ ಮಂದಣ್ಣ ತಾಯಿ ಸುಮನ್ ಮಂದಣ್ಣ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ, ಈ ಮಧ್ಯೆ ತಮ್ಮ ಎಲ್ಲ ಸೋಶಿಯಲ್ ಮೀಡಿಯಾ ಹ್ಯಾಂಡಲ್ ಗಳನ್ನು ಡಿ ಆಕ್ಟಿವ್ ಮಾಡಿರುವ ರಕ್ಷಿತ್ ಶೆಟ್ಟಿ ,ಯಾವ ಕರೆಗಳನ್ನು ಸ್ವೀಕರಿಸುತ್ತಿಲ್ಲ .

ಅದರಂತೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರೂ ಕೂಡ ಸಾಮಾಜಿಕ ಜಾಲತಾಣಗಳನ್ನು ತಮ್ಮ ಸಿನಿಮಾ ಮತ್ತು ವಯಕ್ತಿಕ ವಿಚಾರಗಳನ್ನ ಶೇರ್ ಮಾಡಿಕೊಳ್ಳೋಕೆ ಮತ್ತು ಸಿನಿಮಾ ಪ್ರಚಾರಕ್ಕಾಗಿಯೂ ಅತ್ಯುತ್ತಮವಾಗಿ ಬಳಸಿಕೊಳ್ಳುತ್ತಿದ್ದರು. ಆದರೆ ತಮ್ಮ ಟ್ವಿಟರ್ ಅಕೌಂಟ್ ಕ್ಲೋಸ್ ಮಾಡುವ ಮೂಲಕ, ಸೋಷಿಯಲ್ ಮೀಡಿಯಾ ಲೋಕಕ್ಕೆ ಗುಡ್ ಬೈ ಹೇಳಿದ್ದಾರೆ,.ಕಳೆದ ಮೂರ್‍ನಾಲ್ಕು ವರ್ಷಗಳಿಂದ ಸೋಷಿಯಲ್ ಮೀಡಿಯಾಗಳಲ್ಲಿ ತುಂಬಾನೇ ಆಕ್ಟೀವ್ ಆಗಿದ್ದರು. ತಮ್ಮ ಪ್ರತಿದಿನದ ವಿಶೇಷತೆಗಳು, ತಾವು ಮಾಡುತ್ತಿರುವ ಕೆಲಸಗಳು, ಭೇಟಿ ನೀಡಿದ ಪ್ರತಿ ಸ್ಥಳ, ಅಲ್ಲಿಯ ವಿಶೇಷತೆಗಳು ಹೀಗೆ ಪ್ರತಿಯೊಂದನ್ನು ಕುರಿತು ತಮ್ಮ ಫೇಸ್‌ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್ ಅಕೌಂಟುಗಳಲ್ಲಿ ಅಪ್ಡೇಟ್ ಮಾಡುತ್ತಿದ್ದರು. ಆದರೆ ಭಾನುವಾರ ‘ನಾನು ಸಾಮಾಜಿಕ ಜಾಲತಾಣಗಳಿಂದ ಹೊರನಡೆಯುವ ಬಗ್ಗೆ ಚಿಂತನೆ ನಡೆಸುತ್ತಿದ್ದೇನೆ. ನನಗೆ ನೀವು ಅತ್ಯಧಿಕ ಪ್ರೀತಿ ತೋರಿಸಿದ್ದೀರಿ. ಅದಕ್ಕೆ ನನ್ನ ಧನ್ಯವಾದ. ಲವ್ ಯು ಆಲ್’ ಎಂದು ಪೋಸ್ಟ್ ಹಾಕೋ ಮೂಲಕ ಸೋಷಿಯಲ್ ಮೀಡಿಯಾ ಲೋಕಕ್ಕೆ ಗುಡ್ ಬೈ ಹೇಳಿದ್ದರು.

 

 

“ಎಲ್ಲರೂ ಆಕೆಯನ್ನೇ ದೂಷಿಸುವುದನ್ನು ನಾನು ಸಾಮಾಜಿಕ ಜಾಲತಾಣದಲ್ಲಿ ಗಮನಿಸಿದ್ದೇನೆ,. ದಯವಿಟ್ಟು ಆಕೆಯನ್ನು ಶಾಂತಿಯಿಂದ ಇರಲು ಬಿಟ್ಟು ಬಿಡಿ. ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳನ್ನು ನಂಬಬೇಡಿ ಆದಷ್ಟು ಬೇಗ ಈ ಎಲ್ಲಾ ವಿಚಾರಕಕ್ಕೂ ನಾವೇ ಅಂತಿಮ ತೆರೆ ಎಳೆಯುತ್ತೇವೆ.. ಅಲ್ಲದೇ ಬಹಳ ಫೇಸ್​​ಬುಕ್ ಸೇರಿದಂತೆ ಸೋಶಿಯಲ್ ಮೀಡಿಯಾದಿಂದ ದೂರ ಸರಿದಿದ್ದ ರಕ್ಷಿತ್ ಶೆಟ್ಟಿ, ಈಗ ಈ ವಿಚಾರವನ್ನು ಸ್ಪಷ್ಟಪಡಿಸಲು ಮತ್ತೆ ತಮ್ಮ ಫೇಸ್​ಬುಕ್’ಗೆ ಬಂದು ಪೋಸ್ಟ್ ಮಾಡಿದ್ದರು”.

 

 

ಯಾರ ಫೋನ್ ಕರೆಗೂ ಸಿಗದ ರಕ್ಷಿತ್ ಈಗ ಎಲ್ಲ ರಾದ್ಧಾಂತಗಳಿಂದ ಸ್ವಲ್ಪ ಮನಶಾಂತಿ ಪಡೆಯಲು ವಿದೇಶ ಪ್ರವಾಸದ ಮೊರೆ ಹೋಗಿದ್ದಾರೆ , ತಮ್ಮ ಆಪ್ತ ಸ್ನೇಹಿತರಾದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ,ಖ್ಯಾತ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಜೊತೆಗೂಡಿ ಜಾಲಿಯಾಗಿ ಫುಕೆಟ್, ಪಟಾಯ ಕಡೆಗೆ ಪ್ರಯಾಣ ಬೆಳೆಸಿದ್ದಾರೆ , ಇನ್ನಾದರೂ ಹಾಲಿಡೇ ಮುಗಿಸಿಕೊಂಡು ಈ ಎಲ್ಲ ಗೊಂದಲಗಳಿಗೆ ಕೊನೆ ಹಾಡುತ್ತಾರೆ ಕಾದು ನೋಡಬೇಕಿದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top