fbpx
ಸಿನಿಮಾ

ನಿಮಗೆ ವಾರಕ್ಕೆ ಒಂದು ಫಿಲಂ ನೋಡ್ಲೇಬೇಕು ಅನ್ನೋ ಹುಚ್ಚಿದ್ಯಾ ಹಾಗಿದ್ರೆ ನೀವು ಈ ವಿಷ್ಯ ತಿಳ್ಕೊಳ್ಳೆಬೇಕು

ಚಿತ್ರಮಂದಿರಗಳ ಮತ್ತು ಮಲ್ಟಿಪ್ಲೆಕ್ಸ್ಗಳ ಮಾಲೀಕರು ಚಲನಚಿತ್ರ ಪ್ರೇಕ್ಷಕರ ಸಂಖ್ಯೆಯಲ್ಲಿ ಕುಸಿಯುತ್ತಿರುವ ಹಿನ್ನಲೆಯಲ್ಲೂ ಸಹ ರಾಜ್ಯ ಸರ್ಕಾರವು ಚಲನಚಿತ್ರ ಥಿಯೇಟರ್ ಗಳಿಗೆ ವಾರ್ಷಿಕ ಅನುಮತಿ ಶುಲ್ಕವನ್ನು 350% ಹೆಚ್ಚಿಸಿದೆ.

ಕಳೆದ ಎರಡು ದಶಕಗಳಿಂದ 100 ಚದರ ಮೀಟರಿಗೆ 1,000 ರೂ. ಪರವಾನಗಿ ಶುಲ್ಕವನ್ನು ಪಾವತಿಸಿರುವ ಥಿಯೇಟರ್ ಮಾಲೀಕರು ಈಗ 100 ಚದರ ಮೀಟರಿಗೆ 4,500 ರೂ ಪಾವತಿ ಮಾಡಬೇಕಿದೆ ಇದರಿಂದ ಥಿಯೇಟರ್ ಮಾಲೀಕರ ಸಂಘ ಭಾರಿ ನಷ್ಟಕ್ಕೆ ಈಡಾಗುವ ಪರಿಸ್ಥಿತಿ ಎದುರಾಗುತ್ತದೆ .ಕನ್ನಡ ಚಲನಚಿತ್ರೋದ್ಯಮದ ಮೇಲೆ ಭಾರೀ ಪರಿಣಾಮ ಬೀರುತ್ತದೆ ಎಂದು ಥಿಯೇಟರ್ ಮಾಲೀಕರು ಈಗಾಗಲೇ ಎಚ್ಚರಿಸಿದ್ದಾರೆ. ಟಿಕೆಟ್ಗಳ ರೇಟ್ ಬಗ್ಗೆ ಈಗಾಗಲೇ ದೂರು ನೀಡುತ್ತಿರುವ ಚಲನಚಿತ್ರ ಪ್ರೇಕ್ಷಕರಿಗೆ ಸಿನಿಮಾ ನೋಡುವುದು ಮತ್ತಷ್ಟು ಹೊರೆಯಾಗುತ್ತದೆ .

 

 

ಗೃಹ ಇಲಾಖೆಯಿಂದ ಆಗಸ್ಟ್ 30 ರಂದು ಪ್ರಕಟವಾದ ಅಧಿಸೂಚನೆಯ ಪ್ರಕಾರ, ಪರವಾನಗಿ ಶುಲ್ಕದ ಹೆಚ್ಚಳವು ನೇರವಾಗಿ ಮನರಂಜನಾ ಕ್ಷೇತ್ರಗಳಿಗೆ ಸಂಬಂಧಿಸಿದ್ದು: 100 ಚದರ ಮೀಟರುಗಳ ನಂತರ ಪ್ರತಿ ಹೆಚ್ಚುವರಿ 50 ಚದರ ಮೀಟರ್ಗೆ ಪಾವತಿಸಬೇಕಾದ ಶುಲ್ಕ 2,250 ರೂ ಆಗಿರುತ್ತದೆ . ಪ್ರತಿ ಹೆಚ್ಚುವರಿ 50 ಚದರ ಮೀಟರ್ ಹಿಂದಿನ ಶುಲ್ಕ ರೂ. 500 ಇತ್ತು .

5,000 ಚದರ ಅಡಿ ವಿಸ್ತಿರ್ಣದ ಥಿಯೇಟರ್ ವಾರ್ಷಿಕ ಪರವಾನಗಿ ಶುಲ್ಕವಾಗಿ 3,000 ರೂ. ಪಾವತಿ ಮಾಡುತ್ತಿತ್ತು ಆದರೆ ಈ ಹೆಚ್ಚಳದ ನಂತರ ಸುಮಾರು ರೂ 20,000 ಪಾವತಿಸಬೇಕಾಗುತ್ತದೆ. ಪ್ರಸ್ತುತ ಸ್ಯಾಂಡಲ್ ವುಡ್ ನಲ್ಲಿ ಅನೇಕ ಸಿನಿಮಾಗಳು ಬಿಡುಗಡೆ ಯಾಗುತ್ತಿದ್ದರು ಸಹ ಚಿತ್ರಮಂದಿರಗಳಿಗೆ ಬರುವ ಜನರ ಸಂಖ್ಯೆಯು ಕಡಿಮೆಯಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಎಂದರೆ 8% ಜಿಎಸ್ಟಿ (ಸರಕು ಮತ್ತು ಸೇವೆಗಳ ತೆರಿಗೆ) , ಜಿಎಸ್ಟಿ ಏರಿದ ಪರಿಣಾಮ ಟಿಕೆಟ್ ಬೆಲೆ ಹೆಚ್ಚಾಗಿ ಜನ ಥಿಯೇಟರ್ ಕಡೆ ಮುಖ ಮಾಡೋದನ್ನೇ ನಿಲ್ಲಿಸಿದ್ದಾರೆ ಈಗ
ಪರವಾನಗಿ ಶುಲ್ಕ ಹೆಚ್ಚಿಸುವ ಮೂಲಕ ಪ್ರತಿದಿನ ತಮ್ಮ ಸಂಬಳಕ್ಕಾಗಿ ದುಡಿಯುವ ಥಿಯೇಟರ್ ಕೆಲಸಗಾರರು ಹಾಗು ಮಾಲೀಕರ ಮೇಲೆ ಹೆಚ್ಚಿನ ಹೊರೆ ಬೀಳುತ್ತದೆ , ಇದನ್ನು ನಿಭಾಯಿಸಲು ಥಿಯೇಟರ್ ಗಳಲ್ಲಿ ಟಿಕೆಟ್ ಬೆಲೆ ಹೆಚ್ಚಿಸುವುದು ಅನಿವಾರ್ಯವಾಗುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top