fbpx
ದೇವರು

ಸುಲ್ತಾನರ ಆಕ್ರಮಣಕ್ಕೆ ತುತ್ತಾದರೂ ಕೂಡ ಇವತ್ತಿಗೂ ಜಗತ್ತಿನ ಜನರನ್ನು ನಿಬ್ಬೆರಗಾಗಿಸುವ ಶಕ್ತಿಯುತ ದೇವಸ್ಥಾನ,ಇಲ್ಲಿ ನಡೆದಿದೆ ಊಹಿಸಲಾಗದ ಮಹಾತಾಯಿಯ ಪವಾಡಗಳು

ಎಷ್ಟು ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿದೆ ಈ ಮಧುರೈ ಮೀನಾಕ್ಷಿ ಮಂದಿರ ?ಈ ಮಂದಿರದ ಮೇಲೆ ಅದೆಂತಹ ದಾಳಿ ನಡೆದಿತ್ತು ? ಅದರ ಇತಿಹಾಸ ಗೊತ್ತಾ ?
ಅದು ಭಾರತದ ಅತಿ ದೊಡ್ಡ ದೇವಾಲಯ. ದಕ್ಷಿಣ ಭಾರತದ ಹೆಮ್ಮೆಯ ಪ್ರತೀಕ. ದೆಹಲಿಯ ಸುಲ್ತಾನರ ಆಕ್ರಮಣಕ್ಕೆ ತುತ್ತಾದರೂ ಕೂಡ ಇವತ್ತಿಗೂ ಕೂಡ ಈ ಜಗತ್ತಿನ ಜನರನ್ನು ನಿಬ್ಬೆರಗಾಗಿಸುವ ಮಹಾನ್ ದೇವಾಲಯ ಇದಾಗಿದೆ . 3 ಸಾಮ್ರಾಜ್ಯಗಳಿಗೆ ನೆಲೆ ಕೊಟ್ಟ ಹತ್ತಾರು ವೀರ ಕತೆಗಳಿಗೆ ಸಾಕ್ಷಿಯಾದ ಭಾರತದ ವಾಸ್ತು ಶಿಲ್ಪ ಕ್ಕೆ ಕನ್ನಡಿಯಾಗಿರುವ ಮಹಾನ್ ದೇವಾಲಯದ ಚರಿತ್ರೆಯನ್ನು ನಾವು ತಿಳಿದುಕೊಳ್ಳೋಣ ಬನ್ನಿ.
ಇಡೀ ಭಾರತವನ್ನು ನಾವು ನೋಡುವುದಾದರೆ ದಕ್ಷಿಣ ಭಾರತದಲ್ಲಿ ವಿಶಿಷ್ಟವಾಗಿ ನಿಲ್ಲುತ್ತದೆ. ರಾಮಾಯಣ ಮಹಾಭಾರತದ ಮೂಲ ಉತ್ತರ ಭಾರತವೇ ಆದರೂ ಕೂಡ ಆ ಇಡೀ ಮಹಾ ಕಥನದಲ್ಲಿ ದಕ್ಷಿಣ ಭಾರತದ ಪಾತ್ರ ಮಹತ್ವವಾಗಿದೆ . ಹಾಗೆಯೇ ಪ್ರಾಕೃತಿಕವಾಗಿಯು ದಕ್ಷಿಣ ಭಾರತ ವಿಶಿಷ್ಟವಾಗಿ ನಿಲ್ಲುತ್ತದೆ. ಶತಶತಮಾನಗಳಿಂದ ಹಿಡಿದು ಕ್ರಿಸ್ತ ಹುಟ್ಟಿದ ನಂತರ 13 ಶತಮಾನಗಳವರೆಗೂ ದಕ್ಷಿಣ ಭಾರತದ ನೆಲ ಆಕ್ರಮಣಕಾರರ ಕೈಗೆ ಸಿಗದೆ ಉಳಿದುಕೊಂಡಿತ್ತು.

ಅಂತಹ ಅದೆಷ್ಟೋ ದೇವಾಲಯಗಳು ಜಾಗ ಪಡೆದಿವೆ. ಅಂತಹ ಅದ್ಭುತಗಳ ಸಾಲಿಗೆ ದಕ್ಷಿಣ ಭಾರತದಲ್ಲಿ ಇರುವ ಅಸಂಖ್ಯಾತ ದೇವಾಲಯಗಳು ಸೇರುತ್ತವೆ. ಅದರಲ್ಲೂ ತಮಿಳುನಾಡಿನಲ್ಲಿರುವ ದೇವಾಲಯಗಳು ಜಗತ್ತಿನ ಹುಬ್ಬೇರುವಂತೆ ಮಾಡಿವೆ. ತಮಿಳುನಾಡು ದೇವಾಲಯಗಳ ಪ್ರದೇಶ. ಅದರಲ್ಲೂ ಮೂಲ ತಮಿಳಿನ ಜಾಗವಾಗಿರುವ ಈ ಪ್ರದೇಶವಂತೂ ದೇವಾಲಯಗಳ ನಗರಿ ಎಂದು ಕರೆಸಿಕೊಳ್ಳುತ್ತಿದೆ. ವೈಘಯ್ ನದಿಯ ದಂಡೆಯಲ್ಲಿರುವ ಈ ನಗರದಲ್ಲೇ ಜಗತ್ಪ್ರಸಿದ್ಧವಾದ ದೇವಾಲಯವಿರುವುದು.

 

 

 

ಮೀನಾಕ್ಷಿ ದೇವಾಲಯದ ಕಥೆ.
ಇದೊಂದು ಅಪರೂಪದ ದೇವಾಲಯ . ಇಲ್ಲಿರುವ ಪ್ರತಿಯೊಂದು ಕಲ್ಲು ಸಹ ಒಂದೊಂದು ಕಥೆಯನ್ನು ಹೇಳುತ್ತದೆ. ಅದರಲ್ಲೂ ಇಲ್ಲಿರುವ ದೇವಿಯ ರೂಪವು ತುಂಬಾ ಅಪರೂಪ.ಇಲ್ಲಿರುವ ದೇವಿಯ ಶಕ್ತಿ ತುಂಬಾ ಅಪೂರ್ವ. ಈ ಶಕ್ತಿ ಸ್ವರೂಪಿಣಿ ಬಳಿ ಹೋಗಿ ಭಕ್ತಿಯಿಂದ ಏನೇ ಬೇಡಿಕೊಂಡರು ಭಕ್ತರ ಇಷ್ಟಾರ್ಥಗಳು ನೆರವೇರುತ್ತವೆ. ಎಂಥವರನ್ನೂ ಬೆರಗುಗೊಳಿಸುವ ಮಹಿಮಾನ್ವಿತ ಶಕ್ತಿಯ ಕ್ಷೇತ್ರವಿದು. ಎನ್ನುವುದನ್ನು ತಿಳಿದುಕೊಳ್ಳುವುದು ಮೊದಲು ಇತಿಹಾಸವನ್ನು ತಿಳಿದುಕೊಳ್ಳೋಣ
ಮಧುರೈನ ಈ ದೇಗುಲ ಭಾರತದ ಅತಿ ದೊಡ್ಡ ದೇವಸ್ಥಾನ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ. ಅದರಲ್ಲೂ ನಮ್ಮ ದಕ್ಷಿಣ ಭಾರತದ ಹೆಮ್ಮೆ ಇದು .ನೀವು ಈ ದೇಗುಲದ ವಾಸ್ತು ಶಿಲ್ಪದ ನಿರ್ಮಾಣದ ಬಗ್ಗೆ ಕೇಳಿದರೆ ಬೆರಗಾಗುತ್ತೀರಿ. ಸಾವಿರಾರು ವರ್ಷಗಳ ಇತಿಹಾಸವಿರುವ ಶೈವ ಸಂಪ್ರದಾಯದಲ್ಲಿ ನಿರ್ಮಾಣಗೊಂಡಿದೆ.
ಪ್ರಖ್ಯಾತ ಸಂತ ಹಾಗೂ ಸುಪ್ರಸಿದ್ಧ ತತ್ವಜ್ಞಾನಿ ತಿರುಗರವರು ಸಾಹಿತ್ಯದಲ್ಲಿ ಉಲ್ಲೇಖಿಸಿರುವಂತೆ ದೇವಾಲಯವನ್ನು ಏಳನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ವಿಜಯನಗರದ ಆಳ್ವಿಕೆಯ ಕಾಲದಲ್ಲಿ ನಾಯಕರಿಂದ ನಿರ್ಮಿಸಲ್ಪಟ್ಟಿದೆ. ಈ ದೇಗುಲ ಒಂದಲ್ಲ ಎರಡಲ್ಲ ಬರೋಬರಿ 14 ಗೋಪುರಗಳನ್ನು ಹೊಂದಿದ್ದು, ಆ ಹದಿನಾಲ್ಕರಲ್ಲಿ ಅತಿ ತುಂಬಾ ಎತ್ತರವನ್ನು ಹೊಂದಿರುವ ಗೋಪುರ ವೆಂದರೆ 59 .9 ಮೀಟರ್ ಇರುವ ರಾಜಗೋಪುರ.

ಸಾಮಾನ್ಯವಾಗಿ ಈ ದೇವಸ್ಥಾನವನ್ನು ಎಷ್ಟು ವಿಸ್ತೀರ್ಣದಲ್ಲಿ ಕಟ್ಟಿರುತ್ತಾರೆ ?
10 ಗುಂಟೆ , ಒಂದು ಎಕರೆ, ಎರಡು ಎಕರೆ ಅಷ್ಟೇ ಅಲ್ಲವೇ , ಆದರೆ ಮಧುರೈನ ಈ ದೇಗುಲ ಇರುವುದು ಒಟ್ಟಾಗಿ 45 ಎಕರೆ ಪ್ರದೇಶದಲ್ಲಿ .ಈ ವಿಚಾರ ಕೇಳಿದ ತಕ್ಷಣ ನಿಮ್ಮ ಕಣ್ಣುಗಳು ಅರಳುತ್ತವೆ. ಕಣ್ಣ ದೃಷ್ಟಿ ಹರಿಯಲು ಕಷ್ಟ ಆಗಿಸುವ ವಿಸ್ತೀರ್ಣ ವಾಗಿರುವುದರಿಂದಲೇ, ಇದು ಭಾರತದ ಅತಿ ದೊಡ್ಡ ದೇಗುಲ ಎಂಬ ಹೆಸರು ಗಳಿಸಿದೆ.ಈ ದೇವಸ್ಥಾನದ ಉದ್ದ 254 ಮೀಟರ್, ಮತ್ತು ಹಗಲ 237 ಮೀಟರ್ ಇದೆ .ಇಲ್ಲಿರುವ ಕಂಬಗಳು ಬರೋಬರಿ 985. ಈ ಕಂಬಗಳನ್ನು ಒಳಗೊಂಡಿರುವ ಕಟ್ಟಡವನ್ನು ರಾಜ ವಿಶ್ವನಾಥನ ಆಡಳಿತದ ಸಂದರ್ಭದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಇತಿಹಾಸ ಹೇಳುತ್ತದೆ.
ಇನ್ನು ಅತ್ಯಂತ ಮೋಹಕವಾಗಿ ಕೆತ್ತನೆಗೊಂಡಿರುವ ಈ ಕಂಬಗಳು ಸಂಗೀತವಾದ್ಯಗಳು ಎಂದರೆ ನೀವು ನಂಬಲೇಬೇಕು. ಇಲ್ಲಿರುವ ಕಂಬಗಳನ್ನು ನೀವು ಮೀಟಿದಾಗ ಅವುಗಳಿಂದ. ಮಧುರವಾದ ಸಂಗೀತನಾದ ಹೊರಹೊಮ್ಮುತ್ತದೆ. ಒಂದೊಂದು ಕಂಬದಲ್ಲೂ ಸಹ ತಬಲಾ, ವೀಣೆ ಹೀಗೆ ಅನೇಕ ಸಂಗೀತ ವಾದ್ಯಗಳು ಅಚ್ಚರಿ ಹುಟ್ಟಿಸುತ್ತವೆ .ಅಷ್ಟೊಂದು ಕಂಬಗಳನ್ನು ಕೆತ್ತಿ,ಅಷ್ಟೇ ಸಮರ್ಪಕವಾಗಿ ಜೋಡಿಸಿ ದೇಗುಲವನ್ನು ಕಟ್ಟುವುದು ಸಾಮಾನ್ಯವಾದ ಕೆಲಸ ಅನ್ನಿಸುವುದಿಲ್ಲ. ಅದು ಈಗಿನ ತಂತ್ರಜ್ಞಾನದ ಗಾಳಿ ಗಂಧವೇ ಇಲ್ಲದ ಕಾಲದಲ್ಲಿ, ಅವತ್ತಿನ ತಂತ್ರಜ್ಞಾನಕ್ಕೆ ನಾವು ತಲೆ ಬಾಗಲೇಬೇಕು.
ಇನ್ನು ದೇಗುಲದ ಒಳಗೆ ಸಾಗಿದರೆ ಭವ್ಯವಾದ ಕಲ್ಯಾಣಿ ಕಾಣಿಸುತ್ತದೆ. ಸುತ್ತಲೂ ಇರುವ ಕಲ್ಲು ಮೆಟ್ಟಿಲುಗಳ ಮಧ್ಯದಲ್ಲಿರುವ ದ್ವೀಪ ಅದರ ಮೇಲೆ ಇರುವ ಚಿತ್ತಾಕರ್ಷಕ ಕಂಬ ನೋಡುಗರ ಬಾಯಲ್ಲಿ ವಾವ್ ಎನ್ನುವ ಉದ್ಗಾರ ಹೊರಡಿಸುತ್ತವೆ. ಈ ದೇವಸ್ಥಾನ ಭಾರತದ ಪ್ರಮುಖ ಪುಣ್ಯ ಕ್ಷೇತ್ರಗಳಲ್ಲಿ ಒಂದು ,ಅಷ್ಟೇ ಅಲ್ಲದೆ ಪ್ರವಾಸಿಗರ ನೆಚ್ಚಿನ ಪ್ರವಾಸ ಸ್ಥಳದಲ್ಲಿ ಕೂಡ ಒಂದಾಗಿದೆ ಮೀನಾಕ್ಷಿ ದೇವಿಯ ಈ ದೇವಾಲಯ ಮಹಾದೇವನಾದ ಶಿವ ಮತ್ತು ಪಾರ್ವತಿಯ ಶಕ್ತಿ ಕೇಂದ್ರ ಎಂತಲೇ ಲಕ್ಷಾಂತರ ಭಕ್ತರಿಂದ ನಂಬಲಾಗಿದೆ.

 

 

 

ಇನ್ನು ಆ ದೇವಿಗೆ ಮೀನಾಕ್ಷಿ ಎನ್ನುವ ಹೆಸರು ಯಾಕೆ ಬಂತು ಎನ್ನುವ ಹೆಸರಿನ ಹಿಂದೆಯೂ ಸಹ ಒಂದು ಕಾರಣ ಇದೆ .ಅದೇನೆಂದರೆ ಆ ದೇವಿಯ ಕಣ್ಣಿನ ಆಕಾರ ಇರುವುದು ಮೀನಿನಂತೆ. ನೀರಿನಲ್ಲಿ ಮೀನು ಹೇಗೆ ನಿದ್ದೆ ಮಾಡದೇ ಎಚ್ಚರವಾಗಿರುತ್ತದೆಯೋ ಅದೇ ರೀತಿ ದೇವಿ ಮೀನಾಕ್ಷಿ ಕೂಡ ನಿದ್ರೆಗೆ ಜಾರದೆ ಸದಾ ಎಚ್ಚರದಿಂದ ಇದ್ದು, ತನ್ನ ಭಕ್ತರನ್ನು ಕಾಯುತ್ತಿರುತ್ತಾಳೆ ಎನ್ನುವ ನಂಬಿಕೆ ಕೋಟ್ಯಾನುಕೋಟಿ ಭಕ್ತರದ್ದು. ಹೀಗಾಗಿಯೇ ಭಕ್ತಸಾಗರ ಈಕೆಯನ್ನು ಮಧುರೈ ಮೀನಾಕ್ಷಿ ಎಂದೇ ಆರಾಧನೆ ಮಾಡುತ್ತಾರೆ.

ತಮಿಳುನಾಡಿನಲ್ಲಿ ಅತಿದೊಡ್ಡ ನಗರ ಮದುರೈ .ಇದನ್ನು ದಕ್ಷಿಣ ಭಾರತದ ಅಥೆನ್ಸ್ ಎಂದೇ ಕರೆಯಲಾಗುತ್ತದೆ .ಈ ನಗರಕ್ಕೆ ಮಧುರೈ ಎನ್ನುವ ಹೆಸರು ಬಂದಿರುವ ಹಿಂದೆ ಒಂದು ಕುತೂಹಲಕಾರಿ ವಿಷಯ ಇದೆ.
ಪಾಂಡ್ಯರ ರಾಜವಂಶದ ಕುಲಶೇಖರ ಸ್ವಯಂಭು ಲಿಂಗವಿದ್ದ ಆ ಪ್ರದೇಶವನ್ನು ಶುಚಿಗೊಳಿಸಿ ಅಲ್ಲಿ ಮಹೇಶ್ವರನಿಗೆ ಎಂದೇ ಒಂದು ದೇವಾಲಯವನ್ನು ನಿರ್ಮಿಸಲು ಅಪ್ಪಣೆ ನೀಡುತ್ತಾನೆ . ಆ ದೇವಾಲಯವು ನಿರ್ಮಾಣವಾಗುತ್ತದೆ. ಅದರಿಂದ ಪ್ರಸನ್ನಗೊಂಡ ಶಿವಪರಮಾತ್ಮ ತನ್ನ ಜಟಾಜೂಟವನ್ನು ಬಿಡಿಸಿ ಅಲ್ಲಿ ಜೇನಿನ ಮಳೆಯನ್ನೇ ಸುರಿಸುತ್ತಾನಂತೆ. ಹೀಗಾಗಿ ಈ ಪುಣ್ಯ ಸ್ಥಳಕ್ಕೆ ಮಧುರೈ ಎನ್ನುವ ಹೆಸರು ಬಂದಿದೆ. ಈ ಮಧು ಶಬ್ದಕ್ಕೆ ಒಂದು ವಿಶೇಷವಾದ ಅರ್ಥವೂ ಇದೆ. ಅದೇ ಅತಿಯಾದ ಸಿಹಿ ಎಂದು. ಆದ್ದರಿಂದ ಈ ಸ್ಥಳ ಮಧುರೈ ಎಂದೇ ಪ್ರಸಿದ್ಧಿ ಪಡೆದಿದೆ .
ಇನ್ನು ಹಲವು ವೈಶಿಷ್ಟ್ಯತೆಗಳನ್ನು ತನ್ನ ಒಡಲೊಳಗೆ ಇಟ್ಟುಕೊಂಡಿರುವ ಮಧುರೈ ತನ್ನ ಸಂಸ್ಕೃತಿ ,ಪರಂಪರೆಯಿಂದಲೇ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದೆ . ಇನ್ನು ಈ ಮಧುರೈ ವ್ಯಾಪಾರ ಕೇಂದ್ರವಾಗಿಯೂ ಪ್ರಾಮುಖ್ಯತೆಯನ್ನು ಪಡೆದಿದೆ. ಮೂರನೇ ಶತಮಾನದ ಕಾಲದಲ್ಲಿ ಗ್ರೀಕ್ ಮತ್ತು ರೋಮ್ ನ ವರ್ತಕರು ಇಲ್ಲಿಗೆ ಆಗಮಿಸಿ ಇಲ್ಲಿನ ಪಾಂಡ್ಯ ದೊರೆಗಳೊಂದಿಗೆ ವ್ಯಾಪಾರ ಸಂಪರ್ಕವನ್ನು ಹೊಂದಿದ್ದರು .ಈ ರೀತಿಯ ಮಧುರೈ ಹೆಸರಿನ ದೊರೆಗಳ ಹಲವು ಉಲ್ಲೇಖ ಮತ್ತು ಪ್ರಾಚೀನ ಮಾಹಿತಿಗಳು “ಪಾಂಡಿತ್ಯ ಪೂರ್ಣ” ಎನ್ನುವ ಗ್ರಂಥದಲ್ಲಿ ಅಡಕವಾಗಿದೆ.

ಇಂತಹ ಮಧುರೈ ಮುಸಲ್ಮಾನರಿಂದ ದಾಳಿಗೆ ಒಳಗಾಗಿತ್ತು ಎನ್ನುವುದು ಸಹ ಪ್ರಮುಖ ಅಂಶವಾಗಿದೆ. ಹೌದು ಸಾವಿರದ ಮುನ್ನೂರ ಹತ್ತರಲ್ಲಿ ಅಲ್ಲಾವುದ್ದೀನ್ ಖಿಲ್ಜಿಯ ದಂಡನಾಯಕ ಮಲ್ಲಿಕಾಪುರ ದಕ್ಷಿಣದ ಮೇಲೆ ದಾಳಿ ಮಾಡಿದ್ದ. ಆ ಸಮಯದಲ್ಲಿ ಅವನು ದೇವಾಲಯಗಳನ್ನು ಹಾಳು ಮಾಡಿದ್ದ . ಆನಂತರದಲ್ಲಿ ಮಹಮದ್ ಬಿನ್ ತುಘಲಕ್ ಕೂಡ ದಕ್ಷಿಣದ ಮೇಲೆ ದಾಳಿ ಮಾಡಿದ್ದ. ಹೀಗಾಗಿ ಈ ದೇವಾಲಯದಲ್ಲಿ ಇವತ್ತಿಗೂ ಕೂಡ ಭಗ್ನಗೊಂಡ ವಿಗ್ರಹಗಳನ್ನು ನಾವು ನೋಡಬಹುದು. ನಮ್ಮ ಸಂಸ್ಕೃತಿಯ ಮೇಲೆ ಮುಸಲ್ಮಾನರ ನಮ್ಮ ಮೇಲೆ ದಾಳಿ ಮಾಡಿದಕ್ಕೆ ಸಾಕ್ಷಿಯಾಗಿ ನಿಂತಿದೆ. ಅಷ್ಟಾದರೂ ಈ ದೇವಾಲಯ ತನ್ನ ವೈಭವವನ್ನು ಉಳಿಸಿಕೊಂಡಿತ್ತು .
ವಿಜಯನಗರದ ಅರಸರು ಮಧುರೈನ ನಾಯಕರು ಮೀನಾಕ್ಷಿ ದೇವಾಲಯವನ್ನು ಉಳಿಸಿಕೊಳ್ಳುವುದರಲ್ಲಿ ಯಶಸ್ವಿಯಾದರು. ಅವತ್ತು ಅವರ ಯಶಸ್ಸು ಇವತ್ತಿಗೂ ಕೂಡ ಈ ದೇವಾಲಯದ ವೈಭವವನ್ನು ಉಳಿಸಿದೆ ಎಂದರೆ ಅತಿಶಯೋಕ್ತಿಯಾಗುವುದಿಲ್ಲ. ವಿವಿಧ ಜನರು ಸಾಮರಸ್ಯದಿಂದ ಬದುಕುತ್ತಿದ್ದಾರೆ. ಕೋಟ್ಯಾನು ಕೋಟಿ ಭಕ್ತರ ಪಾಲಿಗೆ ಇದು ಪುಣ್ಯ ಭೂಮಿ. ಈ ದೇವಾಲಯಕ್ಕೆ ಮನಃ ಶಾಂತಿಗೆಂದೇ ಬರುವ ಭಕ್ತ ಸಮೂಹಕ್ಕೆ ಮೀನಾಕ್ಷಿ ಸುಂದರೇಶ್ವರ ದೇವಾಲಯ ಅತ್ಯಂತ ಪ್ರಶಸ್ತವಾದದ್ದು ಎಂದು ಹೇಳಲಾಗುತ್ತದೆ .ಒಮ್ಮೆ ಭೇಟಿ ನೀಡಿ ಮೀನಾಕ್ಷಿ ದೇವಿಯ ಆಶೀರ್ವಾದ ಪಡೆಯಿರಿ

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top