ಸಮಾಚಾರ

ಮೋದಿ ಹೆಸರಲ್ಲಿ ಪೆಟ್ರೋಲ್ ರಹಿತ ಬೈಕ್ ಸಂಶೋಧಿಸಿದ ಮುಸ್ಲಿಂ ಯುವಕ.

ಸದ್ಯ ದೇಶಾದ್ಯಂತ ಇಂಧನ ಬೆಲೆ ಏರಿಕೆಯದ್ದೇ ಸುದ್ದಿ. ಪೆಟ್ರೋಲ್ ಮತ್ತು ಡೀಸೆಲ್ ಬೆಳೆಗಳು ರಾಕೆಟ್ ವೇಗದಲ್ಲಿ ಗಗನಕ್ಕೇರಿರುವ ಈ ಹೊತ್ತಿನಲ್ಲಿ ಪೆಟ್ರೋಲೇ ಇಲ್ಲದೇ ಬರೊಬ್ಬರಿ 150 ಕಿ.ಮೀ ಚಲಿಸಬಲ್ಲ ವಿನೂತನ ಬೈಕ್ ವೊಂದನ್ನು ಮೀರತ್’ನ ಮುಸ್ಲಿಂ ಎಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಸಂಶೋದಿಸಿದ್ದಾನೆ. ದೇಶಕ್ಕಾಗಿ ಏನನ್ನಾದರೂ ಸಾಧಿಸಬೇಕು ಎಂದು ಹಂಬಲಿಸುತ್ತಿದ್ದ ಈತ ವಿದ್ಯುತ್ ಚಾಲಿತ ಬೈಕ್ಅನ್ನು ಕಂಡುಹಿಡಿದಿದ್ದಾನೇ..

 

 

ಈ ವಿಶೇಷ ಬ್ಯಾಟರಿ ಚಾಲಿತ ಇ-ಬೈಕ್ ಅನ್ನು ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಎಂಜಿನಿಯರಿಂಗ್ ವಿದ್ಯಾರ್ಥಿ ವಕಾರ್ ಅಹಮದ್ ಸಂಶೋಧಿಸಿದ್ದು, ಈ ವಿಶೇಷ ಬೈಕ್ ಗೆ ”ಮೋದಿ ಬೈಕ್’ ಎಂದು ಹೆಸರಿಟ್ಟಿದ್ದಾನೆ.ಆಟೋ ಮೊಬೈಲ್ ಇಂಜಿನಿಯರಿಂಗ್ ಮಾಡುತ್ತಿದ್ದ ಯುವಕ ಕಂಡುಹಿಡಿದ ಬೈಕ್ ರಸ್ತೆಯಲ್ಲಿ ಸುತ್ತಾಡಿದೆ. ಈ ಬೈಕ್‌ ಗೆ ಇಂಜಿನ್ ಇಲ್ಲ ಬದಲಾಗಿ ಬ್ಯಾಟರಿ ಚಾರ್ಜ್ ಮಾಡಬೇಕು.. ನಾವು ಹೇಗೆ ಮೊಬೈಲ್ ಚಾರ್ಜ್ ಮಾಡುತ್ತೇವೋ ಅದೇ ರೀತಿ ಈ ಬೈಕ್ಅನ್ನು ಕೂಡ ಆಗಾಗ್ಗೆ ಚಾರ್ಜ್ ಮಾಡಬೇಕು..

ಸ್ವತಃ ಮೆಕಾನಿಕಲ್ ಎಂಜಿನಿಯಪ್ ಆಗಿರುವ ವಕಾರ್ ಅಹ್ಮದ್ ತನ್ನ ನಿರಂತರ ಪರಿಶೋಧನೆ ಮತ್ತು ಪರಿಶ್ರಮದ ಫಲವಾಗಿ ವಿಶೇಷ ಬೈಕ್ ತಯಾರಿಸಿದ್ದು, ಈ ಬ್ಯಾಟರಿ ಚಾಲಿತ ಬೈಕ್ ಅನ್ನು 3 ಗಂಟೆ ಚಾರ್ಜ್ ಮಾಡಿದರೆ ಸಾಕು ಬರೊಬ್ಬರಿ 150 ಕಿ.ಮೀ ಚಲಿಸಲಿದೆ. ಇನ್ನು ಈ ಬೈಕ್ ಬೆಲೆ ಗರಿಷ್ಟ 75 ಸಾವಿರ ರೂಪಾಯಿ ಆಗಲಿದ್ದು ಮಾರುಕಟ್ಟೆಗೆ ತರುವ ಆಲೋಚನೆ ಇದೆಯಂತೆ,

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top