ಮನೋರಂಜನೆ

ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ರಕ್ಷಿತ್ ಶೆಟ್ಟಿ- ಹೊಸ ಲುಕ್ ನಲ್ಲಿ ಪ್ರತ್ಯಕ್ಷವಾದ ಕಿರಿಕ್ ಹುಡ್ಗ.

ತಮ್ಮ ವಿಶಿಷ್ಟ ಮ್ಯಾನರಿಸಂ ಮೂಲಕ ಯುವ ಪೀಳಿಗೆಯಲ್ಲಿ ಅತ್ಯಂತ ಪ್ರಸಿದ್ದಿಯಾಗಿರುವ ಕನ್ನಡ ನಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ರವರು ಸದ್ಯ ಯಶಸ್ಸಿನ ಉತ್ತುಂಗದಲ್ಲಿದ್ದು ಗಾಂಧಿನರದ ಬಹು ಬೇಡಿಕೆ ನಟನಾಗಿ ಪರಿಣಮಿಸುತ್ತಿದ್ದಾರೆ.. ಕಳೆದ ಒಂದು ವಾರದಿಂದ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ರಶ್ಮಿಕಾ ಜೊತೆಗಿನ ಸಂಭಂದದ ಕುರಿತಾಗಿಯೇ ಸುದ್ದಿಯಾಗುತ್ತಿದ್ದ ರಕ್ಷಿತ್ ಆ ಎಲ್ಲ ತಲೆನೋವುಗಳನ್ನು ಮರೆತು ಹೊಸ ಸಿನಿಮಾವೊಂದಕ್ಕೆ ಸಹಿಹಾಕಿದ್ದಾರೆ..

 

 

 

ಕನ್ನಡ ಚಿತ್ರರಂಗದಲ್ಲಿ “ಗೋಧಿ ಬಣ್ಣ ಸಾಧಾರಣ ಮೈಕಟ್ಟು” ಚಿತ್ರ ಮಾಡಿದ್ದ ಸುದ್ದಿ ಅಷ್ಟಿಷ್ಟಲ್ಲ,, ಬಾಕ್ಸ್ ಆಫೀಸ್ ನಲ್ಲಿ ಸಕತ್ ಕಮಾಲ್ ಮಾಡಿದ್ದ ಆ ಚಿತ್ರ ಪ್ರೇಕ್ಷಕರಲ್ಲಿ ಈಗಲೂ ಒಳ್ಳೆಯ ಅಭಿಪ್ರಾಯ ಉಳಿಸಿಕೊಂಡಿದೆ. ಈ ಸಿನಿಮಾ ಮೂಲಕ ಯಶಸ್ವಿ ನಿರ್ದೇಶಕನಾಗಿ ಹೊರಹೊಮ್ಮಿದ್ದ ನಿರ್ದೇಶಕ ಹೇಮಂತ್​ ರಾವ್ ಆನಂತರ ಪುನೀತ್ ರಾಜಕುಮಾರ್ ಅವರಂಥಾ ನಟರ ನಿರ್ಮಾಣದ ಸಿನಿಮಾದಲ್ಲಿ ಅವಕಾಶ ಪಡೆದಿದ್ದರು.. ಇಂಥಾ ಹೇಮಂತ್ ರಾವ್ ಮತ್ತು ‘ಗೋದಿ ಬಣ್ಣ’ ಸಿನಿಮಾವನ್ನು ನಿರ್ಮಾಣ ಮಾಡಿದ್ದ ಪುಷ್ಕರ್ ಮಲ್ಲಿಕಾರ್ಜುನ್​ ಹಾಗೂ ಚಿತ್ರದಲ್ಲಿ ನಟಿಸಿದ್ದ ರಕ್ಷಿತ್ ಜೋಡಿ ಇದೀಗ ಮತ್ತೆ ಒಂದಾಗುತ್ತಿದೆ.

ಹೊಸ ಚಿತ್ರ ‘ ತೆನಾಲಿ ‘ ಯಲ್ಲಿ ರಕ್ಷಿತ್ ಹೊಸದೊಂದು ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇಷ್ಟು ದಿನ ಕುರುಚಲು ಗಡ್ಡದ ಅವತಾರದಲ್ಲೇ ರಗಡ್ ಆಗಿ ನೋಡಲು ಸಿಗುತ್ತಿದ್ದ ರಕ್ಷಿತ್, ತೆನಾಲಿಗಾಗಿ ಗಡ್ಡಕ್ಕೆ ಗುಡ್ ಬಾಯ್ ಹೇಳಿ , ಕ್ಲೀನ್ ಶೇವ್ ಮಾಡಿಕೊಂಡು ಬ್ರಿಟಿಷ್ ಕಾಲದ ಯುವಕನಾಗಿದ್ದಾರೆ .. ಅಂದಹಾಗೆ ಇದೊಂದು ಸ್ವತಂತ್ರ ಪೂರ್ವದ ಅತ್ಯಂತ ಅಪರೂಪದ ಕಥೆಯಾಗಿದೆ.. ಹೆಚ್ಚಿನ ಮಾಹಿತಿಗಳು ಸದ್ಯದಲ್ಲೇ ಹೊರಬೀಳಲಿದೆ ಎನ್ನುತ್ತಿದೆ ಚಿತ್ರತಂಡ.

ಈ ಚಿತ್ರ ಯಾವಾಗ ಶುರುವಾಗುತ್ತೋ ಗೊತ್ತಿಲ್ಲ. ಆದರೆ, ನಾವು ಮೂವರು ಮಾತ್ರ ಮತ್ತೊಮ್ಮೆ ಒಟ್ಟಿಗೆ ಕೆಲಸ ಮಾಡಲಿದ್ದೇವೆ ಎಂದು ಹೇಮಂತ್​ ರಾವ್​ ಟ್ವಿಟ್ಟರ್​ನಲ್ಲಿ ಹೇಳಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top