ಸಿನಿಮಾ

ಬ್ರೇಕಪ್ ವಿಷ್ಯದಿಂದ ಬೇಸತ್ತಿದ್ದ ರಕ್ಷಿತ್ ಶೆಟ್ಟಿ ಕಡೆಯಿಂದ ಬಂತು ಇನ್ನೊಂದು ಸಿಹಿ ಸುದ್ದಿ

ಸ್ಯಾಂಡಲ್ ವುಡ್’ನಲ್ಲಿ ಸದ್ಯದ ಹಾಟೆಸ್ಟ್ ಜೋಡಿ ಎಂತಲೇ ಹೆಸರು ಪಡೆದಿದ್ದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತು ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಜೋಡಿಯ ನಡುವಿನ ಸಂಭಂದ ಕೊನೆಗೂ ಮುರಿದುಬಿದ್ದಿದೆ.. ಹಾಗಂತ ಇದು ಯಾರೋ ಕೆಲಸಿಲ್ಲದ ಕಿಡಿಗೇಡಿಗಳು ಹಬ್ಬಿಸಿರುವ ಸುಳ್ಳು ಸುದ್ದಿ ಎಂದು ಭಾವಿಸುವಂತಿಲ್ಲ. ಯಾಕಂದರೆ ಈ ಸುದ್ದಿ ಬಂದಿರೋದು ಈ ಇಬ್ಬರ ಆಪ್ತ ವಲಯದಿಂದಲೇ.. ಕಿರಿಕ್‌ ಪಾರ್ಟಿಯ ಕರ್ಣ ಮತ್ತು ಸಾನ್ವಿ ವೃತ್ತಿ ಕಾರಣದಿಂದಾಗಿ ದೂರವಾಗಲು ನಿರ್ಧಾರ ಮಾಡಿದ್ದಾರೆ ಎಬ ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ..

 

 

ರಶ್ಮಿಕಾ ಮಂದಣ್ಣ ತಾಯಿ ಸುಮನ್ ಮಂದಣ್ಣ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. “ಕಳೆದೊಂದು ತಿಂಗಳಿನಿಂದ ನಾವು ತುಂಬಾ ಡಿಸ್ಟರ್ಬ್ ಆಗಿದ್ದೇವೆ. ಅವರವರ ಜೀವನ ಅವರವರ ಸ್ವಂತದ್ದು. ರಶ್ಮಿಕಾಗೆ ಅವಳ ಕೆರಿಯರ್ ಮುಖ್ಯ . ಕೆಲಸಕ್ಕೆ ಕಷ್ಟ ಮಾಡಿಕೊಂಡು ಏಕೆ ಇರಬೇಕು? ಖುಷಿಯಿಂದ ಬದುಕಬೇಕು,, ಇದು ನಮ್ಮ ಕುಟುಂಬದ ವಿಚಾರ. ಎರಡು ಕುಟುಂಬಗಳು ಕೂತು ಚರ್ಚೆ ಮಾಡಿ ನಿರ್ಧಾರ ಮಾಡಿದ್ದೇವೆ. ಇದರಲ್ಲಿ ತಲೆಹೋಗುವಂಥದ್ದು ಏನೂ ಇಲ್ಲ” ಎಂದು ಸುಮನ್ ಮಂದಣ್ಣ ಹೇಳಿದ್ದಾರೆ.

ಇದೀಗಾ ಈ ಬ್ರೇಕಪ್ ನಿಂದ ಕಂಗೆಟ್ಟಿದ್ದ ರಕ್ಷಿತ್ ಶೆಟ್ಟಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಒಂದು ಹೊರ ಬಿದ್ದಿದೆ , ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರ ಸೂಪರ್ ಹಿಟ್ ಸಂಭ್ರಮದ ನಂತ್ರ ಈ ಚಿತ್ರದ ನಿರ್ದೇಶಕ ಹೇಮಂತ್ ರಾವ್ , ನಾಯಕ ನಟ ರಕ್ಷಿತ್ ಶೆಟ್ಟಿ ಹಾಗು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತೆ ಒಂದಾಗಿದ್ದಾರೆ , ‘ತೆನಾಲಿ’ ಎನ್ನುವ ಹೊಸ ಕಥೆಯ ಮೂಲಕ ಪ್ರೇಕ್ಷಕರಿಗೆ ಮನೋರಂಜನೆ ನೀಡಲು ಈ ಟೀಮ್ ಸಜ್ಜಾಗಿದೆ .

ಈ ವಿಷಯವನ್ನು ಸ್ವತಃ ಹೇಮಂತ್ ರಾವ್ ಕಂಫಾರ್ಮ್ ಮಾಡಿದ್ದು ಇತಿಹಾಸದ ಸ್ವತಂತ್ರ ಪೂರ್ವದ ಕಥಾ ಹಂದರ ಈ ಚಿತ್ರಕ್ಕೆ ಇರಲಿದೆ , ಈ ಕಥೆಯನ್ನು ರಕ್ಷಿತ್ ಕೂಡ ಓಕೆ ಮಾಡಿದ್ದು ಅಂದುಕೊಂಡಿದ್ದು ಸಾಧಿಸಲು ಈ ತಂಡ ಮುಂದಾಗಿದ್ದು ಕೆಲವು ಲುಕ್ ಗಳ ಫೋಟೋ ಸೇರಿ ಹಿಡಿದಿದ್ದಾರೆ .

ಈಗಾಗಲೇ ‘ಕಾವಲುದಾರಿ’ ಚಿತ್ರದಲ್ಲಿ ಬ್ಯುಸಿಯಾಗಿರುವ ಹೇಮಂತ್ ರಾವ್ ‘ಕಾವಲುದಾರಿ’ ಚಿತ್ರ ಮುಗಿದ ನಂತ್ರ ತಮ್ಮ ಮುಂದಿನ ಚಿತ್ರ ‘ತೆನಾಲಿ ‘ ಯನ್ನು ಕೈಗೆತ್ತಿಕೊಳ್ಳಲಿದ್ದಾರೆ ,ಮತ್ತೆ ನಾವು ಮೂರು ಜನ ಅಂದರೆ ನಿರ್ದೇಶಕ ಹೇಮಂತ್ ರಾವ್ , ನಾಯಕ ನಟ ರಕ್ಷಿತ್ ಶೆಟ್ಟಿ ಹಾಗು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಇವರ ಕಾಂಬಿನೇಶನ್ ನೋಡಬಹುದು ನಾವು ಮತ್ತೆ ಒಟ್ಟಿಗೆ ಕೆಲಸ ಮಾಡಲಿದ್ದೇವೆ ಎಂದು ಹೇಮಂತ್ ಹೇಳಿದ್ದಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top