fbpx
ಸಿನಿಮಾ

ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆಗಿ ಬದಲಾದ ರಾಣಾ

ನಂದಮುರಿ ತಾರಕ ರಾಮರಾವ್ ರವರನ್ನು ಎನ್.ಟಿ.ರಾಮರಾವ್ ಅಥವಾ ಎನ್.ಟಿ.ಆರ್ ಎಂದೇ ಜನ ಗುರುತ್ತಿಸಿದಾರೆ. ಎನ್.ಟಿ.ಆರವರು ಭಾರತದ ಒಬ್ಬ ಜನಪ್ರಿಯ ನಟ, ಬರಹಗಾರ,ನಿರ್ದೇಶಕ, ನಿರ್ಮಾಪಕ ಮತ್ತು ಏಳು ವರ್ಷಗಳ ಕಾಲ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಆಗ ಆಂಧ್ರದಲ್ಲಿ ಅತ್ಯಧಿಕ ಕಾಲ ಕೆಲಸ ಮಾಡಿರುವ ಮುಖ್ಯಮ೦ತ್ರಿಯಾಗಿ ಹೆಸರು ವಾಸಿಯಾದರು ತೆಲುಗು ಜನರು “ಅನ್ನಗಾರು” ಎ೦ದು ಪ್ರೀತಿಯಿಂದ ಕರೆಯುವ ನಂದಮೂರಿ ತಾರಕ ರಾಮಾರಾವ್ ರವರು ಒಬ್ಬ ಮಹಾನಟ ಹಾಗೂ ಪ್ರಜಾ ನಾಯಕರಾಗಿದ್ದರು.

ಸದ್ಯ ಇವರ ಜೀವನಾಧಾರಿತ ಚಿತ್ರ ನಿರ್ಮಾಣವಾಗಲಿದ್ದು ಇದರಲ್ಲಿ ಬಾಲಿವುಡ್ ಖ್ಯಾತ ನಟಿ ವಿದ್ಯಾ ಬಾಲನ್ ಅವರು ಅಭಿನಯ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಬಾಲಿವುಡ್ ಬೆಡಗಿ ಈಗ ದಕ್ಷಿಣ ಚಿತ್ರರಂಗಕ್ಕೆ ಮರಳುತ್ತಿದ್ದು ಸಿನಿರಸಿಕರರಲ್ಲಿ ಕುತೂಹಲ ಮೂಡಿಸಿದೆ. ಸಿನೆಮಾದಲ್ಲಿ ಎನ್ ಟಿ ಆರ್ ಅವರ ಹೆಂಡತಿ ಬಸವತಾರಕಮ್ ಅವರ ಪಾತ್ರದಲ್ಲಿ ವಿದ್ಯಾ ಅಭಿನಯ ಮಾಡಲಿದ್ದಾರೆ.

 

 

ಎನ್ ಟಿ ಆರ್ ಪಾತ್ರದಲ್ಲಿ ಅವರ ಮಗ, ಖ್ಯಾತ ನಟ ಬಾಲಕೃಷ್ಣ ಅವರು ಅಭಿನಯ ಮಾಡುತ್ತಿದ್ದಾರೆ. ತೆರೆ ಮೇಲೆ ಅಪ್ಪನಾಗಿ ಮಗ ಮಿಂಚಿದ್ದಾರೆ. ಕ್ರಿಶ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಬಾಲಕೃಷ್ಣ, ಸಾಯಿ ಕೊರ್ರಪತಿ, ವಿಷ್ಣು ಇಂದುರಿ ಸಿನಿಮಾಗೆ ಬಂಡವಾಳ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

 

 

ಈ ಚಿತ್ರದಲ್ಲಿ ಇನ್ನೊಂದು ಕುತೂಹಲಕಾರಿ ಎಂದರೆ, ಎನ್.ಟಿ.ಆರ್ ಹಾಗು ಅಣ್ಣಾವ್ರು ಒಳ್ಳೆಯ ಸ್ನೇಹಿತರಾಗಿದ್ದರು. ಹಾಗಾಗಿ ಅಣ್ಣಾವ್ರ ಕೆಲವು ಸನ್ನಿವೇಶಗಳು ಚಿತ್ರದಲ್ಲಿ ಬರಲಿವೆ ಎನ್ನಲಾಗಿದೆ, ಗಣೇಶ ಹಬ್ಬದ ವಿಶೇಷ ದಿನ ರಾಣಾ ಫಸ್ಟ್ ​​​ಲುಕ್ ರಿಲೀಸ್ ಮಾಡಿದ ಚಿತ್ರ ತಂಡ ರಾಣಾ ಅವ್ರಿಗೆ ಆಂಧ್ರದ ಈಗಿನ ಮುಖ್ಯ ಮಂತ್ರಿ ಎನ್ ಟಿ ಆರ್ ಅವರ ಖಾಸಾ ಅಳಿಯ ಚಂದ್ರಬಾಬು ನಾಯ್ಡು ಅವರ ಪಾತ್ರದಲ್ಲಿ ರಾಣಾ ನಟಿಸುತ್ತಿದ್ದಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top