fbpx
ಮನೋರಂಜನೆ

ಸುಖಕರ ದಾಂಪತ್ಯ ಜೀವನಕ್ಕೆ ನಟಿ ಸನ್ನಿ ಲಿಯೋನ್ ಹೇಳಿಕೊಟ್ಟ ಏಳು ಪಾಠಗಳು.

ಇತ್ತ ನೀಲಿ ಚಿತ್ರಗಳಲ್ಲಿ ನಟಿಸುತ್ತಲೇ ಅತ್ತ ಸಂಸಾರವನ್ನೂ ಕೂಡಾ ನೀಟಾಗಿ ಮೇಂಟೇನು ಮಾಡುತ್ತಾ ಮುಂದುವರಿಯುತ್ತಿರುವಾಕೆ ಸನ್ನಿ ಲಿಯೋನ್. ಬಹುಶಃ ಈಕೆಯ ವೃತ್ತಿ ಬದುಕಿನ ಬಗ್ಗೆ ಮಾತ್ರವೇ ಗೊತ್ತಿರುವವರಿಗೆ ಈಕೆ ಓರ್ವನನ್ನು ಮದುವೆಯಾಗಿ ಸಾಮಾನ್ಯ ಗೃಹಿಣಿಯಂತೆ ಬದು ಕಟ್ಟಿಕೊಂಡಿದ್ದಾಳೆಂದರೆ ನಂಬಲು ಕಷ್ಟವಾದೀತು. ಆದರೆ ಸನ್ನಿಯ ಸುಖ ಸಂಸಾರ ಏಳುವರ್ಷಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ.

ಸನ್ನಿ ಲಿಯೋನ್‌ಳದ್ದು ಈ ಒಂಥರಾ ವಿಚಿತ್ರ ಮನಸ್ಥಿತಿ. ಈಕೆ ಏಳು ವರ್ಷದ ಹಿಂದೆ ಡೇನಿಯಲ್‌ನನ್ನು ಮದುವೆಯಾದಾಗ ಆ ಸುದ್ದಿ ಕೇಳಿದ ಮಂದಿ ಬ್ರೇಕಪ್ಪಾದ ಸುದ್ದಿ ಇಷ್ಟರಲ್ಲೇ ಬರುತ್ತದೆ ಅಂತಲೇ ಭಾವಿಸಿದ್ದರು. ಆದರೆ ಒಟ್ಟೊಟ್ಟಾಗಿ ನೀಲಿ ಚಿತ್ರಗಳಲ್ಲಿ ನಟಿಸಿದ್ದ ಡೇನಿಯಲ್ ಮತ್ತು ಸನ್ನಿ ಲಿಯೋನ್ ನಡುವೆ ಚೆಂದದ್ದೊಂದು ಹೊಂದಾಣಿಕೆ ಇದೆ. ಒಬ್ಬರಿಗೊಬ್ಬರು ಹೆಗಲಾಗುವಂಥಾ ಚೆಂದದ ಸ್ನೇಹವೂ ಇವರಿಬ್ಬರ ನಡುವೆ ಇದೆ. ತಮ್ಮ ವಿಚಿತ್ರವಾದ ವೃತ್ತಿ ಬದುಕಿನಾಚೆಗೂ ಒಬ್ಬರಿಗೊಬ್ಬರು ಬದ್ಧರಾಗಿ ಈ ಜೋಡಿ ಆಜುಬಾಜಿನವರ ಕಣ್ಣು ಕುಕ್ಕುವಂತಿದ್ದಾರೆ.

ಇಂಥಾ ಸನ್ನಿ ಲಿಯೋನ್ ಸುಖಕರ ದಾಂಪತ್ಯ ಜೀವನಕ್ಕಾಗಿ ಏಳು ಟಿಪ್ಸ್ ಅನ್ನು ನೀಡಿದ್ದಾರೆ. ಹೌದು ಇತ್ತೀಚಿಗೆ ಖಾಸಗಿ ಸಂದರ್ಶನದಲ್ಲಿ ಭಾಗವಹಿಸಿದ್ದ ಸನ್ನಿಗೆ ತಮ್ಮ ದಾಂಪತ್ಯ ಇಷ್ಟೊಂದು ಅನ್ಯೋನ್ಯವಾಗಿರು ಕಾರಣ ಏನು ಎಂದು ಪ್ರಶ್ನಿಸಲಾಯಿತು. ಆಗ ಸನ್ನಿ ಈ ಏಳು ದಾಂಪತ್ಯ ಪಾಠಗಳನ್ನ ಮಾಡಿದರು.. ಆ ಏಳು ಸಲಹೆಗಳು ಯಾವು ಅಂತೀರಾ? ಈ ಕೆಳಗೆ ಓದಿ.

1. ನಮ್ಮಲ್ಲಿ ಯಾವುದೇ ನಿರೀಕ್ಷಗಳಿಲ್ಲ. ಆ ರೀತಿಯ ನಿರೀಕ್ಷೆಗಳೇ ನಮ್ಮ ಸಂಬಂಧಗಳನ್ನು ಹಾಳುಮಾಡುತ್ತವೆ..

2. ಗಂಡ ಹೆಂಡತಿಗೆ ಮತ್ತು ಹೆಂಡತಿ ಗಂಡನಿಗೆ ಗೌರವ ನೀಡಬೇಕು..

3. ಹೆಂಡತಿಯ ಬೆಳವಣಿಗೆಯ ಬಗ್ಗೆ ಗಂಡ ಯಾವತ್ತೂ ಸಂತೋಷವಾಗಬೇಕು.

4. ಗಂಡನ ಕೆಲಸದ ಬಗ್ಗೆ ಹೆಂಡತಿಗೆ ಮತ್ತು ಹೆಂಡತಿಯ ಕೆಲಸದ ಬಗ್ಗೆ ಗಂಡನಿಗೆ ಪರಸ್ಪರ ಗೌರವ ಇರಬೇಕು

5. ತಮ್ಮ ದಾಂಪತ್ಯ ಜೀವನದ ಬಗ್ಗೆ ಗೌರವ ಇರಬೇಕು.

6. ಯಾವುದೇ ಕಾರಣಗಳಿಲ್ಲದಿದ್ದರೂ ಆಗಾಗ್ಗೆ ಪರಸ್ಪರ ಉಡುಗೊರೆಗಳನ್ನು ನೆಡುತ್ತಿರಬೇಕು.

7. ನಮ್ಮ ಜೀವನದ ಹಿಂದಿನ ಘಟನೆಗಳ ಬಗ್ಗೆ ಕೆದಕಿ ನೆಮ್ಮದಿ ಹಾಳು ಮಾಡಿಕೊಳ್ಳಬಾರದು,, ಎಂದು ಸನ್ನಿ ದಂಪತಿ ದಾಂಪತ್ಯದ ಬಗ್ಗೆ ಪಾಠ ಮಾಡಿದ್ದು ಇವೆಲ್ಲವನ್ನೂ ಫಾಲೋ ಮಾಡುವುದಾಗಿ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top