ಸಿನಿಮಾ

ವಿಗ್ನ ವಿನಾಶಕ ಗಣೇಶನನ್ನು ಮಿಸ್ ಮಾಡ್ಕೊಂಡು ನೆನೆದ ಸೋನಾಲಿ ಬೇಂದ್ರೆ

ಕನ್ನಡದ ಪ್ರೀತ್ಸೇ ಚಿತ್ರದಲ್ಲಿ ಶಿವರಾಜ್ ಕುಮಾರ್ ಹಾಗೂ ಉಪೇಂದ್ರ ರವರ ಜೊತೆ ನಾಯಕಿಯಾಗಿದ್ದ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ “ಹೈ ಗ್ರೇಡ್” ಕ್ಯಾನ್ಸರ್‌ನಿಂದ ಬಳಲುತ್ತಿರುವುದಾಗಿ ಸ್ವತಃ ಅವರೇ ಬಹಿರಂಗಪಡಿಸಿ ತಿಂಗಳುಗಳೇ ಕಳೆದಿವೆ. ಈಗಾಗಲೇ ನ್ಯೂಯಾರ್ಕ್​ನಲ್ಲಿ ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿಯೂ ಹೇಳಿಕೊಂಡಿದ್ದ ಸೋನಾಲಿ ಆ ನಂತರ ಕ್ಯಾನ್ಸರ್ ನಿಂದಾಗಿ ತಮ್ಮ ಕೂದಲಿಗೆ ಕತ್ತರಿ ಹಾಕಿಸಿದ್ದು, ತಮ್ಮ ಡಯಟ್ ಅಂತಹ ವಿಚಾರಗಳನ್ನು ಅಭಿಮಾನಿಗಳ ಜೊತೆಯಲ್ಲಿ ಹಂಚಿಕೊಳ್ಳುತ್ತಿದ್ದರು. ಈಗ ಮತ್ತೊಂದು ಪೋಸ್ಟ್​ ಮಾಡುವ ಮೂಲಕ ಅಭಿಮಾನಿಗಳ ಜೊತೆ ಈ ವಿಷಯ ಶೇರ್ ಮಾಡಿಕೊಂಡಿದ್ದಾರೆ .

 

 

 

ಸದ್ಯಕ್ಕೆ ನ್ಯೂಯಾರ್ಕ್​ನಲ್ಲಿ ಟ್ರೀಟ್​​​ಮೆಂಟ್ ಪಡೆಯುತ್ತಿರುವ ಸೋನಾಲಿ ಬೇಂದ್ರೆ ಪತಿ ಗೋಲ್ಡಿ ಬೆಹಲ್ ಹಾಗೂ ಪುತ್ರ ರಣ್ವೀರ್ ಬೆಹಲ್ ತಮ್ಮ ಮುಂಬೈನ ಮನೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸಿದ್ದಾರೆ. ಈ ಫೋಟೋಗಳನ್ನು ಸೋನಾಲಿ ಬೇಂದ್ರೆ ತಮ್ಮ ಟ್ವಿಟರ್​​ನಲ್ಲಿ ಶೇರ್ ಮಾಡಿಕೊಂಡು ಗಣೇಶ ಹಬ್ಬವನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂಬುದರ ಕುರಿದಾಗಿ ಹೀಗೆ ತಿಳಿಸಿದ್ದಾರೆ,”ಗಣೇಶ ಹಬ್ಬ ನನಗೆ ಹಾಗೂ ನನ್ನ ಮನಸಿಗೆ ತುಂಬಾ ಹತ್ತಿರವಾದದ್ದು.ಅಂದ್ರೆ ಈ ಸಲ ನಾನು ಹಬ್ಬವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಆದ್ರೂ ನಾನು ಸಂತೋಷವಾಗಿದೀನಿ,ವಿಗ್ನ ವಿನಾಶಕ ಗಣೇಶನ ಆಶೀರ್ವಾದ ಸದಾ ನನ್ನ ಮೇಲೆ ಇರುತ್ತದೆ ಎಂದು ಬರೆದುಕೊಂಡಿದ್ದಾರೆ.
ಸೋನಾಲಿ ಬೇಂದ್ರೆ ಕ್ಯಾನ್ಸರ್ ನಿಂದ ಹೊರಬಂದು ನಗುನಗುತ್ತಾ ಮುಂದಿನ ವರ್ಷ ಗಣೇಶ ಚತುರ್ಥಿ ಆಚರಿಸವಂತೆ ಆಗಲಿ ಎಂದು ನಾವು ಆರೈಸೋಣ

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top