ಸಮಾಚಾರ

ಕಿರಿಕ್ ಜೋಡಿ ಸಂಬಂಧ ಹಳಸಲು ‘ವಿಜಯ್ ದೇವರಕೊಂಡ’ ಕಾರಣನಲ್ಲ- ಆತನಿಗಿದ್ದಾಳೆ ಅಮೆರಿಕಾ ಲವರ್.

ಚಂದನವನದ ಹಾಟ್ ಜೋಡಿ ಎಂತಲೇ ಖ್ಯಾತಿಯಾಗಿದ್ದ ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ನಡುವಿನ ಬಗ್ಗೆ ಹರಡಿಕೊಂಡಿರರೋ ಬ್ರೇಕ್ಅಪ್ ಬಗ್ಗೆ, ನಿಖರ ಸ್ಪಷ್ಟೀಕರಣವನ್ನು ಯಾರೊಬ್ಬರೂ ಕೊಟ್ಟಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲೊಂದಷ್ಟು ಮಂದಿ, ಮಾಧ್ಯಮದಲ್ಲಿ ಮತ್ತೊಂದಷ್ಟು ಜನ ಸೇರಿ ತಾವೇ ಮುಂದಾಳತ್ವ ವಹಿಸಿ ಇಬ್ಬರಿಗೂ ಬ್ರೇಕಪ್ ಮಾಡಿಸುತ್ತಿದ್ದಾರೆ. ರಶ್ಮಿಕಾ ರಕ್ಷಿತ್ ನಡುವಿನ ಸಂಬಂಧ ನಿಜಕ್ಕೂ ಹಳಸಿಕೊಂಡಿದೇಯಾ? ಹಾಗೇನಾದರೂ ಆಗಿದ್ದರೆ ಅದಕ್ಕೆ ಸಾಕಷ್ಟು ಕಾರಣವೇನು? ಎಂಬ ಸಾಕಷ್ಟು ಪ್ರಶ್ನೆಗಳು ಎಲ್ಲರನ್ನೂ ಕಾಡುತ್ತಿದೆ..

 

 

ರಕ್ಷಿತ್ ಮತ್ತು ರಶ್ಮಿಕಾ ಇಬ್ಬರ ಸಂಭಂದ ಹಳಸಲು ಗೀತಗೋವಿಂದಂ ಸಿನಿಮಾವೇ ಕಾರಣ, ವಿಜಯ್ ದೇವರಕೊಂಡಗೂ ರಶ್ಮಿಕಾ ಕುಚ್​ ಕುಚ್ ಆಗಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಗಿರಕಿಹೊಡೆದಿದ್ದವು.. ಆದರೆ ರಕ್ಷಿತ್ ರಶ್ಮಿಕಾ ಬ್ರೇಕಪ್’ಗೆ ತೆಲುಗು ನಟ ವಿಜಯ್ ದೇವರಕೊಂಡ ಕಾರಣನಲ್ಲ ಎಂಬ ವಿಚಾರ ಈಗ ಜಾಹೀರಾಗಿದೆ! ಹೌದು ವಿಜಯ್ ದೇವರಕೊಂಡ ಅಮೆರಿಕಾದ ಮಿಮ್ಮಿ ಎಂಬ ಹುಡುಗಿ ಜೊತೆ ಸೀರಿಯಸ್ಸಾಗಿ ಲವ್ವಲ್ಲಿ ಬಿದ್ದು ವರ್ಷಗಳೇ ಕಳೆದಿವೆ. ಆತ ಆಕೆಯನ್ನು ಬಹುಕಾಲದಿಂದ ಪ್ರೀತಿಸುತ್ತಿದ್ದಾನೆ. ಒಂದು ಸಮಾರಂಭದಲ್ಲಿ ಭೇಟಿಯಾಗಿದ್ದ ಇವರಿಬ್ಬರೂ ಭೇಟಿ ಪರಿಚಯಕ್ಕೆ, ಪರಿಚಯ ಸ್ನೇಹ ಮತ್ತು ಸ್ನೇಹ ಪ್ರೀತಿಗೆ ಬಿದ್ದು ಜೋಡಿ ಹಕ್ಕಿಗಳಾಗಿ ಹಾರಾಡುತ್ತಿದ್ದಾರೆ. ಈಗಲೂ ಇಬ್ಬರ ಮಧ್ಯೆ ಅದೇ ಬಾಂಧವ್ಯವಿದೆ, ಪ್ರೀತಿಯಿದೆ. ಸಮಯ ಸಿಕ್ಕಾಗಲೆಲ್ಲಾ ಇಬ್ಬರೂ ಭೇಟಿಯಾಗ್ತಾರೆ.

ಈ ಮೂಲಕ ರಕ್ಷಿತ್ ರಶ್ಮಿಕಾ ವಿಚಾರದಲ್ಲಿ ‘ವಿಲನ್’ ರೀತಿ ಬಿಂಬಿತವಾಗಿದ್ದ ವಿಜಯ್ ದೇವರಕೊಂಡನ ರಿಯಲ್ ಪ್ರೀತಿ ವಿಚಾರ ಬಯಲಾಗಿರುವುದು ಕಿರಿಕ್ ಜೋಡಿ ಸಂಬಂಧ ಹಳಸಲು ‘ಅರ್ಜುನ್ ರೆಡ್ಡಿ’ ಕಾರಣನಲ್ಲ ಎಂಬುದು ತಿಳಿಯಬಹುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top