ಭವಿಷ್ಯ

ಮಕ್ಕಳ ಜಾತಕದಲ್ಲಿ ದೋಷವಿದ್ದರೆ ಮಕ್ಕಳ ಏಳಿಗೆ ಹಾಗೂ ವಿದ್ಯಾಬ್ಯಾಸದಲ್ಲಿ ತೊಂದರೆಯಾಗುತ್ತದೆ,ಅದರ ಪರಿಹಾರಕ್ಕಾಗಿ ಹೀಗೆ ಮಾಡಿ

ಜಾತಕ ಎಂದರೆ ದೋಷಗಳು ಇದ್ದೇ ಇರುತ್ತವೆ. ನೀವು ಯಾವುದೇ ಜಾತಕವನ್ನು ತೆಗೆದುಕೊಂಡರೂ ಸಹ ದೋಷಗಳು ಇಲ್ಲದೆ ಇರುವಂತಹ ಜಾತಕ ಇರುವುದಕ್ಕೆ ಸಾಧ್ಯವೇ ಇಲ್ಲ . ಅದರಲ್ಲೂ ಜಾತಕ ದೋಷ ಇಲ್ಲದೆ ಇರುವ ಜಾತಕ ಎಂದರೆ ಗಜಕೇಸರಿ ಜಾತಕವಾಗಿರುತ್ತದೆ. ಆದರೆ ಆ ಗಜಕೇಸರಿಯೋಗ ಬರುವುದು ಯಾವಾಗ ? ಸ್ವಲ್ಪ ದಿನ ಮಾತ್ರ ಚೆನ್ನಾಗಿರುತ್ತದೆ. ಗ್ರಹಚಾರ ಎನ್ನುವುದು ಯಾರನ್ನೂ ಬಿಡುವುದಿಲ್ಲ .
ಕೆಲವರು ಕುಟುಂಬಗಳಲ್ಲಿ ಏನು ಹೇಳುತ್ತಾರೆ ಈ ಮಗು ಜನಿಸಿದ ಆಗಿನಿಂದ ಎಲ್ಲವನ್ನು ಕಳೆದುಕೊಂಡು ಬಿಟ್ಟೆವು ಎಂದು ಹೇಳುತ್ತಾರೆ. ಇನ್ನು ಕೆಲವರು ಹೇಳುವ ಪ್ರಕಾರ ಮಗು ಹುಟ್ಟಿದ ತಕ್ಷಣ ನಮಗೆ ಎಲ್ಲವೂ ದೊರಕಿದೆ ನಾವು ಸಿರಿವಂತರಾಗಿದ್ದೇವೆ ಎಂದು ಸಹ ಹೇಳುತ್ತಾರೆ.

ಆದರೆ ಮಗು ಹುಟ್ಟುವುದಕ್ಕೆ ಕಾರಣ ಯಾರು ? ತಂದೆ ತಾಯಿಗಳು. ಆ ತಂದೆ ತಾಯಿಗಳು ದಾಂಪತ್ಯದಲ್ಲಿ ಕಟ್ಟುಪಾಡುಗಳು ಎನ್ನುವುದು ಇದೆ . ಯಾವ ಸಮಯದಲ್ಲಿ ದಂಪತಿಗಳು ಸೇರಬೇಕು ಎನ್ನುವುದು ಇದೆ. ಇಂತಹ ಸಮಯದಲ್ಲಿಯೇ ದಂಪತಿಗಳು ಸೇರಬೇಕು ಎನ್ನುವುದು ಇದೆ . ಅದಕ್ಕೆ ಮೊದಲು ಪೀಠಿಕೆಯನ್ನು ಹಾಕಿ ಕೊಳ್ಳಬೇಕು. ಆದರೆ ತಂದೆ ತಾಯಿಗಳು ಮಾಡುವ ತಪ್ಪನ್ನು ಮಕ್ಕಳ ಮೇಲೆ ಹಾಕುವುದು ಎಷ್ಟು ಸರಿ. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು.

 

 

 

ಉದಾಹರಣೆಗೆ – ಒಬ್ಬ ರೈತ ಮುಖ್ಯವಾಗಿ ಬೀಜವನ್ನು ಯಾವಾಗ ಬಿತ್ತಬೇಕು ? ಹೊಲವನ್ನು ಯಾವಾಗ ಹಸನು ಮಾಡಬೇಕು ? ಎಂಬುದು ರೈತರಿಗೆ ತಿಳಿದಿರುತ್ತದೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ಹೊಲವನ್ನು ಹಸನು ಮಾಡಿ, ಬಿತ್ತನೆ ಮಾಡುತ್ತಾರೆ . ಬೇಸಿಗೆ ಕಾಲದಲ್ಲಿ ಬೀಜವನ್ನು ಹಾಕಿದರೆ ಏನಾಗುತ್ತದೆ ? ನಾನಾ ರೀತಿಯ ಸಮಸ್ಯೆಗಳು ಉಂಟಾಗುತ್ತವೆ . ಯಾವುದೇ ಫಲ ಲಭಿಸುವುದಿಲ್ಲ. ಹಾಗೆಯೇ ಇದು ಕೂಡ.
ಒಂದು ವೇಳೆ ಜಾತಕದಲ್ಲಿ ದೋಷ ಇದೆ ಎಂದು ಇದ್ದರೆ, ಮಘ ನಕ್ಷತ್ರ, ಅಶ್ವಿನಿ ನಕ್ಷತ್ರ , ರೇವತಿ ನಕ್ಷತ್ರ, ಆಶ್ಲೇಷ ನಕ್ಷತ್ರ, ಮೂಲ ನಕ್ಷತ್ರ ಮತ್ತು ಜ್ಯೇಷ್ಠ ನಕ್ಷತ್ರಗಳಲ್ಲಿ ಜನನವಾದಾಗ ಅಭೂಕ್ತ ಮೂಲ ದೋಷ ಎನ್ನುವುದು ಬರುವುದು ಖಂಡಿತ. ಆದರೆ ಅದನ್ನು ವ್ಯವಸ್ಥಿತವಾಗಿ ನಿವಾರಣೆಯನ್ನು ಮಾಡಿಕೊಳ್ಳಿ.

ಕೆಲವರಿಗೆ ಜಾತಕದಲ್ಲಿ ವಿದ್ಯಾಕಾರಕನಾದ ಗುರು ಗ್ರಹವು ರಾಹುವಿನ ಜೊತೆ ಇದ್ದಾಗ ನೀವು ಎಷ್ಟೇ ಪ್ರಯತ್ನಪಟ್ಟರು ಯಾವುದೇ ವಿದ್ಯಾಭ್ಯಾಸವನ್ನು ಕೊಡಿಸಿದರು, ಉನ್ನತ ಸ್ಕೂಲ್ ಗಳಿಗೆ ಸೇರಿಸಿ ವಿದ್ಯಾಭ್ಯಾಸ ಕೊಡಿಸಿದರೂ ಬೋರ್ಡಿಂಗ್ ಸ್ಕೂಲ್ ಗಳಿಗೆ ಹಾಕಿದರು ಸಹ , ಅವರು ಆಧರ್ಮದ ವಿದ್ಯೆಯನ್ನೇ ಹೆಚ್ಚಿಗೆ ಕಲಿತುಕೊಳ್ಳುತ್ತಾರೆ. ಬಹಳ ತೊಂದರೆಗಳನ್ನು ಸಮಸ್ಯೆಗಳನ್ನು ಅನುಭವಿಸುತ್ತಾರೆ. ಇದಕ್ಕೆಲ್ಲಾ ಕಾರಣ ಅವರ ಜಾತಕದಲ್ಲಿ ಇರುವ ದೋಷಗಳು.
ಜ್ಯೋತಿಷ್ಯ ಎಂದರೆ ಏನು ?ಜ್ಯೋತಿ ಎಂದರೆ ದೀಪ,ಷ ಎಂದರೆ ಕತ್ತಲು. ಕತ್ತಲನ್ನು ಹೋಗಲಾಡಿಸುವಂತಹದ್ದೇ ಜ್ಯೋತಿಷ್ಯ. ನಿಜವಾದ ಜ್ಯೋತಿಷ್ಯ ಎನ್ನುವುದು ಇಂದಿಗೂ ಕೂಡ ಇದೆ. ಅದನ್ನು ಅರ್ಥ ಮಾಡಿಕೊಂಡು ವ್ಯವಸ್ಥಿತವಾಗಿ ಜಾತಕಗಳನ್ನು ಪರಿಶೀಲನೆಯನ್ನು ಮಾಡಿ ಇರುವ ದೋಷಗಳನ್ನು ನಿವಾರಣೆ ಮಾಡಿಕೊಳ್ಳಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top