fbpx
ದೇವರು

ತಾಮ್ರದ ಸೂರ್ಯನನ್ನು ಮನೆಯ ಈ ಸ್ಥಳದಲ್ಲಿಟ್ಟರೆ ಅದೃಷ್ಟ ಖುಲಾಯಿಸುತ್ತದೆಯಂತೆ.

ಸೂರ್ಯನಾರಾಯಣನಿಗೆ ತಾಮ್ರ ಎಂದರೆ ಹೆಚ್ಚಿನ ಪ್ರೀತಿ . ತಾಮ್ರದಿಂದ ತಯಾರಿಸಿದ ಸೂರ್ಯನು ಅನೇಕ ಕೆಟ್ಟ ಸಂಗತಿಗಳಿಂದ ಕಾಪಾಡುತ್ತದೆ . ಮನೆಯಲ್ಲಿ ತಾಮ್ರದ ಸೂರ್ಯನನ್ನು ಇಡುವುದರಿಂದ ಸುಖ , ಶಾಂತಿ ಸಿಗುತ್ತದೆ . ತಾಮ್ರದ ಸೂರ್ಯನ ಮುಂದೆ ಕುಳಿತು ಮಾಡಿದ ಕೆಲಸದಲ್ಲಿ ಯಶಸ್ಸನ್ನು ಕಾಣಬಹುದು .ಜಾತಕದಲ್ಲಿ ಸೂರ್ಯನ ಬಲ ಕಡಿಮೆಯಿದ್ದ ಪಕ್ಷದಲ್ಲಿ ಕೋಣೆಯಲ್ಲಿ ತಾಮ್ರದ ಸೂರ್ಯನನ್ನು ಇಡುವುದು ಒಳ್ಳೆಯದು . ಮನೆಯಲ್ಲಿ ಹೆಚ್ಚಾಗಿ ಕರೆಂಟ್ ಶಾಕ್ ಹೊಡೆಯುತ್ತಿದ್ದರೆ ಆ ಜಾಗದಲ್ಲಿ ತಾಮ್ರದ ಸೂರ್ಯನನ್ನು ತಂದಿರಿಸುವುದರಿಂದ ಕರೆಂಟ್ ಶಾಕ್ ಹೊಡೆಯುವುದಿಲ್ಲ .

 

 

 

ಮನೆಯಲ್ಲಿ ಸಾಲದಿಂದ ಬೇಸತ್ತಿದ್ದರೆ ಮನೆಯ ಉತ್ತರ ದಿಕ್ಕಿನಲ್ಲಿ ತಾಮ್ರದ ಸೂರ್ಯನನ್ನು ಇಡುವುದರಿಂದ ಸಾಲದ ಬಾದೆ ಕಡಿಮೆಯಾಗುತ್ತದೆ . ಮನೆಯಲ್ಲಿ ಸದಾ ವೈಮನಸ್ಯ , ಜಗಳದಿಂದ ಬೇಸತ್ತಿದ್ದರೆ ಬೆಡ್ರೂಮ್ ನಲ್ಲಿ ತಾಮ್ರದ ಸೂರ್ಯನನ್ನು ತಂದಿಡಬೇಕು.ಮಕ್ಕಳ ಕೋಣೆಯಲ್ಲಿ ತಾಮ್ರದ ಸೂರ್ಯನನ್ನು ಇಡುವುದು ಒಳ್ಳೆಯದಾಗಿದ್ದು , ಇದರಿಂದ ಬುದ್ದಿ ವಿಕಸನಗೊಳ್ಳುತ್ತದೆ . ಅಡುಗೆ ಮನೆಯಲ್ಲಿ ತಾಮ್ರದ ಸೂರ್ಯನನ್ನು ಇಡುವುದರಿಂದ ಅರೋಗ್ಯ ಚೆನ್ನಾಗಿರುತ್ತದೆ . ತಾಮ್ರದ ಸೂರ್ಯನನ್ನು ಹಾಲ್ ನಲ್ಲಿ , ಕೋಣೆಯಲ್ಲಿ , ಗೇಟ್ ನಲ್ಲಿ , ಆಫೀಸ್ ನಲ್ಲಿ ಹೀಗೆ ವಿವಿಧ ಕಡೆ ಇಟ್ಟುಕೊಳ್ಳುವುದು ಒಳ್ಳೆಯದು .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top