ಮನೋರಂಜನೆ

ಇಂಟರ್​ ನ್ಯಾಷನಲ್​ ಕಾರ್​ ರೇಸ್​ ಅಖಾಡದಲ್ಲಿ ದರ್ಶನ್​- ವೈರಲ್ ಆದ ವಿಡಿಯೋ ಹಿಂದಿನ ರಹಸ್ಯವೇನು?

ಫಾರ್ಮ್ ಹೌಸ್ ತುಂಬಾ ಕುದುರೆಗಳನ್ನ ಸಾಕಿಕೊಂಡು, ಹಸುಗಳ ಆರೈಕೆ ಮಾಡುತ್ತಾ ಪ್ರಾಣಿಪ್ರಿಯ ಅಂತಲೇ ಹೆಸರಾಗಿರುವ ದರ್ಶನ್ ಅವರಿಗೆ ಪ್ರಾಣಿಗಳ ಮೇಲೆ ಎಷ್ಟು ಪ್ರೀತಿ ಇದೆಯೋ ಅಷ್ಟೇ ಕ್ರೇಜ್ ಹೊಸಾ ಮಾಡೆಲ್‌ನ ಹೈಟೆಕ್ ಕಾರುಗಳ ಮೇಲೂ ಇದೆ. ದರ್ಶನ್ ಅವರ ಕಾರ್ ಕ್ರೇಜ್‌ನ ಬಗೆಗೂ ಹಲವಾರು ದಂತಕಥೆಗಳೇ ಇವೆ. ಕನ್ನಡದ ಮಟ್ಟಿಗೆ ಹೇಳೋದಾದರೆ ದರ್ಶನ್ ಅವರಂಥಾ ಕಾರಿನ ಕ್ರೇಜ಼್ ಇರೋ ಬೇರೊಬ್ಬ ನಟನನ್ನು ಹುಡುಕೋದು ಕಷ್ಟ. ಭಾರತದಲ್ಲಿ ಕೆಲವೇ ಕೆಲ ಮಂದಿಯ ಬಳಿ ಮಾತ್ರವೇ ಇರುವ ದುಬಾರಿ ಕಾರುಗಳನ್ನು ಖರೀದಿಸೋದು ದರ್ಶನ್ ಅವರಿಗಿರುವ ಪ್ರಧಾನ ಆಸಕ್ತಿ. ಇಂಥಾ ‘ಕಾರು ಪ್ರೇಮಿ’ ದರ್ಶನ್ ಇದೀಗ ಕಾರ್​ ರೇಸ್​ ಅಖಾಡಕ್ಕಿಳಿದರಾ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡಲಾರಂಭಿಸಿದೆ..

 

 

ದರ್ಶನ್ ಅವರು ಕಾರ್ ರೇಸರ್ ಆಗಲು ಹೊರಟಿದ್ದಾರಾ? ಈ ಪ್ರಶ್ನೆ ಹುಟ್ಟೋಕೆ ಕಾರಣ ಚಾಲೆಂಜಿಂಗ್ ಸ್ಟಾರ್ ಸ್ಪೋರ್ಟ್ಸ್ ಕಾರ್ ಚಲಾಯಿಸಿರುವ ವಿಡಿಯೋ ವೈರಲ್ ಆಗಿರುವುದು. ವೃತ್ತಿಪರ ರೇಸರುಗಳೇ ಥಂಡಾ ಹೊಡೆಯುವಂತೆ ದರ್ಶನ್ ರೇಸ್ ಟ್ರ್ಯಾಕಿನಲ್ಲಿ ಕಾರ್ ಓಡಿಸುವ ದೃಷ್ಯಾವಳಿ ಇದಾಗಿದ್ದು ಎಲ್ಲರ ಕಣ್ಣು ಕುಕ್ಕುತ್ತಿವೆ. ದರ್ಶನ್ ಓಡಿಸಿರೋ ಕಾರಿನ ಹೆಸರು ‘ಪೋಲೆ ಜಿಟಿಐ’. ಪ್ರೊಫೆಷನಲ್​ ಕಾರು ರೇಸರ್​ ಓಡಿಸೋ ಕಾರದು.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ದರ್ಶನ್ ಕಾರ್ ರೆಸ್ ಕುರಿತಾದ ತರೇಹವಾರಿ ಗಾಸಿಪ್ ಹರಡಿಕೊಳ್ಳುತ್ತಿದ್ದು ಅಂತಾರಾಷ್ಟ್ರೀಯ ಮಟ್ಟದ ರೇಸಿಂಗ್ ನಲ್ಲಿ ಪಾಲ್ಗೊಳ್ಳಲು ದರ್ಶನ್ ತಯಾರಿ ನಡಸುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆಯೂ ಮಾಹಿತಿ ಇಲ್ಲ. ಮೂಲಗಳ ಪ್ರಕಾರ ದರ್ಶನ್ ಅವರು ಅಂತಾರಾಷ್ಟ್ರೀಯ ಮಟ್ಟದ ಕಾರ್ ರೇಸ್ ಕಾಂಪಿಟೇಷನ್​ನಲ್ಲಿ ಭಾಗವಹಿಸಲಿದ್ದು ಅದಕ್ಕಾಗಿಯೇ ತಯಾರಿ ನಡೆಸ್ತಿದ್ದಾರೆ. ಈ ಟೂರ್ನಿಮೆಂಟ್ ಮುಂದಿನ ತಿಂಗಳು ಮೈಸೂರಿನಲ್ಲಿ ನಡೆಯಲಿದೆಯಂತೆ.

ವಿಡಿಯೋ ನೋಡಿ👇👇👇

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top