ಮನೋರಂಜನೆ

ಪ್ರತಾಪ್ ಸಿಂಹ ಅಪ್ಪನಿಗೆ ಹುಟ್ಟಿದ್ದರೇ ನನ್ನ ಮುಂದೆ ಬರಲಿ- ಬಿಜೆಪಿ ಹಿರಿಯ ಮುಖಂಡ ಸವಾಲ್.

ಬಿಜೆಪಿ ಹಿರಿಯ ಮುಖಂಡ ಎಂಬಿ ದೇವಯ್ಯನವರಿಗೆ ಸಂಸದ ಪ್ರತಾಪ್ ಸಿಂಹನ ಮೇಲಿನ ಕೋಪ ಇನ್ನೂ ಇಳಿದಂತೆ ಕಾಣುತ್ತಿಲ್ಲ. ಯಾಕೆಂದರೆ ಮೊನ್ನೆಯಷ್ಟೇ ನಡು ರಸ್ತೆಯಲ್ಲಿ ಪ್ರತಾಪ್ ಸಿಂಹ ಮುಖಕ್ಕೆ ಮಂಗಳಾರತಿ ಮಾಡಿದ್ದ ದೇವಯ್ಯ ಇವತ್ತು ಅದೇ ಪ್ರತಾಪ್ ಸಿಂಹ ವಿರುದ್ಧ ಮತ್ತೊಂದು ಸುತ್ತಿನ ಕಾಳಗಕ್ಕೆ ಇಳಿದಿದ್ದಾರೆ.. “ಪ್ರತಾಪ್ ಸಿಂಹ ನಿಜವಾಗಲೂ ಅಪ್ಪನಿಗೆ ಹುಟ್ಟಿದ ಮಗನಾಗಿದ್ರೆ ನನ್ನ ಮುಂದೆ ಬರಲಿ. ಆವಾಗ ಈ ಕೊಡಗಿನ ದೇವಯ್ಯ ಯಾರೆಂದು ತೋರಿಸುತ್ತೀನಿ” ಎಂದು ಬಿಜೆಪಿ ಮುಖಂಡ ಎಂ.ಬಿ.ದೇವಯ್ಯ ಬಹಿರಂಗ ಸವಾಲು ಹಾಕಿದ್ದಾರೆ..

 

 

ಮಡಿಕೇರಿಯಲ್ಲಿ ಮಾತನಾಡಿದ ಅವರು, “ನಾನು ಗಾಂಧಿವಾದಿ ಅಲ್ಲ. ಸುಭಾಷ್‌ ಚಂದ್ರ ಬೋಸ್ ಕೆಟಗರಿಯವನು. ಒಂದು ಕೆನ್ನೆಗೆ ಹೊಡೆದರೆ, ಇನ್ನೊಂದು ಕೆನ್ನೆ ತೋರಿಸುತ್ತೇನೆ ಎಂದು ತಿಳಿಯಬೇಡಿ, ತದುಗಿಸಿಕೊಳ್ಳುವ ವ್ಯಕ್ತಿ ನಾನಲ್ಲ, ನನಗೂ ತದುಕಲು ಬರುತ್ತದೆ. ತಕ್ಕಟ್ಟಿದ್ದಾರೆ ಮುಟ್ಟಿ ನೋಡಲಿ. ಅವನು ಅಪ್ಪನಿಗೆ ಹುಟ್ಟಿದ ಮಗನಾಗಿದ್ದರೆ ಬಂದು ನನ್ನ ಮುಂದೆ ನಿಲ್ಲಲಿ, ಈ ದೇವಯ್ಯ ಯಾರು ಎಂದು ತೋರಿಸುತ್ತೇನೆ” ಎಂದು ಸಿಂಹ ವಿರುದ್ಧ ವಾಗ್ದಾಳಿ ನಡೆಸಿದರು.

“ನನಗೆ 68 ವಯಸ್ಸು, ಅವನಿಗೆ 35 ವರ್ಷ ಇರಬಹುದು.ನನ್ನ ಮಗಳು ವಯಸ್ಸಿನವನ ಪ್ರತಾಪ್ ಸಿಂಹ ಹೆಜ್ಜೆ ಇಡೋತ್ತಿರುವಾಗ. ಪಕ್ಷದ ಹಿರಿಯ ಮುಖಂಡನಾಗಿ ಬುದ್ದಿ ಹೇಳುವ ಜವಾಬ್ದಾರಿ ನನ್ನ ಮೇಲಿದೆ. ಅಂದು ಮಾತನಾಡುವಾಗ ಭಾವೋದ್ವೇಕ ಆಗಿದ್ದು ನಿಜ. ಅಂದೇ ನಾನು ಕ್ಷಮೆ ಕೇಳಿದ್ದೇನೆ. ಆದರೆ, ಎಲ್ಲಿಯೂ ಅಶ್ಲೀಲ ಪದ ಬಳಕೆ ಮಾಡಿಲ್ಲ’ ಎಂದು ಸಮಜಾಯಿಸಿ ನೀಡಿದ್ದಾರೆ.

ಏನಿದು ಘಟನೆ?
ಕೊಡಗು ಜಿಲ್ಲೆಯ ಹೆಬ್ಬೆಟ್ಟಗೆರಿಗೆ ಇಂದು ಕೇಂದ್ರದ ನೆರೆ ಅಧ್ಯಯನ ತಂಡ ಪರಿಶೀಲನೆ ಬಂದಿತ್ತು. ಆ ಅಧಿಕಾರಿಗಳಿಗೆ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಮಾಹಿತಿ ನೀಡುತ್ತಿದ್ದರು. ಈ ವೇಳೆ ಅಲ್ಲೇ ಇದ್ದ ದೇವಯ್ಯ ಏಕಾಏಕಿ ಪ್ರತಾಪ್ ಸಿಂಹ ಅವರ ಮೇಲೆ ಸಿಟ್ಟಾಗಿ ‘ನಿಮ್ಮನ್ನು ಸಂಸದರಾಗಿ ಮಾಡಿದ್ದೆ ನಮ್ಮ ದುರಂತ’ ಎಂದು ತರಾಟೆಗೆ ತೆಗೆದುಕೊಂಡಿದ್ದರು.

ಕೇಂದ್ರದ ಪರಿಶೀಲನೆ ತಂಡಕ್ಕೆ ನೀವು ತಪ್ಪು ಮಾಹಿತಿ ನೀಡುತ್ತಿದ್ದೀರಿ, ನಿಮ್ಮನ್ನು ಸಂಸದರನ್ನಾಗಿ ಮಾಡಿದ್ದು ನಮ್ಮ ದುರಂತ. ತಪ್ಪು ಮಾಹಿತಿ ನೀಡಿ ಜನರನ್ನು ಒಕ್ಕಲೆಬ್ಬಿಸಲು ಯತ್ನಿಸುತ್ತಿದ್ದೀರಿ. ಬೆಂದ ಗಾಯಕ್ಕೆ ಉಪ್ಪು ನೀರು ಸುರಿಯುತ್ತಿದ್ದೀರಾ ಎಂದು ದೇವಯ್ಯ ಜನಪ್ರತಿನಿಧಿಗಳಾಗಿರುವ ನೀವು ಜನಪ್ರತಿನಿಧಿಯಂತೆ ವರ್ತಿಸಬೇಕು. ಅದು ಬಿಟ್ಟು ಜನವಿರೋಧಿಯಾಗಿ ವರ್ತಿಸಬೇಡಿ ಎಂದು ಹರಿಹಾಯ್ದಿದ್ದರು.

“ನಿಮ್ಮಂಥವರಿಂದ ಪಕ್ಷ ಉದ್ಧಾರ ಆಗಲ್ಲ. ನೀವು ಮೊದಲು ನಮ್ಮ ಪಕ್ಷದ ಸಂಸದ ಎಂಬುದನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಪಕ್ಷದಲ್ಲಿ ನನ್ನ ವಿರುದ್ಧ ಏನು ಕ್ರಮ ತೆಗೆದುಕೊಳ್ಳುತ್ತೀರೋ ತೆಗೆದುಕೊಳ್ಳಿ ಎಂದು ಖಾರವಾಗಿ ನುಡಿದ್ದರು. ಈ ವೇಳೆ ಸ್ಥಳೀಯ ಬಿಜೆಪಿ ಶಾಸಕ ಸಹ ಅಲ್ಲೇ ಇದ್ದರು. ತಮ್ಮ ಪಕ್ಷದ ಹಿರಿಯ ಮುಖಂಡರಿಂದಲೇ ಮಂಗಳಾರತಿ ಮಾಡಿಸಿಕೊಂಡ ಸಂಸದ ಪ್ರತಾಪ್ ಸಿಂಹ ತೀವ್ರ ಮುಜುಗರಕ್ಕೊಳಗಾಗಿ ಸ್ಥಳದಿಂದ ತೆರಳಿದ್ದರು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top