ಸಮಾಚಾರ

ಈಗ ಸುದೀಪ್ ಮತ್ತು ಗಣೇಶ್ ಕೇವಲ ಸ್ನೇಹಿತರಷ್ಟೇ ಅಲ್ಲ – ಸಂಬಂಧಿಗಳು ಕೂಡ ಹೌದು.

ಗೋಲ್ಡನ್​ ಸ್ಟಾರ್​ ಗಣೇಶ್​ ಹಾಗೂ ಅಭಿನಯ ಚಕ್ರವರ್ತಿ ಸುದೀಪ್​ ಅವರು ಮೊದಲಿನಿಂದಲೂ ಒಳ್ಳೆಯ ಸ್ನೇಹಿತರು.. ಇಬ್ಬರಿಗೂ ಉತ್ತಮ ಒಡನಾಟ, ಬಾಂದವ್ಯ ಇದೆ., ಅದರಲ್ಲೂ ಕನ್ನಡ ಚಲನಚಿತ್ರ ಕಪ್ ಟೂರ್ನಮೆಂಟ್​ ನಡೆದ ಬಳಿಕ ಸುದೀಪ್ ಮತ್ತು ಗಣೇಶ್ ನಡುವಿನ ಸ್ನೇಹ ಮತ್ತಷ್ಟು ಗಟ್ಟಿಯಾಗಿದೆ.

 

 

ಇತ್ತೀಚಿಗೆ ಸುದೀಪ್ ಮತ್ತು ಗಣೇಶ್ ಭೇಟಿಯಾಗಿದ್ದು ಸ್ವಲ್ಪಹೊತ್ತು ಉಭಯ ಕುಶಲೋಪರಿ ನಡೆಸಿದ್ದಾರೆ. ಗಣೇಶ್ ಜೊತೆಗಿನ ಭೇಟಿಯ ಬಗ್ಗೆ ಸುದೀಪ್ ಟ್ವೀಟ್ ಮಾಡಿದ್ದು, “ಹೀಗೆ ತುಂಬ ಸಮಯದಿಂದ ಮಾತನಾಡುತ್ತ ಕುಳಿತಿರುವಾಗ ನಾನು ಮತ್ತು ಗಣೇಶ್ ಇಬ್ಬರು ಸಂಬಂಧಿಗಳು ಎಂಬ ವಿಷಯ ನಮಗೆ ತಿಳಿಯಿತು. ಈಗ ನನ್ನ ಮನೆಯಲ್ಲಿ ‘ಗೋಲ್ಡ್’ ಇದೆ. ನಾನೇ ಶ್ರೀಮಂತ” ಎಂದು ಬರೆದು ಎರಡು ನಗು ಎಮೋಜಿಯನ್ನು ಹಾಕಿ ಗಣೇಶ್ ಮತ್ತು ಅವರ ಫೋಟೋ ಹಾಕಿ ಟ್ವೀಟ್ ಮಾಡಿದ್ದಾರೆ.

 

 

ಆದರೆ ಗಣೇಶ್ ಮತ್ತು ಸುದೀಪ್ ಅದ್ಯಾವ ರೀತಿಯಲ್ಲಿ ಸಂಭಂದಿಗಳಾಗುತ್ತಾರೆ? ಗಣೇಶ್ ಕಿಚ್ಚನಿಗೆ ಸಂಭಂದದಲ್ಲಿ ಏನಾಗಬೇಕು? ಎಂಬ ವಿಚಾರವನ್ನ ಹೇಳಿಲ್ಲ. ಗಣೇಶ್ ಜೊತೆಗೊಂದು ಸೆಲ್ಫಿ ತೆಗೆದುಕೊಂಡಿರುವ ಸುದೀಪ್ ತಮ್ಮ ಸಂತಸವನ್ನು ಟ್ವಿಟ್ಟರ್ ಖಾತೆಯ ಮೂಲಕ ಎಲ್ಲರ ಜೊತೆಗೆ ಹಂಚಿಕೊಂಡಿದ್ದಾರೆ. ಈ ಟ್ವೀಟ್ಅನ್ನು ಗಣೇಶ್ ಕೂಡ ರೀಟ್ವೀಟ್ ಮಾಡಿದ್ದಾರೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top