fbpx
ಸಮಾಚಾರ

ಸರ್ ಎಂ.ವಿಶ್ವೇಶ್ವರಯ್ಯರ 157ನೇ ಜನ್ಮದಿನಕ್ಕೆ ಗೂಗಲ್ ಡೂಡಲ್ ಗೌರವ.

ಇಂದು ಭಾರತ ಕಂಡ ಶ್ರೇಷ್ಠ ಎಂಜಿನಿಯರ್ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯರ 157ನೇ ಜನ್ಮದಿನ. ಈ ಹಿನ್ನೆಲೆ ದೇಶಾದ್ಯಂತ ಎಂಜಿನಿಯರಿಂಗ್ ಸಮುದಾಯ ಇಂದು ಎಂಜಿನಿಯರ್ಸ್ ದಿನವನ್ನಾಗಿ ಆಚರಿಸಲಾಗುತ್ತಿದೆ. ಸರ್ ಎಂವಿ ಎಂದೇ ಜನಪ್ರಿಯರಾಗಿದ್ದ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ 157ನೇ ಜನ್ಮದಿನಕ್ಕೆ ಗೂಗಲ್ ಡೂಡಲ್ ಮೂಲಕ ಗೌರವ ಸಲ್ಲಿಸಿದೆ.. ತನ್ನ ಮುಖಪುಟದಲ್ಲಿ ವಿಶ್ವೇಶ್ವರಯ್ಯರ ಭಾವಚಿತ್ರವನ್ನ ಭಿತ್ತರಿಸುವ ಮೂಲಕ ಅವರಿಗೆ ಗೂಗಲ್ ಗೌರವ ಸಲ್ಲಿಸಿದೆ.

 

 

ಸರ್.ಎಂವಿಯವರು ಭಾರತದ ಅತ್ಯಂತ ಪ್ರಸಿದ್ಧ ಸಿವಿಲ್ ಎಂಜಿನಿಯರ್, ಡ್ಯಾಮ್‌ ನಿರ್ಮಾತೃ, ಅರ್ಥಶಾಸ್ತ್ರಜ್ಞ, ಮುತ್ಸದ್ಧಿ, ಹಾಗೂ ಆಧುನಿಕ ಭಾರತದ ನಿರ್ಮಾಣಕ್ಕೆ ತಳಪಾಯ ಹಾಕಿದವರು.ವಿಶ್ವೇಶ್ವರಯ್ಯ ಹುಟ್ಟಿದ್ದು ಸೆಪ್ಟೆಂಬರ್ 15, 1861ರಂದು. ಅವರ ಜನ್ಮದಿನವಾದ ಸೆಪ್ಪೆಂಬರ್ 15ರಂದು ಪ್ರತಿ ವರ್ಷ ಎಂಜಿನಿಯರ್‌ಗಳ ದಿನಾಚರಣೆ ಎಂದು ದೇಶಾದ್ಯಂತ ಆಚರಿಸಲಾಗುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವೂ ಹೌದು.

1912-1918ರ ಅವಧಿಯಲ್ಲಿ ಮೈಸೂರಿನ ದಿವಾನರಾಗಿ ಸೇವೆ ಸಲ್ಲಿಸಿದ್ದರು. ವಿಶ್ವೇಶ್ವರಯ್ಯನವರು ದಿವಾನರಾಗಿದ್ದಾಗ ಬ್ರಿಟಿಷ್ ಸರ್ಕಾರ ಅವರಿಗೆ “ಸರ್” ಪದವಿಯನ್ನು ನೀಡಿತ್ತು.. ಸಮಾಜಕ್ಕೆ ಅವರ ಅನನ್ಯ ಕೊಡುಗೆಯನ್ನು ನೆನೆದು ಭಾರತ ಸರಕಾರ 1955ರಲ್ಲಿ ಅವರಿಗೆ ಭಾರತ ರತ್ನ ಗೌರವವನ್ನು ನೀಡಿದೆ.

 

ಈ ಹಿಂದೆ ನಟಸಾರ್ವಭೌಮ ರಾಜಕುಮಾರ್ ಮತ್ತು ಕುವೆಂಪು ಅವರ ಜನ್ಮ ದಿನಗಳಂದು ಕೂಡ ಗೂಗಲ್ ಡೂಡಲ್ ಇಬ್ಬರಿಗೂ ಗೌರವ ಸಲ್ಲಿಸಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top