ಇನ್ನೇನು ಒಂದೆರೆಡು ದಿನಗಳಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅವರ ಜನ್ಮ ದಿನೋತ್ಸವ ಬರುತ್ತಿದೆ.. ವಿಷ್ಣು ನಮ್ಮನ್ನೆಲ್ಲಾ ಆಗಲಿ ಒಂಭತ್ತು ವರ್ಷಗಳೇ ಕಳೆದಿದೆ ಆದರೆ ಕನ್ನಡಿಗರ ಹೃದಯದ ಸಿಂಹಾಸನವನ್ನು ಶಾಶ್ವತವಾಗಿ ‘ಯಜಮಾನನಾಗಿದ್ದಾರೆ. ಡಾ.ವಿಷ್ಣುವರ್ಧನ್ ಅವರ ಜನ್ಮದಿನದ ಸವಿನೆನಪಿನಲ್ಲಿ ವಿಷ್ಣು ಕುಟುಂಬ ‘ಹೃದಯಗೀತೆ’ ಎಂಬ ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು. ಈ ಕಾರ್ಯಕ್ರಮದಲ್ಲಿ ಚಿತ್ರರಂಗದ ಗಣ್ಯಾತಿಗಣ್ಯರು ಭಾಗವಹಿಸಿದ್ದು ಎಲ್ಲರೂ ಸಾಹಸಸಿಂಹ ನಡುವಿನ ಒಡನಾಟವನ್ನು ಹಂಚಿಕೊಂಡಿದ್ದಾರೆ.. ಅದೇ ರೀತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹ್ಯಾಟ್ರಿಕ್ ಹೀರೋ ವಿಷ್ಣು ಜೊತೆಗಿನ ಭಾಂದವ್ಯವನ್ನು ಬಿಚ್ಚಿಟ್ಟರು.
ನಮ್ಮ ‘ವಿನಯವಂತಿಕೆಯ ರಾಯಭಾರಿಯ’ ನೇರವಂತಿಕೆಯ ಎದೆಯಾಳದ ಮಾತು..ಹೃದಯವಂತಿಕೆಯ “,ಹೃದಯವಂತ Dr..ವಿಷ್ಣು ದಾದಾನ ಬಗ್ಗೆ..Love u #Shivanna #Missudada pic.twitter.com/2JiT5MH6EV
— Raghuram (@raghuram9777) September 14, 2018
ವಿಷ್ಣುವರ್ಧನ್ ಅವರ ಚೊಚ್ಚಲ ಸಿನಿಮಾ ನಾಗರಹಾವು ತೆರೆಕಂಡಿದ್ದಾಗ ಶಿವಣ್ಣನಿಗೆ 12 ವರ್ಷ ವಯಸ್ಸಾಗಿತ್ತಂತೆ.. ನಾಗರಹಾವು ಸಿನಿಮಾ ನೋಡಿದ್ದ ಶಿವನ್ನ “ಅಂದಿನಿಂದಲೇ ಸಾಹಸಸಿಂಹ ಅಭಿಮಾನಿ ಆಗ್ಬಿಟ್ರಂತೆ. ಈ ಚಿತ್ರವನ್ನು ಮೆಚ್ಚಿಕೊಂಡಿದ್ದ ಅವರು, ಯಾರಪ್ಪ ಹೊಸ ಹೀರೋ ನೋಡೋಕೆ ಸಕತ್ ಸ್ಮಾರ್ಟ್ ಆಗಿ ಇದ್ದಾರೆ, ವಿಷ್ಣುವಿನ ಆಂಗ್ರಿ ಯಂಗ್ ಮ್ಯಾನ್ ಲುಕ್ ನೋಡಿ ಶಿವಣ್ಣ ಫುಲ್ ಫಿದಾ ಆಗಿಬಿಟ್ಟಿದ್ದರಂತೆ. ನಾಗರಹಾವು ಸಿಲ್ವರ್ ಜೂಬ್ಲಿ ಆಚರಿಸಿಕೊಳ್ಳುತ್ತೆ ಅಂತಾ ಹೇಳಿದ್ದರಂತೆ..
ವಿಷ್ಣು ಹಾಗೂ ತಮ್ಮ ನಡುವಿನ ಒಡನಾಟವನ್ನು ಹೇಳಿಕೊಂಡಿರುವ ಶಿವಣ್ಣ, ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ಹೌದು “ಶಿವಣ್ಣನ ಮೊದಲ ಸಿನಿಮಾ ‘ಆನಂದ್’ ಅನ್ನು ನೋಡಿ ಮೆಚ್ಚಿಕೊಂಡಿದ್ದ ವಿಷ್ಣು, ತಮ್ಮ ವಾಚನ್ನು ಗಿಫ್ಟ್ ಆಗಿ ಇವರಿಗೆ ನೀಡಿದ್ದರಂತೆ.. ವಿಶೇಷ ಅಂದ್ರೆ ಆ ವಾಚ್ಅನ್ನು ಎಂ.ಜಿ. ರಾಮಚಂದ್ರನ್ ಅವರು ವಿಷ್ಣುವರ್ಧನ್ ಅವರಿಗೆ ನೀಡಿದ್ದರಂತೆ.. “ಇದನ್ನ ನಾ ಯಾವತ್ತಿಗೂ ಮರೆಯೊದಿಲ್ಲ” ಎಂದರು ಅಣ್ಣಾವ್ರ ಮಗ ಶಿವರಾಜಕುಮಾರ್.
ವಿಷ್ಣುವರ್ಧನ್ ಜೊತೆ ಶಿವಣ್ಣ ಸುಮಾರು ಆರೇಳು ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡಿದ್ದರಂತೆ.. ಇನ್ನು ಶಿವಣ್ಣನನ್ನು ವಿಷ್ಣುವರ್ಧನ್ ಅವರು ಪ್ರೀತಿಯಿಂದ ‘ಶಿವು’ ಅಂತಾ ಕರೆಯುತ್ತಿದ್ದರಂತೆ..ಇಷ್ಟೆಲ್ಲಾ ವಿಚಾರಗಳನ್ನ ಹಂಚಿಕೊಂಡ ಶಿವಣ್ಣ “ವಿಷ್ಣುವರ್ಧನ್ ಅಂಕಲ್ ಜೊತೆಗೆ ಒಂದು ಸಿನಿಮಾದಲ್ಲಾದರೂ ನಟಿಸುವ ಅವಕಾಶ ಸಿಗಲಿಲ್ಲ, ಇದು ನನಗೆ ತುಂಬಾ ಬೇಸರವನ್ನುಂಟುಮಾಡುತ್ತದೆ” ಎಂದು ಬೇಸರ ವ್ಯಕ್ತಪಡಿಸಿದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
