fbpx
ಮನೋರಂಜನೆ

ನವರಸ ನಾಯಕನ ಕೊಬ್ಬು ಕರಗಿಸಲು ರೆಡಿ ಆದ ಪರಿಮಳ ಜಗ್ಗೇಶ್

ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರೋ ನವರಸ ನಾಯಕ ಜಗ್ಗೇಶ್ ಇದೀಗ ಒಂದು ಸ್ವಾರಸ್ಯಕರ ವಿಚಾರವನ್ನು ತಮ್ಮ ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ಜಗ್ಗೇಶ್ ಅವರನ್ನು ಅಭಿಮಾನಿಸುವವರು ಮೊದಲು ಮಾತಾಡೋದೇ ಅವರ ಭಿನ್ನವಾದ ಮ್ಯಾನರಿಸಂ ಮತ್ತು ತಮ್ಮ ವಿಶಿಷ್ಟವಾದ ನಟನಾ ಶೈಲಿ.
ಚಿತ್ರರಂಗಕ್ಕೆ ಪೋಷಕ ನಟನಾಗಿ ಎಂಟ್ರಿ ಕೊಟ್ಟು ಖಳನಾಯಕನಾಗಿ, ಹಾಸ್ಯನಟನಾಗಿ ನಟಿಸಿ ಆಮೇಲೆ ತಮ್ಮ ಸ್ವಪ್ರತಿಭೆಯಿಂದಲೇ ನಾಯಕನಟನಾಗಿ ಬೆಳೆದಿರುವ ಜಗ್ಗೇಶ್ ವೃತ್ತಿ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ನೋಡಿದ್ದಾರೆ. ತಾವು ಹೀರೊ ಆಗೋಕೂ ಮುಂಚೆ ಅಂದ್ರೆ ಸಣ್ಣ ಪುಟ್ಟ ಪಾತ್ರಗಳನ್ನ ನಿರ್ವಹಿಸುವ ಪೋಷಕ ನಟನಾಗಿದ್ದಾಗಾಲೇ ತೆಲುಗು ಚಿತ್ರರಂಗದ ಮೇರು ನಟ NTR ನೀವು ಮುಂದೊಂದು ದಿನ ದೊಡ್ಡ ನಟನಾಗಿ ಬೆಳೆಯುತ್ತೀರಿ ಎಂದು ಜಗ್ಗೇಶ್’ಗೆ ಹೇಳಿದ್ದರಂತೆ.

 

 

 

ಈ ಸಲ ಜಗ್ಗೇಶ್ ಸುದ್ದಿಯಲ್ಲಿ ಇರುವುದು ಈ ಕಾರಣಕ್ಕೆ,40 ರಲ್ಲೂ ಯುವಕನಂತೆ ಕಾಣುವ ಜಗ್ಗೇಶ್ ಸಿಕ್ಕಾಪಟ್ಟೆ ವರ್ಕ್​ ಔಟ್ ಶುರು ಹಚ್ಕೊಂಡ್ ಇದ್ದಾರೆ ,ರಿಯಾಲಿಟಿ ಶೋ ಒಂದ್ರಲ್ಲಿ ತೀರ್ಪುಗಾರರಾಗಿ ಕೆಲಸ ಮಾಡುತ್ತಿರುವ ಜಗ್ಗೇಶ್ ಆ ಶೋ ನ ಇನ್ನೊಂದುತೀರ್ಪುಗಾರರಾದ ರಕ್ಷಿತಾ ರವರನ್ನು ಡಯಟ್ ಬಗ್ಗೆ ಕಾಲೆಳೆಯುತ್ತಿದ್ದದು ಉಂಟು .
ಈಗ ಸ್ವತಃ ನವರಸ ನಾಯಕರು ಡಯೆಟ್​ ಮೊರೆ ಹೋಗಿದ್ದಾರೆ.ಕಲಾವಿದರಿಗಿ ಅವ್ರ ಬ್ಯೂಟಿ ,ಫಿಟ್ನೆಸ್ ಮೇಂಟೈನ್ ಮಾಡೋದು ತುಂಬಾ ಮುಖ್ಯ ಈ ಕಾರಣದಿಂದ ಹೊಸ ಡಯಟ್​​ ಪ್ಲಾನ್​​ ಶುರು ಹಚ್ಕೊಂಡ್ ಅವ್ರೆ ​ ಜಗ್ಗೇಶ್,ತಮ್ಮ ಪತ್ನಿ ಪರಿಮಳ ಸೂಚನೆಯಂತೆ ಈಗ ಜಗ್ಗೇಶ್​​ ಡಯಟ್​​ ಫಾಲೋ​​ ಮಾಡ್ತಿದ್ದಾರೆ. 45 ದಿನಗಳಲ್ಲಿ 5 ಕೆಜಿ ತೂಕ ಇಳಿಸೋ ಟಾರ್ಗೆಟ್ ಇಟ್ಟುಕೊಂಡಿರೋ ಜಗ್ಗೇಶ್, ಏನೇ ಆದ್ರೂ ತೂಕ ಇಳಿಯುವ ವರಿಗೂ ಡಯಟ್ ಬಿಡಲ್ಲ ಅಂತ ಕೂತಾವ್ರೆ,ಈ ವಿಷಯ ಕುರಿತು ಸ್ವತಃ ಅವರೇ ಟ್ವೀಟ್ ಮಾಡಿದ್ದು, ಪರಂಗಿ ಹಣ್ಣಿನ ಫೋಟೋವನ್ನು ಶೇರ್ ಮಾಡಿದ್ದಾರೆ .

ಅದರ ಜೊತೆ “ಓಂ ನಮಃ ಶಿವಾಯಃ..ವಾರದಿಂದ ಇದೆ ನನ್ನ ತಿಂಡಿ ಊಟ..!!ಗಂಡನ ಕೊಬ್ಬು ಕರಗಿಸಲು ಹೆಂಡತಿ ಪ್ರೀತಿ ಯಿಂದ ಮಾಡಿಸುತ್ತಿರುವ #diet #AlaMirap5kg target fr 45days..ತ್ಯಾಗವೆ ಕಲಾವಿದರ ಬದುಕು..6ತಿಂಗಳು diet ಬಿಟ್ಟಿದ್ದಕ್ಕೆ 5kg put on..ಯಾಕೆ ಬೇಕು ಓಡಿಸುವೆ ಆkgಗಳ thnks to ವೈಫ್” ಎಂದು ಬರೆದು ಕೊಂಡಿದ್ದಾರೆ

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top