fbpx
ಸಮಾಚಾರ

‘ಕರ್ನಾಟಕದಲ್ಲಿ ಕನ್ನಡ ಅವಶ್ಯಕತೆಯಿಲ್ಲ’ ಎಂದ ‘ಕನ್ನಡದ್ರೋಹಿ’ ಬಿರ್ಲಾ ಗ್ರೂಪ್ ಉತ್ಪನ್ನಗಳಿಗೆ ಬಹಿಷ್ಕಾರ ಹಾಕಿದ ಕನ್ನಡಿಗರು.

ನಮ್ಮ ತಾಯ್ನಾಡಿಗೆ ಬಂದು ವ್ಯಾಪಾರ ಮಾಡಿ ಲಾಭ ಗಳಿಸಿಕೊಳ್ಳುತ್ತಿರುವ ಉತ್ತರದ ಪರದೇಸಿ ಹಿಂದಿ ವ್ಯಾಪಾರಿಗಳು ಇದೀಗ ಕನ್ನಡ ಭಾಷೆಯ ವಿರುದ್ಧವೇ ತಿರುಗಿ ಬೀಳುವಷ್ಟರ ಮಟ್ಟಿಗೆ ಕೊಬ್ಬಿಕೊಂಡಿದ್ದಾರೆ.. ಉಂಡ ಮನೆಗೆ ಕೇಡು ಬಗೆಯುವುದು ಎಂಬ ಮಾತಿಗೆ ಬಹುಷಃ ಈ ಚಿಲ್ಲರೆ ವ್ಯಾಪಾರಿಗಳು ಅತ್ಯತ್ತಮ ಉದಾಹರಣೆ ಎನ್ನಬಹುದು. ಯಾಕಂದರೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿನ ಎಲ್ಲಾ ವಾಣಿಜ್ಯ ಮಳಿಗೆಗಳು ಅಳವಡಿಸುವ ನಾಮ ಫಲಕಗಳಲ್ಲಿ ಕನ್ನಡ ಭಾಷೆಯನ್ನು ಪ್ರಧಾನವಾಗಿ ಬಳಸುವುದನ್ನು ಕಡ್ಡಾಯಗೊಳಿಸಿ ಎಂದು ಬಿಬಿಎಂಪಿ ಸುತ್ತೋಲೆ ಹೊರಡಿಸಿತ್ತಲ್ಲಾ ಅದು ಇದೀಗ ವಿವಾದದ ತಿರುವು ಪಡೆದುಕೊಂಡಿದೆ. ಬಿಬಿಎಂಪಿ ಹೊರಡಿಸಿರುವ ಈ ಸುತ್ತೋಲೆಯನ್ನು ರದ್ದುಪಡಿಸುವಂತೆ ಕೋರಿ ‘ಭಾರತೀಯ ಚಿಲ್ಲರೆ ಮಾರಾಟಗಾರರ ಸಂಘ’ ಮತ್ತು’ಆದಿತ್ಯ ಬಿರ್ಲಾ ಫ್ಯಾಷನ್‌ ರೀಟೇಲ್‌ ಲಿಮಿಟೆಡ್‌’ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಬಿಬಿಎಂಪಿ ಹೊರಡಿಸಿದ್ದ ಸುತ್ತೋಲೆ ಏನು?
ಯಾವುದೇ ಅಂಗಡಿ ಮುಂಗಟ್ಟು, ಹೋಟೆಲ್‌ಗಳು, ಕಂಪನಿಗಳು ತಮ್ಮ ಮಳಿಗೆಗಳ ಮುಂದೆ ಅಳವಡಿಸುವ ನಾಮಫಲಕಗಳಲ್ಲಿ ಕನ್ನಡ ಭಾಷೆ ಕಡ್ಡಾಯವಾಗಿ ಇರಬೇಕು.. ನಾಮಫಲಕಗಳಲ್ಲಿ ಶೇಕಡಾ 60ರಷ್ಟು ಕನ್ನಡ ಪದಗಳನ್ನು ಸ್ಪಷ್ಟವಾಗಿ ಕಾಣುವಂತೆ ಬಳಸಬೇಕಿದ್ದು, ಉಳಿದ ಶೇಕಡಾ 40ರಷ್ಟು ತಮಗೆ ಅನುಕೂಲವಾಗುವ ಭಾಷೆ ಪದಗಳನ್ನು ಬಳಸಬಹುದೆಂದು BBMP 2017ರ ಜುಲೈ 27ರಂದು ಸುತ್ತೋಲೆ ಹೊರಡಿಸಿತ್ತು. ಇದನ್ನು ಪಾಲಿಸದ್ದಿದ್ದಲ್ಲಿ ಪರವಾನಗಿ ರದ್ದು ಪಡಿಸುವುದಾಗಿ ಎಚ್ಚರಿಕೆ ನೀಡಿತ್ತು.

ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡ ಅಕ್ಷರಗಳನ್ನು ಬಳಸಿ ಎಂದು ಹೇಳಿದ್ದಕ್ಕೆನೇ ಅಂಡಲ್ಲಿ ಉರಿ ಕಡೆದುಕೊಂಡು ಕೋರ್ಟ್ ಮೆಟ್ಟಿಲೇರುವ ಬಿರ್ಲಾ ಗ್ರೂಪ್ “ಕನ್ನಡದ ಬೋರ್ಡುಗಳ ಅವಶ್ಯಕೆತೆಯಿಲ್ಲ” ಎಂದು ವಾದಿಸುತ್ತಿದೆ.. ಇಂಥಾ ಅನಿಷ್ಟರಿಗೆ ಕನ್ನಡಿಗರಿಂದ ವ್ಯಾಪಾರ ಬೇಕು ಆದ್ರೆ ‘ಕನ್ನಡ ಭಾಷೆ’ ಮಾತ್ರ ಯಾವುದೇ ಕಾರಣಕ್ಕೂ ಬೇಡವಂತೆ.. ಸಣ್ಣದೊಂದು ಅವಕಾಶ ಸಿಕ್ಕರೆ ಸಾಕು ಪುಸಕ್ಕನೆ ಹಿಂದಿಯನ್ನು ತುರುಕಲು ನುಗ್ಗಿ ಬರುವ ಕೇಂದ್ರ ಸರ್ಕಾರ ಹಿಂದಿ ಮಾತನಾಡದ ಪ್ರದೇಶಗಳಲ್ಲಿ ಹೇರಿಕೆ ಮಾಡಿದರೆ ಅದು ಭಾಷೆಯ ಪ್ರಚಾರವಂತೆ. ಅದೇ ಅಪ್ಪಟ ಕನ್ನಡನಾಡು ಕರ್ನಾಟಕದಲ್ಲಿ ‘ಕನ್ನಡ’ ಬೋರ್ಡ್ ಹಾಕೊಳ್ಳಿ ಅಂದ್ರೆ ಅದು ಹಿಂಸೆ, ಒತ್ತಾಯವಂತೆ.. ಆದಿತ್ಯ ಬಿರ್ಲಾ ಅಂತಹ ದರಿದ್ರ ಕನ್ನಡದ್ರೋಹಿ ಕಂಪನಿಗಳಿಗೆ ‘ಕನ್ನಡ ವಿರೋಧಿ’ ನಡೆ ತೆಗೆದುಕೊಳ್ಳಲು ಕೇಂದ್ರ ಸರ್ಕಾರದ ಕುಮ್ಮಕ್ಕೇನಾದರೂ ಇದೆಯಾ ಎಂಬ ಅನುಮಾನ ಕಾಡುತ್ತಿದೆ.

ಕೇಂದ್ರ ಸರಕಾರ ಭಾರತದಾದ್ಯಂತ ಅನಾವಶ್ಯಕವಾಗಿ ಹಿಂದಿಯನ್ನು ಹರಡಲು ಏನೇ ಕ್ರಮ ಕೈಗೊಂಡರೂ ಅದು ಮಾತ್ರ ಕಾನೂನುಬದ್ದವಂತೆ.. ಆದರೆ ನಮ್ಮ ಪ್ರಾದೇಶಿಕ ಭಾಷೆಗಾಗಿ ಹಿಂದಿಯೇತರ ಪ್ರಾದೇಶಿಕ ರಾಜ್ಯಗಳ ಸರ್ಕಾರಗಳು ಈ ರೀತಿಯ ಯಾವುದಾದರೂ ಕ್ರಮ ಕೈಗೊಂಡರೆ ಅದು ಕಾನೂನು ಬಾಹಿರವಂತೆ.. ಇಂಥಾ ಹಿಂದಿವಾಲಾಗಳ ವಿರುದ್ಧ ಇದೀಗ ಕನ್ನಡಿಗರು ಸಿಡಿದೇಳುವ ಸಮಯ ಬಂದಿದೆ.. ಹಾಗಾಗಿ ಸದ್ಯ ‘ಕನ್ನಡದ ಅವಶ್ಯಕತೆಯೇನಿಲ್ಲ’ ಎಂದು ಉಡಾಫೆ ಮಾತುಗಳನ್ನಾಡಿರುವ ಆದಿತ್ಯ ಬಿರ್ಲಾ ಗ್ರೂಪಿನ ಉತ್ಪನ್ನಗಳನ್ನು ಕನ್ನಡಿಗರು ಬಹಿಷ್ಕರಿಸಲು ಮುಂದಾಗಿದ್ದಾರೆ.. ಈ ಮೂಲಕ ಸಾಮಾನ್ಯ ಕನ್ನಡಿಗ ಪ್ರತಿಷ್ಠಾನವೂ ಕೂಡ ಈ ಬಿರ್ಲಾ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಕನ್ನಡಿಗರಲ್ಲಿ ಮನವಿ ಮಾಡಿಕೊಂಡಿದೆ.

ನಾವೇನು ಬೇರೆ ನಾಡಲ್ಲಿ ಹೋಗಿ ಕನ್ನಡ ಬೋರ್ಡು ನೇತುಹಾಕಿ ಅಂತ ಕೇಳುತ್ತಿಲ್ಲ, ಕರುನಾಡಲ್ಲಿ ಕನ್ನಡದ ಬಳಕೆ ಆಗಬೇಕಾದ್ದು ಸ್ವಾಭಾವಿಕ. ಎಲ್ಲೆಲ್ಲಿಂದಲೋ ಬಂಡ ಬಿಕನಾಸಿಗಳೆಲ್ಲಾ ಕನ್ನಡದ ವಿರುದ್ಧವೇ ಕಾರಿಕೊಳ್ಳುತ್ತಿರುವುದನ್ನು ಆರಂಭಿಸಿದ್ದು ಅಂಥ ‘ನಾಡದ್ರೋಹಿ’ ಕನ್ನಡಿಗರು ತಕ್ಕಪಾಠ ಕಲಿಸಲೇ ಬೇಕಾದ ಅನಿವಾರ್ಯತೆ ಎದುರಾಗಿದೆ.. ಅದನ್ನು ಬಿಟ್ಟು ಉದಾರತೆ ತೋರುತ್ತಾ ಹೋದರೆ ಮುಂದೊಂದು ದಿನ ಕರ್ನಾಟಕದಿಂದಲೇ ಕನ್ನಡವನ್ನು ಮೂಟೆಕಟ್ಟಿ ಬಿಸಾಡುವಷ್ಟರ ಮಟ್ಟಿಗೆ ಬೆಳೆದುನಿಂತುಕೊಳ್ಳುತ್ತಾರೆ ಎಂಬುದು ಪ್ರತಿಯೊಬ್ಬ ಪ್ರಜ್ಞಾವಂತ ಕನ್ನಡಿಗರ ಅಭಿಪ್ರಾಯವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top