ಮನೋರಂಜನೆ

ಸದ್ಯದಲ್ಲೇ ಅಪ್ಪ ಆಗ್ತಿದ್ದಾರೆ ಅಜೇಯ್ ರಾವ್- ಗಣೇಶ ಹಬ್ಬದಂದು ಸಿಹಿ ಸುದ್ದಿ ನೀಡಿದ ಕೃಷ್ಣ.

ಕನ್ನಡ ಚಿತ್ರರಂಗದಲ್ಲಿ ‘ಲವ್ ಬಾಯ್’ ಇಮೇಜ್‌ನ ಮೂಲಕ ಅಪಾರ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿರುವವರು ‘ಕೃಷ್ಣ ಅಜೇಯ್ ರಾವ್’.. ಕೃಷ್ಣನ ಲವ್ ಸ್ಟೋರಿ , ಕೃಷ್ಣನ ಮ್ಯಾರೆಜ್ ಸ್ಟೋರಿ , ಕೃಷ್ಣ ಲೀಲಾ , ಕೃಷ್ಣ ರುಕ್ಕು ಅಂತ ಕೃಷ್ಣ ಸೀರೀಸ್ ಚಿತ್ರಗಳಲ್ಲಿ ನಟಿಸೋ ಮೂಲಕ ಸ್ಯಾಂಡಲ್ ವುಡ್ ಕೃಷ್ಣ ಎಂದೇ ಕರೆಸಿಕೊಳ್ಳುವ ಅಜೇಯ್ ರಾವ್ ಇದೀಗ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ..

 

 

ಹಾಡು ಕೃಷ್ಣ ಅಜೇಯ್ ರಾವ್ ನಿಜಜೀವನದಲ್ಲಿ ಅಪ್ಪ ಆಗುತ್ತಿದ್ದಾರೆ. ಸ್ವಪ್ನಾ ಎಂಬುವವರ ಜೊತೆ ನಾಲ್ಕು ವರ್ಷಗಳ ಹಿಂದೆ ವಿವಾಹ ಜೀವನಕ್ಕೆ ಕಾಲಿಟ್ಟಿದ್ದ ಅಜೇಯ್ ರಾವ್ ತಾವು ತಂದೆ ಆಗುತ್ತಿರುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಗಣೇಶ ಹಬ್ಬದ ಹಿನ್ನೆಲೆಯಲ್ಲಿ ವಿನಾಯಕನನ್ನು ಚಿತ್ರಿಸುತ್ತಿರುವ ತಮ್ಮ ಪತ್ನಿ ಸ್ವಪ್ನಾರ ಫೋಟೋವನ್ನು ಅಜೇಯ್ ಶೇರ್ ಮಾಡಿಕೊಂಡಿದ್ದು ತಾವು ತಂದೆ ಆಗುತ್ತಿರುವ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ವಿಶೇಷ ಅಂದ್ರೆ ಸ್ವಪ್ನಾ ಅವರು ತುಂಬು ಗರ್ಭಿಣಿಯಾಗಿರೋದನ್ನು ಈ ಫೋಟೋ ಮೂಲಕ ಅವರು ಹೇಳಿದ್ದಾರೆ.

2014ರಲ್ಲಿ ಹೊಸಪೇಟೆ ಮೂಲದ ಸ್ವಪ್ನಾ ಜೊತೆ ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದ ಅಜಯ್ ರಾವ್ ಅವರು ಇದೀಗ ತಂದೆಯಾಗುತ್ತಿರುವ ಸಂಭ್ರಮದಲ್ಲಿದ್ದು ಇದರ ಜೊತೆಗೆ ಗೌರಿ ಗಣೇಶ್​ ಹಬ್ಬದ ಶುಭಾಶಯವನ್ನೂ ತಿಳಿಸಿದ್ದಾರೆ.. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಅಜಯ್ ರಾವ್ ಮತ್ತು ಅಜಯ್ ರಾವ್ ಪತ್ನಿ ಸ್ವಪ್ನ ಅವರಿಗೆ ಶುಭಾಷಯಗಳ ಮಹಾಪೂರವೇ ಹರಿದು ಬರುತ್ತಿವೇ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top