fbpx
ಭವಿಷ್ಯ

16 ಸೆಪ್ಟೆಂಬರ್ ರಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ ತಿಳಿಯಲು ಮುಂದೆ ಓದಿ

ಭಾನುವಾರ, ೧೬ ಸೆಪ್ಟೆಂಬರ್ ೨೦೧೮
ಸೂರ್ಯೋದಯ : ೦೬:೨೯
ಸೂರ್ಯಾಸ್ತ : ೧೮:೩೭
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಭಾದ್ರಪದ

ಪಕ್ಷ : ಶುಕ್ಲ ಪಕ್ಷ
ತಿಥಿ : ಸಪ್ತಮೀ – ೧೫:೫೪ ವರೆಗೆ
ನಕ್ಷತ್ರ : ಜ್ಯೆಷ್ಟ್ಯ – ೨೮:೫೫+ ವರೆಗೆ
ಯೋಗ : ಪ್ರೀತಿ – ೨೨:೫೯ ವರೆಗೆ
ಸೂರ್ಯ ರಾಶಿ : ಸಿಂಹ

ಅಭಿಜಿತ್ ಮುಹುರ್ತ: ೧೨:೦೮ – ೧೨:೫೭
ಅಮೃತಕಾಲ: ೧೯:೨೧ – ೨೧:೦೬
ರಾಹು ಕಾಲ:೧೭:೦೬ – ೧೮:೩೭
ಗುಳಿಕ ಕಾಲ: ೧೫:೩೫ – ೧೭:೦೬
ಯಮಗಂಡ:೧೨:೩೩ – ೧೪:೦೪

ವಿರೋಧಿಗಳನ್ನು ಮೆಟ್ಟಿ ನಿಲ್ಲುವಿರಿ. ಸಕಾರಾತ್ಮಕ ಚಿಂತನೆಯಿಂದ ಅಸಾಧ್ಯವಾದುದನ್ನು ಸಾಧ್ಯ ಮಾಡಿ ತೋರಿಸುವಿರಿ. ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುವುದು. ಅವರ ಮುಖದಲ್ಲಿನ ಮಂದಹಾಸ ನಿಮಗೆ ಉತ್ತಮ ಪ್ರೇರಣೆ ನೀಡುವುದು.

ಸಮಸ್ಯೆಯ ಹೊಸದೊಂದು ಲೋಕ ತೆರೆದುಕೊಳ್ಳುವ ಸಾಧ್ಯತೆ ಇದೆ. ಆದರೆ ಮಾತೃ ಪೂಜಕರಾದ ನಿಮಗೆ ಮಾತೃವಿನ ಆಶೀರ್ವಾದವಿದ್ದು ಎಲ್ಲ ಸಮಸ್ಯೆಗಳಿಗೂ ಸೂಕ್ತ ಪರಿಹಾರ ಕಂಡುಕೊಳ್ಳುವಿರಿ.

ಬೆಳ್ಳಗಿದ್ದುದೆಲ್ಲಾ ಹಾಲೆಂದು ಭ್ರಮಿಸುವ ನಿಮಗೆ ನಿಮ್ಮ ರಕ್ತ ಸಂಬಂಧಿಕರೇ ಹಿತಶತ್ರುಗಳು. ನಂಜನ್ನು ಉಂಡ ನಂಜುಂಡೇಶ್ವರನಂತೆ ಎಲ್ಲವನ್ನು ಸಹಿಸಿಕೊಂಡು ಆ ಕುಟುಂಬಕ್ಕೆ ಸಹಾಯ ಮಾಡುವುದು ನಿಮ್ಮ ಹೆಗ್ಗಳಿಕೆ ಆಗುವುದು.

ಅನಿರೀಕ್ಷಿತ ವಿದ್ಯಮಾನಗಳಿಂದ ತಲ್ಲಣಗೊಳ್ಳುವಿರಿ. ಆದರೆ ನಿಮ್ಮ ನಿರಂತರ ಹೋರಾಟಕ್ಕೆ ಬೆಂಬಲ ದೊರೆಯುವುದು. ವಾಹನಗಳಲ್ಲಿ ಸಂಚರಿಸುವಾಗ ಎಚ್ಚರಿಕೆ ಅಗತ್ಯ. ಮಾತೃವರ್ಗದವರಿಗೆ ಪೀಡೆ ಉಂಟಾಗಲಿದೆ.

 

ಹಿರಿಯರೊಡನೆ ವಾದ-ವಿವಾದ ಮಾಡುವುದು ಸೂಕ್ತವಲ್ಲ. ಅವರೊಡನೆ ಸೌಜನ್ಯದಿಂದ ವರ್ತಿಸಿರಿ. ಹಣಕಾಸಿನ ವಿಷಯದಲ್ಲಿ ಜಾಗ್ರತೆ ಇರುವುದು ಒಳ್ಳೆಯದು. ಅನಾವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಿರಿ.

 

ಮಾತು ಮನ ಕೆಡಿಸಿತು ತೂತು ಒಲೆ ಕೆಡಿಸಿತು ಎನ್ನುವಂತೆ ಆವೇಶದ ಭರದಲ್ಲಿ ಮಾತನಾಡಿದ ತಪ್ಪಿಗಾಗಿ ಉತ್ತಮ ಸ್ನೇಹ ಬಾಂಧವ್ಯ ಕಳಚಿಕೊಳ್ಳುವುದು. ಹಾಗಾಗಿ ಮಾಡಿದ ತಪ್ಪನ್ನು ಮಾಡುವುದು ವಿಹಿತವಲ್ಲ. ತಿದ್ದಿಕೊಂಡು ನಡೆಯಿರಿ.

 

ಪುಸ್ತಕದ ಬದನೆ ಸಾಂಬಾರು ಮಾಡಲು ಬರುವುದಿಲ್ಲ. ಅಂತೆಯೆ ನಿಮ್ಮ ಬುದ್ಧಿ ಚಾತುರ‍್ಯವು ಈ ದಿನ ನಿಮ್ಮ ಉಪಯೋಗಕ್ಕೆ ಬರುವುದಿಲ್ಲ. ಈ ಬಗ್ಗೆ ಸೂಕ್ತ ವ್ಯಕ್ತಿಗಳಿಂದ ಸಲಹೆ ಪಡೆಯಿರಿ. ಆರ್ಥಿಕ ಸ್ಥಿತಿ ಆಶಾದಾಯಕವಾಗಿರುತ್ತದೆ.

 

ನಿಮ್ಮಲ್ಲಿನ ಉತ್ತಮ ಚಿಂತನಾಶಕ್ತಿ, ಪ್ರೌಢ ವಿಚಾರಗಳು ನಿಮ್ಮನ್ನು ಉತ್ತಮ ಜವಾಬ್ದಾರಿಗೆ ಒಯ್ಯುತ್ತವೆ. ಸಾಮಾಜಿಕವಾಗಿ ಗೌರವ ಆದರಗಳು ಉಂಟಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

 

ಹಿತಶತ್ರುಗಳು ನಿಮ್ಮ ಅಭ್ಯುದಯ ಕಂಡು ಮರುಗುವರು. ಗುರು ಹಿರಿಯರ ಆಶೀರ್ವಾದ ಪಡೆಯಿರಿ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ನಿಮ್ಮ ಹಳೆಯ ಸ್ನೇಹಿತನ ಆಗಮನದಿಂದ ಮನಸ್ಸಿಗೆ ಬಲ ಬರಲಿದೆ. ಅನವಶ್ಯಕ ಚಿಂತೆ ಮಾಡದಿರಿ. ಎಲ್ಲವೂ ಒಳಿತಾಗುವುದು. ಸ್ನೇಹಿತರು ನಿಮ್ಮ ಪರವಾಗಿ ಕೆಲಸ ಮಾಡುವರು.

 

 

ಮಾತಿನ ಮೂಲಕ ವಿರೋಧವನ್ನು ಕಟ್ಟಿಕೊಳ್ಳುವಿರಿ. ಆದಷ್ಟು ಈ ದಿನ ಶಾಂತಚಿತ್ತರಾಗಿದ್ದು ಕೆಲಸದಲ್ಲಿ ತೊಡಗಿಸಿಕೊಳ್ಳಿರಿ. ನಿರ್ವಂಚನೆಯಿಂದ ಮಾಡಿದ ಕೆಲಸಗಳು ಅಂತಿಮವಾಗಿ ಶುಭಫಲವನ್ನೆ ನೀಡುವವು.

ಈ ದಿನ ಪ್ರಯಾಣವು ಪ್ರಯಾಸವನ್ನುಂಟು ಮಾಡುವುದು. ಪ್ರಯಾಣದ ಸುಸ್ತು ಇಡಿ ದಿನ ನಿಮಗೆ ಮಂಕು ಕವಿಯುವಂತೆ ಮಾಡಿರುವುದು. ಆರ್ಥಿಕ ಸ್ಥಿತಿ ಸುಧಾರಣೆ ಆಗುವುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top