ಸಮಾಚಾರ

“ಪುರುಷರಿಗೊಂದು ನ್ಯಾಯ ಮಹಿಳೆಯರಿಗೊಂದು ನ್ಯಾಯಾನಾ?”- ಮತ್ತೆ ಮೋದಿ ಪತ್ನಿ ವಿಚಾರ ಕೆಣಕಿದ ರಮ್ಯಾ.

ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಪ್ರಭಾವ ಹೊಂದುವ ಮೂಲಕ ಆನ್‌ಲೈನ್ ವಿಭಾಗವನ್ನು ನಿರ್ವಹಿಸುತ್ತಿರುವಾಕೆ ರಮ್ಯಾ.. ಆಗ್ಗಾಗ್ಗೆ ಪ್ರಧಾನಿ ಮೋದಿಯನ್ನು ಅಣಕಿಸದೆ ಇದ್ದರೇ ರಮ್ಯಾಗೆ ನಿದ್ದೆಯೇ ಬರುವುದಿಲ್ಲವೇ? ಹೀಗೊಂದು ಪ್ರಶ್ನೆ ಒಂದು ಕಾಲದಲ್ಲಿ ಅವರನ್ನು ಆರಾಧಿಸುತ್ತಿದ್ದ ಅಭಿಮಾನಿಗಳನ್ನು ಕಾಡುತ್ತಿದ್ದರೆ ಅಚ್ಚರಿಯೇನಿಲ್ಲ.ಪದೇ ಪದೇ ಪ್ರಧಾನಿ ಮೋದಿಯವರನ್ನು ಕೆಣಕುವಂತ ಮತ್ತು ಅವರನ್ನು ಅಣಕಿಸುವಂತ ಅವಹೇಳನಕಾರಿ ಟ್ವೀಟ್ ಮಾಡುವುದೇ ತನ್ನ ಕಸುಬನ್ನಾಗಿಸಿಕೊಂಡಿರುವ ರಮ್ಯಾ ಇದೀಗ ಮತ್ತೊಮ್ಮೆ ಮೋದಿಯನ್ನು ನೇರಾ ನೇರಾವಾಗಿ ಅಣಕಿಸಿ ಸುದ್ದಿಯಾಗಿದ್ದಾರೆ..

ಯುಜಿಸಿ ಅನುದಾನಿತ ವಿಶ್ವವಿದ್ಯಾಲಯವೊಂದರಲ್ಲಿ’ಆದರ್ಶ ಸೊಸೆ’ ಎಂದ್ರೆ ಹೇಗೆ ಇರಬೇಕು? ಮತ್ತು ‘ಆದರ್ಶ ಸೊಸೆ’ ಆಗುವುದು ಹೇಗೆ? ಎಂಬ ವಿಚಾರವನ್ನು ಮಹಿಳಿಯರಿಗಾಗಿಯೇ ಕೋರ್ಸ್ ಅಳವಡಿಸಲಾಗುತ್ತಿದೆ.. ಈ ಸುದ್ದಿ ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಎಲ್ಲೆಡೆ ಪರ-ವಿರೋಧ ಚರ್ಚೆಗಳು ಶುರುವಾಗಿದ್ದವು.. ಈ ‘ಆದರ್ಶ ಸೊಸೆ’ ಸುದ್ದಿಯನ್ನೇ ಪ್ರಧಾನಿ ಮೋದಿಯವರ ವೈವಾಹಿಕ ವಿಚಾರಕ್ಕೆ ತಳುಕಿ ಹಾಕಿ ಯುಜಿಸಿ ವಿವಿಯ ‘ಆದರ್ಶ ಸೊಸೆ ಕೋರ್ಸ್’ ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

 

 

ಟ್ವಿಟರ್ ನಲ್ಲಿ ರಮ್ಯಾ ಮಾಡಿರುವ ಟ್ವೀಟ್:
“ಗಂಡಸರು ‘ಆದರ್ಶ ಪತಿ’ ಹೇಗೆ ಆಗುವುದು ಎಂಬುದನ್ನು ಮೊದಲು ಪ್ರಧಾನಿ ಮೋದಿಯವರಿಂದಲೇ ಒಂದು ಕೋರ್ಸ್ ಪ್ರಾರಂಭಿಸಿದರೆ ಹೇಗಿರುತ್ತೆ? ಒಂದು ವೇಳೆ ಇದು ಅವರ ವೈಯಕ್ತಿಕ ಆಯ್ಕೆ ಎಂದಾದರೆ, ಆ ನಿಯಮ ಮಹಿಳೆಯರಿಗೂ ಅನ್ವಯವಾಗುತ್ತದೆ. ಮಹಿಳೆಯರ ವೈಯಕ್ತಿಕ ಜೀವನದಲ್ಲಿ ಸರ್ಕಾರ ಮೂಗು ತೂರಿಸಬಾರದು., ಮಹಿಳೆಯರು ಹೇಗೆ ಇರಬೇಕು ಮತ್ತು ಹೇಗೆ ಇರಬಾರದು ಎಂದು ಯಾರೂ ಹೇಳಿಕೊಡಬೇಕಾಗಿಲ್ಲ,, ಯಾವ ಕೋರ್ಸ್’ನ ಅವಶ್ಯಕತೆಯೂ ಇಲ್ಲ” ಇದು ರಮ್ಯಾ ಅವರು ಮೋದಿಯ ವಯಕ್ತಿಕ ವಿಚಾರಕ್ಕೆ ತಳುಕಿ ಮಾಡಿರುವ ಟ್ವೀಟ್..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top