fbpx
ಸಿನಿಮಾ

ರಕ್ಷಿತ್ ಶೆಟ್ಟಿ ಜೊತೆ ಬ್ರೇಕಪ್ ಆದ್ಮೇಲೆ ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದು ಹೀಗೆ

ಸ್ಯಾಂಡಲ್ ವುಡ್’ನಲ್ಲಿ ಸದ್ಯದ ಹಾಟೆಸ್ಟ್ ಜೋಡಿ ಎಂತಲೇ ಹೆಸರು ಪಡೆದಿದ್ದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತು ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಜೋಡಿಯ ನಡುವಿನ ಸಂಭಂದ ಕೊನೆಗೂ ಮುರಿದುಬಿದ್ದಿದೆ.. ಹಾಗಂತ ಇದು ಯಾರೋ ಕೆಲಸಿಲ್ಲದ ಕಿಡಿಗೇಡಿಗಳು ಹಬ್ಬಿಸಿರುವ ಸುಳ್ಳು ಸುದ್ದಿ ಎಂದು ಭಾವಿಸುವಂತಿಲ್ಲ. ಯಾಕಂದರೆ ಈ ಸುದ್ದಿ ಬಂದಿರೋದು ಈ ಇಬ್ಬರ ಆಪ್ತ ವಲಯದಿಂದಲೇ.. ಕಿರಿಕ್‌ ಪಾರ್ಟಿಯ ಕರ್ಣ ಮತ್ತು ಸಾನ್ವಿ ವೃತ್ತಿ ಕಾರಣದಿಂದಾಗಿ ದೂರವಾಗಲು ನಿರ್ಧಾರ ಮಾಡಿದ್ದಾರೆ ಎಬ ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ..

 

 

ರಶ್ಮಿಕಾ ಮಂದಣ್ಣ ತಾಯಿ ಸುಮನ್ ಮಂದಣ್ಣ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. “ಕಳೆದೊಂದು ತಿಂಗಳಿನಿಂದ ನಾವು ತುಂಬಾ ಡಿಸ್ಟರ್ಬ್ ಆಗಿದ್ದೇವೆ. ಅವರವರ ಜೀವನ ಅವರವರ ಸ್ವಂತದ್ದು. ರಶ್ಮಿಕಾಗೆ ಅವಳ ಕೆರಿಯರ್ ಮುಖ್ಯ . ಕೆಲಸಕ್ಕೆ ಕಷ್ಟ ಮಾಡಿಕೊಂಡು ಏಕೆ ಇರಬೇಕು? ಖುಷಿಯಿಂದ ಬದುಕಬೇಕು,, ಇದು ನಮ್ಮ ಕುಟುಂಬದ ವಿಚಾರ. ಎರಡು ಕುಟುಂಬಗಳು ಕೂತು ಚರ್ಚೆ ಮಾಡಿ ನಿರ್ಧಾರ ಮಾಡಿದ್ದೇವೆ. ಇದರಲ್ಲಿ ತಲೆಹೋಗುವಂಥದ್ದು ಏನೂ ಇಲ್ಲ” ಎಂದು ಸುಮನ್ ಮಂದಣ್ಣ ಹೇಳಿದ್ದಾರೆ.

ಇದೀಗಾ ಈ ಬ್ರೇಕಪ್ ನಿಂದ ಕಂಗೆಟ್ಟಿದ್ದ ರಕ್ಷಿತ್ ಶೆಟ್ಟಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಒಂದು ಹೊರ ಬಿದ್ದಿದೆ , ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರ ಸೂಪರ್ ಹಿಟ್ ಸಂಭ್ರಮದ ನಂತ್ರ ಈ ಚಿತ್ರದ ನಿರ್ದೇಶಕ ಹೇಮಂತ್ ರಾವ್ , ನಾಯಕ ನಟ ರಕ್ಷಿತ್ ಶೆಟ್ಟಿ ಹಾಗು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತೆ ಒಂದಾಗಿದ್ದಾರೆ , ‘ತೆನಾಲಿ’ ಎನ್ನುವ ಹೊಸ ಕಥೆಯ ಮೂಲಕ ಪ್ರೇಕ್ಷಕರಿಗೆ ಮನೋರಂಜನೆ ನೀಡಲು ಈ ಟೀಮ್ ಸಜ್ಜಾಗಿದೆ .

ಇನ್ನು ಯಾರ ಫೋನ್ ಕರೆಗೂ ಸಿಗದ ರಕ್ಷಿತ್ ಈಗ ಎಲ್ಲ ರಾದ್ಧಾಂತಗಳಿಂದ ಸ್ವಲ್ಪ ಮನಶಾಂತಿ ಪಡೆಯಲು ವಿದೇಶ ಪ್ರವಾಸದ ಮೊರೆ ಹೋಗಿದ್ದಾರೆ , ತಮ್ಮ ಆಪ್ತ ಸ್ನೇಹಿತರಾದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ,ಖ್ಯಾತ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಜೊತೆಗೂಡಿ ಜಾಲಿಯಾಗಿ ಫುಕೆಟ್, ಪಟಾಯ ಕಡೆಗೆ ಪ್ರಯಾಣ ಬೆಳೆಸಿದ್ದಾರೆ .

ಕಿರಿಕ್ ಪಾರ್ಟಿ ನಂತರ 5 ಸಿನಿಮಾ ತನ್ನ ತೆಕ್ಕೆ ಹಾಕಿಕೊಂಡಿರುವ ರಶ್ಮಿಕಾಗೆ ಟಾಲಿವುಡ್ ನಿಂದ ಒಳ್ಳೊಳ್ಳೆ ಆಫರ್ ಗಳು ಬರುತ್ತಿವೆ ಸದ್ಯಕ್ಕೆ ಗೀತಗೋವಿಂದಂ ನಂತ್ರ ಟಾಲಿವುಡ್​​ನ ದೇವದಾಸ ಹಾಗೂ ಡಿಯರ್ ಕಾಮ್ರೇಡ್​ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇದರ ಜತೆಗೆ ಚಾಲೆಂಜಿಂಗ್​ ಸ್ಟಾರ್ ದರ್ಶನ್​ ಜತೆ ಯಜಮಾನ ಚಿತ್ರದಲ್ಲಿಯೂ ನಾಯಕಿಯಾಗಿದ್ದಾರೆ.

 

ನೆನ್ನೆ ಚಿತ್ರದ ಶೂಟಿಂಗ್ ಸೆಟ್ ನಲ್ಲಿ ನಿರ್ದೇಶಕ ಪಿ ಕುಮಾರ್​ ಹಾಗೂ ನಟಿ ತಾನ್ಯಾ ಹೊಪ್ ಜೊತೆ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ , ಗೋಲ ಐಸ್ ಸವಿಯುತ್ತ ಪೋಸ್ ಕೊಟ್ಟಿದ್ದಾರೆ ಚಿತ್ರತಂಡ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top