fbpx
ದೇವರು

ಶ್ರೀಕೃಷ್ಣನಿಗೂ ಕರ್ನಾಟಕಕ್ಕೂ ಇರುವ ಸಂಬಂಧ ಏನು ಗೊತ್ತಾ,ಮೈಸೂರು ಸಂಸ್ಥಾನ ನಿರ್ಮಾಣಕ್ಕೆ ಕಾರಣರಾದವರು ಯಾರು ಗೊತ್ತಾ,ನೀವೇ ನೋಡಿ

ಶ್ರೀಕೃಷ್ಣನಿಗೂ ನಮ್ಮ ಕರ್ನಾಟಕ ಕರ್ನಾಟಕಕ್ಕೂ ಸಂಬಂಧ ಇದೆ.ಸಾಕ್ಷಾತ್ ಶ್ರೀ ಕೃಷ್ಣನೇ ಕರ್ನಾಟಕಕ್ಕೆ ಬಂದಿದ್ದ. ಮೈಸೂರು ಸಂಸ್ಥಾನಕ್ಕೂ ಶ್ರೀ ಕೃಷ್ಣನಿಗೂ ,ಯದುವಂಶದವರಿಗೂ ಇದೆ ಸಂಬಂಧ. ಶ್ರೀ ಕೃಷ್ಣನಿಂದಾಗಿಯೇ ಮೈಸೂರು ಸಂಸ್ಥಾನ ನಿರ್ಮಾಣ ಗೊಂಡಿತ್ತು.
ಶ್ರೀಕೃಷ್ಣ ಕರ್ನಾಟಕಕ್ಕೆ ಬಂದಿದ್ದನಂತೆ. ಚೆಲುವನಾರಾಯಣ ಕೃಷ್ಣನ ಆರಾಧ್ಯದೈವ. ಶ್ರೀ ಕೃಷ್ಣನ ಬಳಿ ಇತ್ತು ಚೆಲುವನಾರಾಯಣನ ಉತ್ಸವ ಮೂರ್ತಿ. ಶ್ರೀಕೃಷ್ಣ ಪರಮಾತ್ಮ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ಭಗವದ್ಗೀತೆಯನ್ನು ಬೋಧಿಸಿದವರು. ಜಗದೊಡೆಯ ನಡೆದಾಡಿದ ಜಾಗ ಶ್ರೀ ಕೃಷ್ಣ ಪರಮಾತ್ಮ ಕರ್ನಾಟಕದಲ್ಲೂ ಹೆಜ್ಜೆ ಇಟ್ಟಿದ್ದ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ ನಮ್ಮ ಎಲ್ಲಾ ಕುತೂಹಲಗಳಿಗೆ ನಮ್ಮ ಪುರಾಣಗಳು ಉತ್ತರ ನೀಡುತ್ತವೆ.

ಮಹಾಭಾರತದ ಯುದ್ಧ ಪ್ರಾರಂಭವಾಗುವ ಸಂದರ್ಭದಲ್ಲಿ ಶ್ರೀಕೃಷ್ಣ ಪರಮಾತ್ಮ ಒಂದು ಉಪಾಯ ಮಾಡುತ್ತಾನೆ . ಯಾಕೆಂದರೆ ಬಲರಾಮ, ಕೌರವರ ಭಾಗದಲ್ಲಿದ್ದ .ಆದ್ದರಿಂದ ದುರ್ಯೋಧನನ ಪಕ್ಷಕ್ಕೆ ನಿಂತು ಯುದ್ಧ ಮಾಡುತ್ತಿದ್ದ. ಇದನ್ನು ತಪ್ಪಿಸಲು ಶ್ರೀಕೃಷ್ಣ ಪರಮಾತ್ಮ ಬಲರಾಮನನ್ನೇ ಯುದ್ಧದಲ್ಲಿ ಪಾಲ್ಗೊಳ್ಳದಂತೆ ಮಾಡಲು ಒಂದು ಉಪಾಯ ಮಾಡುತ್ತಾನೆ.
ಬಲರಾಮನಿಂದ ಗೋ ಹತ್ಯೆ ಮಾಡಿಸುತ್ತಾನೆ. ಆದ್ದರಿಂದ ಬಲರಾಮನ ಆ ದೋಷ ಪರಿಹಾರಕ್ಕೆ ಕೃಷ್ಣ ಪರಮಾತ್ಮ ಬಲರಾಮನನ್ನು ತೀರ್ಥಯಾತ್ರೆಗೆ ಕಳುಹಿಸಿದನಂತೆ . ಆದ್ದರಿಂದ ಬಲರಾಮ ತಿಂಗಳು ಗಟ್ಟಲೆ ತೀರ್ಥಯಾತ್ರೆ ಮಾಡಲು ಹೋಗುತ್ತಾನೆ. ಅಷ್ಟರಲ್ಲಾಗಲೇ 18 ದಿನಗಳ ಕಾಲ ಮಹಾಯುದ್ಧ ನಡೆದು ಹೋಗಿರುತ್ತದೆ. ಎಲ್ಲವೂ ಸರ್ವನಾಶವಾಗಿ ಬಿಟ್ಟಿರುತ್ತದೆ.

 

 

 

ಹೀಗೆ ಬಲರಾಮ ತೀರ್ಥಯಾತ್ರೆ ಮಾಡುವ ಸಂದರ್ಭದಲ್ಲಿ ದಕ್ಷಿಣ ಭಾಗಕ್ಕೂ ಬಂದಿದ್ದನಂತೆ. ಆ ಸಂದರ್ಭದಲ್ಲಿ ಚೆಲುವನಾರಾಯಣನು ಇರುವ ಮೇಲುಕೋಟೆಯ ದರ್ಶನ ಪಡೆಯುತ್ತಿದ್ದಂತೆ. ಚೆಲುವನಾರಾಯಣನ ಮೂರ್ತಿಯನ್ನು ನೋಡಿದಾಗ ಅದು ದ್ವಾರಕೆಯಲ್ಲಿರುವ ಚೆಲುವನಾರಾಯಣನ ಉತ್ಸವ ಮೂರ್ತಿಗೆ ಹೋಲಿಕೆಯಾಗುತ್ತದೆ .ಚೆಲುವನಾರಾಯಣನ ದರ್ಶನ ಮಾಡಿ ಆಶ್ಚರ್ಯ ಚಕಿತಗೊಂಡ ಬಲರಾಮ ಶ್ರೀಕೃಷ್ಣನಿಗೆ ಈ ವಿಷಯ ಹೇಳುತ್ತಾನೆ.
ಬಲರಾಮನ ಮಾತು ಕೇಳಿದ ಶ್ರೀಕೃಷ್ಣನು ಮೇಲುಕೋಟೆಗೆ ಬಂದು ಚೆಲುವನಾರಾಯಣನ ದರ್ಶನ ಮಾಡಿದ್ದನಂತೆ. ಈ ಸಂದರ್ಭದಲ್ಲಿ ತನ್ನ ಬಳಿ ಇದ್ದ ಚೆಲುವ ನಾರಾಯಣನ ಉತ್ಸವಮೂರ್ತಿಯನ್ನು ಮೇಲುಕೋಟೆಗೆ ತಂದುಕೊಟ್ಟಿದ್ದ. ಅಷ್ಟೇ ಅಲ್ಲ ಈಗಲೂ ಇಲ್ಲಿರುವ ವೈರಮುಡಿಯನ್ನು ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನೇ ನೀಡಿದ್ದ ಎನ್ನಲಾಗುತ್ತದೆ. ಯದುವಂಶದ ಶ್ರೀ ಕೃಷ್ಣ ಮೇಲುಕೋಟೆಗೆ ಬಂದಿದ್ದರಿಂದ ಈ ಕ್ಷೇತ್ರಕ್ಕೆ ಯಾದವಗಿರಿ ಎನ್ನುವ ಹೆಸರು ಬಂದಿದೆ ಎನ್ನಲಾಗುತ್ತದೆ. ಅಷ್ಟೇ ಅಲ್ಲ ಶ್ರೀ ಕೃಷ್ಣ ಚೆಲುವನಾರಾಯಣನ್ನು ಪೂಜಿಸಿದ್ದ, ಈ ಬಗ್ಗೆ ನಾರದ ಪುರಾಣದಲ್ಲಿ ಹಾಗೂ ಭಾಗವತ ಪುರಾಣದಲ್ಲಿ ಉಲ್ಲೇಖವಿದೆ.

ಕುತೂಹಲಕಾರಿ ಸಂಗತಿ ಎಂದರೆ ಮೈಸೂರು ಸಂಸ್ಥಾನವನ್ನು ಕಟ್ಟಿದ್ದು ಯದುರಾಯ ಮತ್ತು ಕೃಷ್ಣರಾಯ. ಇವರಿಬ್ಬರೂ ಉತ್ತರ ಭಾರತದ ದ್ವಾರಕೆಯಿಂದ ಬಂದಿದ್ದರು. ಇವರು ಮೈಸೂರಿಗೆ ಬರಲು ಕಾರಣ ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ. ಯಾಕೆಂದರೆ ಚೆಲುವನಾರಾಯಣನ್ನು ಶ್ರೀಕೃಷ್ಣ ಪರಮಾತ್ಮ ಪೂಜೆ ಮಾಡುತ್ತಿದ್ದ ಎನ್ನುತ್ತವೆ ಪುರಾಣಗಳು.
ಶ್ರೀಕೃಷ್ಣನಿಂದ ಪೂಜಿಸಲ್ಪಡುತ್ತಿದ್ದ ಚೆಲುವನಾರಾಯಣ ಸ್ವಾಮಿಯ ದರ್ಶನ ಪಡೆಯಲು ಯದುರಾಯರು ಮತ್ತು ಕೃಷ್ಣರಾಯರು ಮೈಸೂರು ಕಡೆಗೆ ಆಗಮಿಸಿದ್ದರಂತೆ. ಚೆಲುವ ನಾರಾಯಣನ ಆಶೀರ್ವಾದ ಪಡೆದ ಬಳಿಕವೇ ಅವರು ಮೈಸೂರು ಸಂಸ್ಥಾನವನ್ನು ಕಟ್ಟಿದ್ದಾರೆ ಎಂಬುದಾಗಿ ಇತಿಹಾಸದಲ್ಲಿ ಉಲ್ಲೇಖವಾಗಿದೆ.

ಸರ್ವಾಂತರ್ಯಾಮಿಯಾದ ಶ್ರೀಕೃಷ್ಣ ಪರಮಾತ್ಮನಿಂದಲೇ ಈ ಮೈಸೂರು ಸಂಸ್ಥಾನ ಹುಟ್ಟಿದ್ದು ಎನ್ನುವ ಸಂಗತಿ ನಮ್ಮ ಕನ್ನಡ ನಾಡಿಗೆ ಹೆಮ್ಮೆ ತರುವಂತಹ ವಿಷಯ. ಶ್ರೀಕೃಷ್ಣ ಪರಮಾತ್ಮನೇ ಪೂಜಿಸಿದ ಚೆಲುವ ನಾರಾಯಣಸ್ವಾಮಿ ಇಂದಿಗೂ ಎಲ್ಲರನ್ನು ಹರಸುತ್ತಿದ್ದಾನೆ. ಚೆಲುವನಾರಾಯಣನ ದರ್ಶನ ಮಾಡಿದರೆ ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನ ದರ್ಶನ ಮಾಡಿದ ಪುಣ್ಯ ಪ್ರಾಪ್ತಿಯಾಗುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top