ಸಮಾಚಾರ

ಮಗಳ ಈ ಆರ್ಡರ್ ರೋರಿಂಗ್ ಸ್ಟಾರ್ ಶ್ರೀ ಮುರುಳಿಗೆ ಖುಷಿ ಕೊಟ್ಟಿತಂತೆ

ಫೇಸ್ ಬುಕ್ ಪೇಜಲ್ಲಿ ಬರೋಬ್ಬರಿ ಒಂದು ಮಿಲಿಯನ್’ಗೂ ಹೆಚ್ಚು ಲೈಕ್ಸ್ ಪಡೆದು ಶ್ರೀ ಮುರಳಿ ದಾಖಲೆ ನಿರ್ಮಿಸಿದರು ಪ್ರತಿಭಾವಂತ ಎನಿಸಿಕೊಂಡರೂ ಶ್ರೀಮುರಳಿ ಪಟ್ಟ ಪಾಡು ಅಷ್ಟಿಷ್ಟಲ್ಲ. ಸಂದರ್ಭದಲ್ಲಿ ಮುರಳಿ ನಡೆದು ಬಂದ ಕಲ್ಲು-ಮುಳ್ಳು ಹಾದಿಯ ಕುರಿತ ಸಣ್ಣದೊಂದು ಇಣುಕುನೋಟ ಇಲ್ಲಿದೆ.

ಅಖಂಡ ಇಪ್ಪತ್ತು ವರ್ಷಗಳು. ಹದಿನೆಂಟು ಸಿನಿಮಾಗಳ ದಯನೀಯ ಸೋಲು. ಕಳೆಗುಂದಿದ ಸ್ಟಾರ್‌ಗಿರಿ ಅಬ್ಬಬ್ಬ ಎಂಥಾ ನಟನನ್ನಾದರೂ ಮಾನಸಿಕವಾಗಿ ಜರ್ಝರಿತಗೊಳಿಸುವ ವಿಚಾರವದು. ಎಸ್ ನಾರಾಯಣ್ ನಿರ್ದೇಶನದ ಚಂದ್ರಚಕೋರಿ ಸಿನೆಮಾದ ಮೂಲಕ ನಾಯಕನಟರಾದವರು ಮುರಳಿ. ಆ ಸಿನಿಮಾ ಬರೋಬ್ಬರಿ ಒಂದು ವರ್ಷ ಓಡಿ ದಾಖಲೆ ನಿರ್ಮಿಸಿತ್ತು. ಆ ಚಿತ್ರವನ್ನು ನಿರ್ಮಿಸಿದ್ದ ಹೆಚ್.ಡಿ. ಕುಮಾರ ಸ್ವಾಮಿಯವರಿಗೆ ದೊಡ್ಡ ಮಟ್ಟದ ಇಡುಗಂಟನ್ನೂ ತಂದುಕೊಟ್ಟಿತ್ತು. ಮೊದಲ ಸಿನೆಮಾದಲ್ಲೇ ಇಂಥ ಯಶಸ್ಸು ಕಂಡ ಮುರಳಿಯ ಬಗ್ಗೆ ಚಿತ್ರರಂಗ ಮತ್ತು ಪ್ರೇಕ್ಷಕ ವಲಯದಲ್ಲಿ ಸಾಕಷ್ಟು ನಿರೀಕ್ಷೆಗಳು ಜನ್ಮತಳೆದಿದ್ವು. ಮುರಳಿಯ ಎರಡನೇ ಚಿತ್ರ ‘ಕಂಠಿ’ ಕೂಡಾ ಹೊಸದೊಂದು ಕಥಾವಸ್ತುವನ್ನು ಒಳಗೊಂಡು ತಯಾರಾಗಿತ್ತು. ಆದರೆ ಕಮರ್ಷಿಯಲ್ಲಾಗಿ ತೀರಾ ಹೇಳಿಕೊಳ್ಳುವಂಥಾ ಸದ್ದು ಮಾಡಲಿಲ್ಲ. ಆಮೇಲೆ ಶುರುವಾಯಿತು ನೋಡಿ ಮುರಳಿ ಪಾಲಿನ ಸಾಡೇಸಾತ್!
ಮಾಡಿದ ಸಿನಿಮಾಗಳಲ್ಲಿ ಒಂದಷ್ಟು ಸಿನಿಮಾಗಳು ನೋಡುವಂತಿದ್ದರೂ ಅದ್ಯಾಕೋ ಗುರುತಿಸುವಂಥ ಗೆಲುವು ಸಾಧಿಸಲಿಲ್ಲ. ಕಡೆಗೆ ರೋಸಿಹೋದ ಮುರಳಿ ತನ್ನ ಹೆಸರಿನೊಂದಿಗೆ ಶ್ರೀ ಅನ್ನೋ ಹೆಸರನ್ನು ಸೇರಿಸಿಕೊಂಡರು. ಆದರೂ ಅದೃಷ್ಟವೆಂಬುದು ಕೈಹಿಡಿಯಲಿಲ್ಲ. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಮರಳಿ ಯತ್ನ ಮಾಡುತ್ತಲೇ ಬಂದರು ಮುರಳಿ. ಇಷ್ಟೊಂದು ಸುದೀರ್ಘ ಸೋಲು, ಬೇಸರಗಳಿಂದ ಬಸವಳಿದಿದ್ದ ಹೀರೋ ಒಬ್ಬನಿಗೆ ದೀಢೀರ್ ಅಂತಾ ಮತ್ತೊಮ್ಮೆ ಯಶಸ್ಸು ಕೈಗೆಟುಕಿಬಿಟ್ಟರೆ!

 

 

 

ಹೌದು. ಶ್ರೀ ಮುರಳಿಯ ವಿಚಾರದಲ್ಲಿ ಆಗಿದ್ದೂ ಅದೇ. ಎರಡು ವರ್ಷದ ಹಿಂದೆ ತೆರೆಗೆ ಬಂದ ಉಗ್ರಂ ಅನ್ನೋ ಸಿನಿಮಾ ಇಡೀ ದಕ್ಷಿಣ ಭಾರತದಲ್ಲೇ ದೊಡ್ಡ ಸೌಂಡ್ ಮಾಡಿತ್ತು. ಒಂದೆಡೆ ಹದಿನೆಂಟು ಸಿನಿಮಾಗಳ ಭೀಕರ ಸೋಲು, ‘ಇನ್ನು ಇವನ ಕಥೆ ಮುಗೀತು.’ ‘ಯಾಕಾದ್ರೂ ಇವನನ್ನ ಹೀರೋ ಆಗಿ ಹಾಕ್ಕಂತಾರೋ’.. ಎಂಬಿತ್ಯಾದಿ ಲೇವಡಿ ಮಾತುಗಳು, ಕಾಲೆಳೆಯುವವರ ಕಾಟದಿಂದ ಮುಕ್ತವಾದ ಖುಷಿ… ಇನ್ನೊಂದೆಡೆ ‘ಅಂತೂ ಒಂದು ಗೆಲುವು ಪ್ರಾಪ್ತವಾಯ್ತು,ಆ ಗೆಲುವಿನ ನಂತರ ಯಾವತ್ತು ಹಿಂದೆ ನೋಡಲೇ ಇಲ್ಲ ಮುರಳಿ ,ಅಂದ್ರೆ ಈಗ ಸಿನಿಮಾ ಗಳ ಆಯ್ಕೆಯಲ್ಲಿ ಸ್ವಲ್ಪ ಜಾಗರೂಕರಾಗಿದ್ದಾರೆ,

ಶ್ರೀ ಮುರಳಿ ಅವರ ಅಭಿಮಾನಿಗಳಿಗೆ ಹೆಚ್ಚು ಹತ್ತಿರ ವಿರುವುದು ಸಾಮಾಜಿಕ ಜಾಲತಾಣ ಗಳ ಮೂಲಕ ಅವರ ಜೀವನ ದ ವಿಷಯಗಳನ್ನು ಇನ್ಸ್ಟಾ ಗ್ರಾಂ ಮೂಲಕ ಅವರ ಅಭಿಮಾನಿಗಳ ಜೊತೆ ಶೇರ್ ಮಾಡುತ್ತಾ ಇರುತ್ತಾರೆ ಮುರಳಿ .ಈ ಸಲ ಅವರು ಶೇರ್ ಮಾಡಿರುವ ವಿಷ್ಯ ಅವರ ಮುದ್ದು ಮಗಳ ಕುರಿತು ,ಶ್ರೀ ಮುರಳಿ ಮಗಳು ಮುರಳಿಗೆ ಒಂದು ಆಫರ್ ಕೊಟ್ಟಿದ್ದಾಳೆ ಅದು ಆಫರ್ ಅಂಬೇಕೋ ಅಥವಾ ಆರ್ಡರ್ ಅನ್ಬೇಕೋ ಗೊತ್ತಿಲ್ಲ ,ಅಂದ್ರೆ ನಮ್ ರೋರಿಂಗ್ ಸ್ಟಾರ್ ಮಾತ್ರ ಈ ವಿಷ್ಯಕ್ಕೆ ತುಂಬಾ ಖುಷಿಯಾಗಿದ್ದಾರೆ ,ಮುರಳಿ ಮಗಳ ಹೆಸರು ಅತೀವಾ ,ಮೊನ್ನೆ ಒಂದುದಿನ ತನ್ನ ಅಪ್ಪನ ಬಳಿ ಬಂದು ಅತೀವಾ ಶಾಪಿಂಗ್​ ಕರೆದು ಕೊಂಡು ಹೋಗುವಂತೆ ಕೇಳಿದ್ದಾಳೆ ಆಮೇಲೆ ಅಪ್ಪನ ಜೊತೆ ಶಾಪಿಂಗ್ ಗೆ ಹೋಗಿ ಸಿಕ್ಕ ಸಿಕ್ಕಿದ್ದನ್ನೆಲ್ಲಾ ಕೊಂಡು ತಂದಿಲ್ಲ ಅತೀವಾ ತಾನು ಮುಂಚೆ ಅಂದುಕೊಂಡಿದ್ದ ಹಾಗೇ ಉಂಗುರುವನ್ನಷ್ಟೆ ಅಪ್ಪನಿಂದ ಕೊಡಿಸಿಕೊಂಡಿದಾಳೆ,ಮಗಳನ್ನು ಶಾಪಿಂಗ್ಗೆ ಕರೆದುಕೊಂಡು ಹೋಗಿದು ಮುರಳಿಗೆ ಒಂದು ಖುಷಿ ಅಂದ್ರೆ ಬರೀ ಒಂದು ಉಂಗುರ ಮಾತ್ರ ಖರೀದಿಸಿದ ಮಗಳ ಸರಳತೆಯನ್ನು ಡಬಲ್ ​​​​​​​ ಖುಷಿ ಅಂತೇ .

 

 

 

ಮಗಳು ಪಪ್ಪ ಶಾಪಿಂಗ್​ಗೆ ಹೋಗ್ಬೇಕು ಅಂತ ಆರ್ಡರ್ ಮಾಡಿ ಹೇಳಿದ್ದು, ರೋರಿಂಗ್​ ಸ್ಟಾರ್​​​​ಗೆ ಸ್ವರ್ಗನೇ ಕೈಗೆ ಸಿಕ್ಕಷ್ಟು ಸಂತೋಷ ಆಗಿದೆ .ಈ ವಿಷಯವನ್ನು ರೋರಿಂಗ್ ಸ್ಟಾರ್ ಶ್ರೀ ಮುರಳಿ ತಾವೇ ತಮ್ಮ ಇನ್ಸ್ಟಾ ಗ್ರಾಂ ನಲ್ಲಿ ಮಗಳ ಜೊತೆಗಿನ ಫೋಟೋ ಶೇರ್ ಮಾಡುವ ಮೂಲಕ ತಿಳಿಸಿದ್ದಾರೆ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top