fbpx
ಮನೋರಂಜನೆ

ಡಾ.ವಿಷ್ಣು ರಾಷ್ಟ್ರೀಯ ಉತ್ಸವಕ್ಕಾಗಿ ಕಿಚ್ಚ ಸುದೀಪ್ ಹಾಡಿರುವ ಹಾಡನ್ನ ಕೇಳಿದ್ರಾ?

ಸಾಹಸಸಿಂಹನ ಹುಟ್ಟುಹಬ್ಬದ ಅಂಗವಾಗಿ ನಡೆಯಲಿರುವ ಡಾ.ವಿಷ್ಣುವರ್ಧನ ರಾಷ್ಟ್ರೀಯ ಉತ್ಸವದ ಗೀತೆಯನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಡಿದ್ದು ಆ ಹಾಡು ಬಿಡುಗಡೆಯಾಗಿದೆ. ಸ್ವತಃ ದಾದಾರ ಅಭಿಮಾನಿಯಾಗಿರುವ ಕಿಚ್ಚ ತಮ್ಮ ನೆಚ್ಚಿನ ನಟನ ಉತ್ಸವಗೀತೆಗೆ ಧ್ವನಿಯಾಗುತ್ತಿರುವುದರಿಂದ ಸಹಜವಾಗಿ ಖುಷಿಗೊಂಡಿದ್ದಾರಂತೆ.. ಕೆ. ಕಲ್ಯಾಣ್ ಅವರು ಸಾಹಿತ್ಯ ಬರೆದು ಸಂಗೀತ ಸಂಯೋಜಿಸಿರುವ ಈ ಹಾಡಿನಲ್ಲಿ ವಿಷ್ಣುವಿನ ಗುಣಗಾನ ಮಾಡಲಾಗಿದೆ..

ಉತ್ಸವ ಗೀತೆಯನ್ನ ಇಲ್ಲಿ ಕೇಳಿ.👇👇👇

ಕಳೆದ ವರ್ಷ ದೆಹಲಿಯಲ್ಲಿ ಅದ್ಧೂರಿಯಾಗಿ ನಡೆದಿದ್ದ ಈ ಉತ್ಸವ ಈಗ 2018ನೇ ಸಾಲಿನಲ್ಲಿ ಮತ್ತೆ ನಡೆಯಲಿದೆ. ಸೆಪ್ಟೆಂಬರ್ 16, 17 ಹಾಗೂ 18 ರಂದು ಮೂರು ದಿನಗಳ ಕಾಲ ‘ಡಾ.ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ’ ನಡೆಯಲಿದ್ದು, ಈ ಬಾರಿ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.. ‘ಡಾ ವಿಷ್ಣು ಸೇನಾ ಸಮಿತಿ’ಯ ರಾಜ್ಯಾಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರ ನೇತೃತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮ, ಬೆಂಗಳೂರಿನ ಕುವೆಂಪು ಕಲಾಕ್ಷೇತ್ರದಲ್ಲಿ ಜರುಗಲಿದೆ… ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಅವರು ಚಾಲನೆ ಕೊಡಲಿದ್ದಾರೆ.

 

ಈ ವರ್ಷದಿಂದ ಡಾ. ವಿಷ್ಣು ಜಯಂತಿಯನ್ನು “ರಾಷ್ಟ್ರೀಯ ಆದರ್ಶ ದಿನ’ವಾಗಿ ಆಚರಿಸಲಾಗುತ್ತಿದೆ. ಥಿಂಕ್‌ ಗುಡ್‌ ಡೂ ಗುಡ್‌ ಎಂಬ ಉದ್ದೇಶದ ಅಡಿಯಲ್ಲಿ ಈ ಆದರ್ಶ ದಿನವನ್ನು ಆಚರಿಸಲಾಗುವುದು.

ಡಾ ವಿಷ್ಣುವರ್ಧನ್ ಅವರ ಜೊತೆಗೆ ನಟಿಸಿದ್ದ ನಟಿಯರು ಮತ್ತು ಯುವ ನಟರನ್ನು ಒಳಗೊಂಡ ವಿಚಾರ ಸಂಕಿರಣ ಉತ್ಸವದಲ್ಲಿ ನಡೆಯಲಿದ್ದು ‘ವೀರಪ್ಪನಾಯ್ಕ’ ಸಿನಿಮಾ ಪುತ್ಥಳಿಯನ್ನು ಅಂದು ಅನಾವರಣ ಮಾಡಲಿದ್ದಾರೆ. ಕಾರ್ಯಕ್ರಮದ 3 ದಿನ ಪ್ರತಿ ದಿನ ಸಂಜೆ ಡಾ. ವಿಷ್ಣುವರ್ಧನ್ ಅವರ ಗೀತೆಗಳ ಸಂಗೀತ ಸಂಜೆಯನ್ನು ಹಮ್ಮಿಕೊಳ್ಳಲಾಗಿದೆ. ಮೊದಲನೇ ದಿನ ವಿಷ್ಣು ಯುಗಳ ಗೀತೆಗಳು, 2ನೇ ದಿನ ಕನ್ನಡಪರ ಗೀತೆಗಳು ಮತ್ತು ಮೂರನೇ ದಿನ ವಿಷ್ಣು ಅಭಿಮಾನದ ಗೀತೆಗಳನ್ನು ಪ್ರಸ್ತುತ ಪಡಿಸಲಾಗುವುದು. ಈ ಸಂಗೀತ ಸಂಜೆಯಲ್ಲಿ ರಾಜ್ಯದ ಖ್ಯಾತ ಗಾಯಕರು ಭಾಗಿಯಾಗಲಿದ್ದಾರೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top